'Kaavaalaa' Song Sensation : ತಮನ್ನಾ ಬಿಂದಾಸ್‌ ಸ್ಟೆಪ್ಸ್‌ಗೆ ಫ್ಯಾನ್ಸ್‌ ಫಿದಾ

Tamanna Hook Step in Kawala Song : ಸೂಪರ್‌ ಸ್ಟಾರ್‌ ರಜನಿಕಾಂತ್‌ ನಟನೆಯ ಜೈಲರ್‌ ಸಿನಿಮಾ ಚಿತ್ರದ ʼಕಾವಾಲಾʼ ಸಾಂಗ್‌ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಸೌಂಡ್‌ ಮಾಡುತ್ತಿದೆ. ಮಕ್ಕಳು, ಯುವಕರು ಹುಕ್‌ ಸ್ಟೆಪ್‌ ಹಾಕುತ್ತಿದ್ದಾರೆ.   

Written by - Savita M B | Last Updated : Jul 10, 2023, 08:40 AM IST
  • ನೆಲ್ಸನ್‌ ದಿಲೀಪ್‌ ಕುಮಾರ್‌ ನಿರ್ದೇಶನದ ಜೈಲರ್‌ ಸಿನಿಮಾದ ಹೆಚ್ಚು ನಿರೀಕ್ಷೆಯನ್ನು ಹುಟ್ಟುಹಾಕಿದೆ
  • ಚಿತ್ರದಲ್ಲಿನ ಕಾವಾಲಾ ಸಾಂಗ್‌ಗೆ ಬಾಲಿವುಡ್‌ ಮಿಲ್ಕಿ ಬ್ಯೂಟಿ ತಮನ್ನಾ ಬಿಂದಾಸ್‌ ಸ್ಟೆಪ್ಸ್‌
  • ಈ ಹಾಡು ಜಾನಿ ಮಾಸ್ಟರ್‌ ಕೊರಿಯೋಗ್ರಫಿಯಲ್ಲಿ ಸಖತ್‌ ಕಿಕ್‌ ನೀಡುತ್ತಿದೆ
'Kaavaalaa' Song Sensation : ತಮನ್ನಾ ಬಿಂದಾಸ್‌ ಸ್ಟೆಪ್ಸ್‌ಗೆ ಫ್ಯಾನ್ಸ್‌ ಫಿದಾ title=

Jailer Film Release Date : ನೆಲ್ಸನ್‌ ದಿಲೀಪ್‌ ಕುಮಾರ್‌ ನಿರ್ದೇಶನದ ಜೈಲರ್‌ ಸಿನಿಮಾದ ಹೆಚ್ಚು ನಿರೀಕ್ಷೆಯನ್ನು ಹುಟ್ಟುಹಾಕಿದ್ದು, ಚಿತ್ರದಲ್ಲಿನ ಕಾವಾಲಾ ಸಾಂಗ್‌ಗೆ ಬಾಲಿವುಡ್‌ ಮಿಲ್ಕಿ ಬ್ಯೂಟಿ ತಮನ್ನಾ ಬಿಂದಾಸ್‌ ಹುಕ್‌ ಸ್ಟೆಪ್‌ ಹಾಕಿ ರಂಗೇರಿಸಿದ್ದಾರೆ. ನಟಿ ಈ ಸಾಂಗ್‌ನಲ್ಲಿ ಸ್ಟೈಲಿಶ್‌ ಲುಕ್‌ನಲ್ಲಿ ಮಾಸ್‌ ಆಗಿ ಕಾಣಿಸಿಕೊಂಡಿದ್ದಾರೆ. 

ನಟ ರಜನಿಕಾಂತ್‌ ಜೊತೆಗೆ ಸ್ಯಾಂಡಲ್‌ವುಡ್‌ನ ನಟ ಶಿವರಾಜ್‌ಕುಮಾರ್‌, ಮೋಹನ್‌ ಲಾಲ್‌, ರಮ್ಯಾಕೃಷ್ಣ ಸೇರಿದಂತೆ ಹಲವಾರು ಘಟಾನುಘಟಿ ಕಲಾವಿದರು ಈ ಚಿತ್ರದಲ್ಲಿದ್ದಾರೆ. ಇನ್ನು ಈ ಸಿನಿಮಾದಲ್ಲಿ ತಮನ್ನಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸಾಂಗ್‌ನಲ್ಲಿ ಬೊಂಬಾಟ್‌ ಸ್ಟೆಪ್‌ ಹಾಕುವ ಮೂಲಕ ಕಮಾಲ್‌ ಮಾಡಿದ್ದಾರೆ.  ಈ ಹಾಡು ಜಾನಿ ಮಾಸ್ಟರ್‌ ಕೊರಿಯೋಗ್ರಫಿಯಲ್ಲಿ  ಸಖತ್‌ ಕಿಕ್‌ ನೀಡುತ್ತಿದೆ. 

ಇದನ್ನೂ ಓದಿ-Roopa Rayappa : ಶರ್ಟ್‌ ಬಟನ್‌ ತೆಗೆದು ಹಾಟ್‌ ಪೋಸ್‌ ಕೊಟ್ಟ ಕೆಜಿಎಫ್‌ ನಟಿ

ಜಾನಿ ಮಾಸ್ಟರ್‌ ಅನೇಕ ಸೂಪರ್‌ ಹಿಟ್‌ ಸಾಂಗ್‌ಗಳಿಗೆ ಕೊರಿಯೋಗ್ರಾಫಿ ಮಾಡಿದ್ದಾರೆ. ಪ್ರತಿ ಸಾಂಗ್‌ನಲ್ಲಿಯೂ ಹುಕ್‌ ಸ್ಟೆಪ್‌ಗಳು ವೈರಲ್‌ ಆಗಿ ಇನ್‌ಸ್ಟಾಗ್ರಾಂ ರೀಲ್ಸ್‌ ವೈರಲ್‌ ಆಗುತ್ತಿದೆ. ಸದ್ಯ ಈ ಜೈಲರ್‌ ಸಿನಿಮಾದ ಕಾವಾಲಾ ಸಾಂಗ್‌ನ ಹುಕ್‌ ಸ್ಟೆಪ್‌ ಸಹ ಸಖತ್‌ ಸದ್ದು ಮಾಡುತ್ತಿದ್ದು, ಪುಟಾಣಿ ಮಕ್ಕಳು ಸಹ ತಮನ್ನಾ ಹಾಕಿರುವ ಹುಕ್‌ ಸ್ಟೆಪ್‌ನ್ನು ಹಾಕಿರುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ.

ಇನ್ನು ಈ ವಿಎಇಯೋಗಳನ್ನು ನೋಡಿದ ತಮನ್ನಾ ಸಖತ್‌ ಖುಷ್‌ ಆಗಿದ್ದಾರೆ. ಕಲರ್‌ಫುಲ್‌ ಸೆಟ್‌ನಲ್ಲಿ ಅದ್ಧೂರಿಯಾಗಿ ಮೂಡಿಬಂದ ಸಾಂಗ್‌ನಲ್ಲಿ ತಮನ್ನಾಗೆ ಬ್ಯಾಕ್‌ ಡಾನ್ಸರ್ಸ್‌ ಸಾಥ್‌ ನೀಡಿದ್ದಾರೆ. ಸನ್‌ ಬ್ಯಾನರ್‌ನಡಿಯಲ್ಲಿ ಮೂಡಿಬಂದ ಜೈಲರ್‌ ಸಿನಿಮಾ ಆಗಸ್ಟ್‌ 10ಕ್ಕೆ ತೆರೆ ಕಾಣಲಿದೆ. ಈ ಚಿತ್ರದಲ್ಲಿ ನಟ ಶಿವರಾಜಕುಮಾರ್‌ ನಟಿಸಿರುವುದು ಅಭಿಮಾನಿಗಳಲ್ಲಿ ಇನ್ನಷ್ಟು ಕುತೂಹಲವನ್ನು ಹೆಚ್ಚಿಸಿದೆ. ಹೆಚ್ಚು ಬೋಲ್ಡ್‌ ಆಗಿ ಕಾಣಿಸಿಕೊಂಡು ಟ್ರೋಲ್‌ ಆಗಿದ್ದ ನಟಿ ತಮನ್ನಾ ಸದ್ಯ ಜೈಲರ್‌ ಸಿನಿಮಾ ಹಾಡಿಗೆ ಹೆಜ್ಜೆ ಹಾಕಿ ಮತ್ತೆ ಎಲ್ಲರ ಗಮನ ಸೆಳೆಯುತ್ತಿದಾರೆ. 

ಇದನ್ನೂ ಓದಿ-ನಟ ಚಿರಂಜೀವಿ ಕುಟುಂಬದಲ್ಲಿ ಮತ್ತೊಂದು ವಿಚ್ಛೇದನ : ನಿಹಾರಿಕಾ ಕೊನಿಡೇಲಾ ಡಿವೋರ್ಸ್‌..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News