ಈ ವಾರ ಥಿಯೇಟರ್‌ಗಳಲ್ಲಿ ಕನ್ನಡ ಸಿನಿಮಾಗಳದ್ದೆ ಅಬ್ಬರ! ಯಾವೆಲ್ಲಾ ಸಿನಿಮಾ ರಿಲೀಸ್‌ ಆಗಲಿದೆ ಗೊತ್ತಾ..?

Kannada Cinema Release: ಈ ವಾರ ಕನ್ನಡದ ಸಿನಿಮಾಗಳು ಥಿಯೀಟರ್‌ಗಳ್ಲಲಿ ಅಬ್ಬರಿಸಲಿವೆ. ಯಾವ ಯಾವ ಸಿನಿಮಾಗಳು ರಿಲೀಸ್‌ ಆಗಲಿವೆ ಗೊತ್ತಾ? ಈ ಸ್ಟೋರಿ ಓದಿ.

Written by - Zee Kannada News Desk | Last Updated : Jun 6, 2024, 01:43 PM IST
  • ಕನ್ನಡ ಸಿನಿಮಾಗಳಿಗೆ ಅಬ್ಬರಿಸೋ ಟೈಮ್‌ ಕೂಡಿ ಬಂದಿದೆ.
  • ಜೂ. 14ರಂದು ಸಾಲು ಸಾಲು ಕನ್ನಡ ಸಿನಿಮಾಗಳು ತೆರೆ ಕಾಣಲು ರೆಡಿಯಾಗಿದೆ.
  • ನಾಲ್ಕು ಸಿನಿಮಾಗಳು ಜೂ. 14ರಂದು ತೆರೆ ಕಾಣಲು ಸಜ್ಜಾಗಿವೆ.
ಈ ವಾರ ಥಿಯೇಟರ್‌ಗಳಲ್ಲಿ ಕನ್ನಡ ಸಿನಿಮಾಗಳದ್ದೆ ಅಬ್ಬರ! ಯಾವೆಲ್ಲಾ ಸಿನಿಮಾ ರಿಲೀಸ್‌ ಆಗಲಿದೆ ಗೊತ್ತಾ..? title=

Cinema Release this week: ಚುಣಾವಣೆ ಐಪಿಲ್‌ ಕಾರಣಗಳಿಂದ ಅದೆಷ್ಟೋ ಸಿನಿಮಾಗಳು ರಿಲೀಸ್‌ ಕಾಣದೆ ನಿಂತು ಹೋಗಿದ್ದವು. ಇದೀಗ ಆ ಎಲ್ಲಾ ಸಿನಿಮಾಗಳಿಗೂ ತೆರೆ ಕಾಣುವ ಸಮಯ ಕೂಡಿ ಬಂದಿದೆ. ಹೌದು, ಈ ವರ್ಷ ಪ್ರಾರಂಭವಾದಾಗಿನಿಂದ ಇಲ್ಲಿಯ ವರೆಗೆ ಕನ್ನಡ ಚಿತ್ರ ರಂಗದಲ್ಲಿ ಯಾವುದೇ ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ. ವರ್ಷದ ಮಧ್ಯದಲ್ಲಿ ಇದೀಗ ಕನ್ನಡ ಸಿನಿಮಾಗಳಿಗೆ ಅಬ್ಬರಿಸೋ ಟೈಮ್‌ ಕೂಡಿ ಬಂದಿದೆ.

ಸ್ಟಾರ್‌ ನಟರ ಸಿನಿಮಾಗಳ ಡೇಟ್ಸ್‌ ಒಂದಾದ ಮೇಲೆ ಒಂದಂತೆ ಅನೌನ್ಸ್‌ ಆಗಿದೆ. ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ನಟರ ಸಿನಿಮಾ ನೋಡಲು ಕಾತುರದಿಂದ ಕಾಯ್ತಾ ಇದ್ದಾರೆ. ಇದರ ಮಧ್ಯೆ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಕಾದಿದೆ. ಅದು ಏನು ಅಂತೀರಾ. ಜೂ. 14ರಂದು ಸಾಲು ಸಾಲು ಕನ್ನಡ ಸಿನಿಮಾಗಳು ತೆರೆ ಕಾಣಲು ರೆಡಿಯಾಗಿದೆ. ಒಂದಲ್ಲ ಎರಡಲ್ಲ ನಾಲ್ಕು ಸಿನಿಮಾಗಳು ಜೂ. 14ರಂದು ತೆರೆ ಕಾಣಲು ಸಜ್ಜಾಗಿವೆ. ಹಾಗಾದರೆ ಯಾವುದು ಆ ಸಿನಿಮಾ ? ಮುಂದೆ ಓದಿ.

ಇದನ್ನೂ ಓದಿ:  ಬಹುನಿರೀಕ್ಷಿತ 'ಕೋಟಿ' ಸಿನಿಮಾದ ಟ್ರೇಲರ್ ಬಿಡುಗಡೆ : ಜೂನ್ 14ಕ್ಕೆ ತೆರೆ ಬರಲಿದೆ ಸಿನಿಮಾ

ಕೋಟಿ:
ಡಾಲಿ ಧನಂಜಯ್‌ ಅಭಿನಯದ 'ಕೋಟಿ' ಸಿನಿಮಾ ತನ್ನ ಟ್ರೇಲರ್‌ನ ಮೂಲಕ ಭಾರಿ ಸದ್ದು ಮಾಡ್ತಿದೆ. ಸಿನಿಮಾ ಪ್ರಚಾರ ಕೂಡ ಭರದಿಂದ ಸಾಗಿದ್ದು, ಥಿಯೇಟರ್‌ನಲ್ಲಿ ಕಮಾಲ್‌ ಮಾಡಲು ಸಿನಿಮಾ ಸಜ್ಜಾಗಿದೆ. 
ಈ ಚಿತ್ರವನ್ನ ಪರಮ್‌ ನಿರ್ದೇಶನ ಮಾಡಿದ್ದು. ಕನ್ನಡ ಸಿನಿಮಾ ಒಂದಕ್ಕೆ ಇದೇ ಮೊದಲ ಭಾರಿಗೆ ಜಿಯೋ ಸ್ಟುಡಿಯೋಸ್ ಬಂಡವಾಳ ಹೂಡಿದ್ದಾರೆ.

ಶಿವಮ್ಮ:
 ರಿಷಬ್ ಶೆಟ್ಟಿ ಫಿಲಂಸ್ ಮೂಲಕ ನಿರ್ಮಾಣಗೊಂಡಿರುವ  'ಶಿವಮ್ಮ' ಚಿತ್ರ ಇದೇ 14 ಕ್ಕೆ ತೆರೆ ಕಾಣಲು ಮುಹೂರ್ತ ಫಿಕ್ಸ್‌ ಆಗಿದೆ. ಈಗಾಗಲೇ 17 ಕ್ಕು ಹೆಚ್ಚು ಅಂತರಾಷ್ಟೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಹಲವಾರು ಪ್ರಶಸ್ತಿಗಳನ್ನ ಬಾಚಿಕೊಂಡಿರುವ 'ಶಿವಮ್ಮ' ಚಿತ್ರ ಥಿಯೇಟರ್‌ನಲ್ಲಿ ಪ್ರೇಕ್ಷಕರ ಮನ ಗೆಲ್ಲಲು ಸಿದ್ಧವಾಗಿದೆ. ಜೈಶಂಕರ್ ಆರ್ಯರ್ ನಿರ್ದೇಶನದ ಚಿತ್ರ ಇದಾಗಿದ್ದು. ಒಬ್ಬ ಸಾಮಾನ್ಯ ಹೆಣ್ಣು ಮಗಳ ಬದುಕಲ್ಲಿ ಆಕೆ ಏನೆಲ್ಲಾ ಸಮಸ್ಯೆ ಎದುರಿಸುತ್ತಾಳೆ ಎನ್ನುವ ವಿಷಯದ ಸುತ್ತ ಸಿನಿಮಾ ಮೂಡಿ ಬಂದಿದೆ.

ಚೆಫ್ ಚಿದಂಬರ:
 'ಜೊತೆ ಜೊತೆಯಲಿ ' ಸೀರಿಯಲ್‌ ಖ್ಯಾತಿಯ ಅನಿರುದ್ದ್‌ ಜಟ್ಕರ್‌ ಅಭಿನಯದ 'ಚೆಫ್ ಚಿದಂಬರ' ಚಿತ್ರ ಕೂಡ ಇದೇ ಜೂ. 14ಕ್ಕೆ ತೆರೆ ಕಾಣಲು ಸಜ್ಜಾಗಿದೆ. ಥ್ರಿಲ್ಲರ್‌, ಸಸ್ಪೆನ್ಸ್‌, ಡಾರ್ಕ್‌ ಕಾಮಿಡಿಯನ್ನ ಈ ಚಿತ್ರ ಒಳಗೊಂಡಿದೆ. ಲವ್ ಮಾಕ್ಟೇಲ್ ಖ್ಯಾತಿಯ ರೆಚೆಲ್ ಡೇವಿಡ್ ಹಾಗೂ ನಿಧಿ ಸುಬ್ಬಯ್ಯ, ಅನಿರುದ್ದ್‌ಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Kalki : ಕಲ್ಕಿ ಟ್ರೈಲರ್ ಗೆ ಡೇಟ್ ಫಿಕ್ಸ್.. ರಿಲೀಸ್ ಗೆ ದಿನಾಂಕ ಅನೌನ್ಸ್ ಮಾಡಿದ ಚಿತ್ರತಂಡ...!

ಲವ್ ಲೀ: 

ಚೇತನ್ ಕೇಶವ್ ನಿರ್ದೇಶನದ, ವಸಿಷ್ಠ ಸಿಂಹ ನಾಯಕ ನಟನಾಗಿ ನಟಿಸಿರುವ 'ಲವ್ ಲೀ' ಚಿತ್ರ ಕೂಡ ಇದೇ ಜೂ. 14ಕ್ಕೆ ರಿಲೀಸ್‌ಗೆ ರೆಡಿಯಾಗಿದೆ. ಈಗಾಗಲೇ ಚಿತ್ರದ ಹಾಡುಗಳು ರಿಲೀಸ್‌ ಆಗಿದ್ದು ಪ್ರೇಕ್ಷಕರ ಮನ ಗೆದ್ದಿದೆ. ಸಿನಮಾದ ಟ್ರೈಲರ್‌ ಕೂಡ ಆಕರ್ಷಿತವಾಗಿದ್ದು ಸಿನಿಮಾ ರಿಲೀಸ್‌ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.ಅಂತೂ ಇಂತೂ ಈ ಎಲ್ಲಾ ಸಿನಿಮಾಗಳು ತಮ್ಮ ಟ್ರೇಲರ್‌ನಿಂದ ಕುತೂಹಲ ಹುಟ್ಟಿಸಿವೆ. ಈ ನಾಲ್ಕರಲ್ಲಿ ಯಾವ ಸಿನಿಮಾ ಪ್ರೇಕ್ಷಕರ ಮನ  ಗೆಲ್ಲತ್ತೆ ಅನ್ನೊದನ್ನ ಕಾದು ನೋಡ್ಬೇಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News