Jr NTR In Pushpa 2 : ಪುಷ್ಪ 2 ಸಿನಿಮಾದಲ್ಲಿ ಜೂ.ಎನ್‌ಟಿಆರ್.!?

Jr NTR In Pushpa 2 Shooting Set Photo: ಪುಷ್ಪ 2 ಸಿನಿಮಾ ಶೂಟಿಂಗ್‌ ಬಲು ಜೋರಾಗಿ ನಡೆಯುತ್ತಿದೆ. ಹೈದರಾಬಾದ್‌ನಲ್ಲಿ ಚಿತ್ರತಂಡ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಜೂನಿಯರ್‌ ಎನ್‌ಟಿಆರ್ ಸೆಟ್‌ನಲ್ಲಿರುವ ಫೋಟೋ ವೈರಲ್‌ ಆಗುತ್ತಿದೆ.   

Written by - Chetana Devarmani | Last Updated : Apr 28, 2023, 01:11 PM IST
  • ಪುಷ್ಪ 2 ಸಿನಿಮಾ ಶೂಟಿಂಗ್‌ ಬಲು ಜೋರಾಗಿ ನಡೆಯುತ್ತಿದೆ
  • ಪುಷ್ಪ 2 ಸೆಟ್‌ನಲ್ಲಿ ಜೂನಿಯರ್‌ ಎನ್‌ಟಿಆರ್
  • ಪುಷ್ಪ 2 ಸಿನಿಮಾದಲ್ಲಿ ಜೂ.ಎನ್‌ಟಿಆರ್.!?
Jr NTR In Pushpa 2 : ಪುಷ್ಪ 2 ಸಿನಿಮಾದಲ್ಲಿ ಜೂ.ಎನ್‌ಟಿಆರ್.!? title=

Jr NTR In Pushpa 2: ಪುಷ್ಪ ಸಿನಿಮಾ ಸೃಷ್ಟಿಸಿದ ಹವಾ ಬಗ್ಗೆ ಹೇಳಬೇಕಿಲ್ಲ. ಅಲ್ಲು ಅರ್ಜುನ್‌ ನಟನೆಯ ಈ ಸಿನಿಮಾ ಬ್ಲಾಕ್‌ ಬಾಸ್ಟರ್‌ ಹಿಟ್‌ ಕಂಡಿತು. ಅಲ್ಲು ಅರ್ಜುನ್ ಪುಷ್ಪ ಸಿನಿಮಾ ಮೂಲಕ  ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಪುಷ್ಪರಾಜ್ ಪಾತ್ರವನ್ನು ನಿರ್ದೇಶಕ ಸುಕುಮಾರ್ ಅವರು ಅದ್ಭುತವಾಗಿ ವಿನ್ಯಾಸಗೊಳಿಸಿದ್ದಾರೆ. ಇದೀಗ ಪುಷ್ಪ 2 ಚಿತ್ರೀಕರಣದಲ್ಲಿ ಸಿನಿಮಾ ತಂಡ ಬ್ಯುಸಿಯಾಗಿದೆ. ಪುಷ್ಪ 2 ಬಿಡಿಯಗಡೆಗೆ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಹೀಗಿರುವಾಗ ಜೂನಿಯರ್‌ ಎನ್‌ಟಿಆರ್ ಫೋಟೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಜನರ ತಲೆಗೆ ಹುಳ ಬಿಟ್ಟಿದೆ. 

ಇದನ್ನೂ ಓದಿ: ಕಾರಿನಲ್ಲಿ ಪ್ರಿಯಕರನೊಂದಿಗೆ ತಮನ್ನಾ.. ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದ ಲವ್‌ಬರ್ಡ್ಸ್‌!!

RRR ನ ಯಶಸ್ಸಿನ ನಂತರ, ಜೂನಿಯರ್ NTR ಅವರ ಮುಂಬರುವ ಚಿತ್ರ 'NTR 30' ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಅವರಿಗೆ ಜೋಡಿಯಾಗಿ ಜಾನ್ವಿ ಕಪೂರ್ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಏತನ್ಮಧ್ಯೆ, ನಟನ ಫೋಟೋ ವೈರಲ್ ಆಗುತ್ತಿದೆ. ಅದರಲ್ಲಿ ಅವರು 'ಪುಷ್ಪಾ 2' ಸೆಟ್‌ಗೆ ಎಂಟ್ರಿಕೊಟ್ಟಿದ್ದಾರೆ. ಈ ಫೋಟೋ ಜನರ ತಲೆಗೆ ಹುಳ ಬಿಟ್ಟಿದೆ. ಅಲ್ಲು ಅರ್ಜುನ್ ಜೊತೆ ಪುಷ್ಪ 2 ಸಿನಿಮಾದಲ್ಲಿ ಜೂ.ಎನ್‌ಟಿಆರ್ ನಟಿಸುತ್ತಾರಾ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.

ವರದಿಗಳ ಪ್ರಕಾರ, ಜೂನಿಯರ್ ಎನ್‌ಟಿಆರ್ 'ಪುಷ್ಪ 2' ಸೆಟ್‌ನಲ್ಲಿ ಅಲ್ಲು ಅರ್ಜುನ್ ಮತ್ತು ಸುಕುಮಾರ್ ಅವರನ್ನು ಭೇಟಿಯಾಗಲು ಬಂದಿದ್ದರು. ಈ ಭೇಟಿಯ ಹಿಂದಿನ ಕಾರಣ ಏನು ಎಂಬ ಬಗ್ಗೆ ಈಗ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ, ಆದರೆ 'ಪುಷ್ಪಾ 2' ನಲ್ಲಿ ಜೂನಿಯರ್ ಎನ್‌ಟಿಆರ್ ಅವರ ಅತಿಥಿ ಪಾತ್ರವನ್ನು ನೋಡಬಹುದು ಎಂದು ಅನೇಕರು ಹೇಳುತ್ತಿದ್ದಾರೆ. ಆದರೆ, ಈ ವದಂತಿ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಇದನ್ನೂ ಓದಿ: ಪೇಡಾನಗರಿಯಲ್ಲಿ ಹೆಬ್ಬುಲಿಯ ಘರ್ಜನೆ, ಧಾರವಾಡದಲ್ಲಿ ಕಿಚ್ಚನ ಭರ್ಜರಿ ರೋಡ್‌ ಶೋ..!

ಈ ದಿನಗಳಲ್ಲಿ 'ಪುಷ್ಪ 2' ಚಿತ್ರದ ಶೂಟಿಂಗ್ ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿದೆ. ಚಿತ್ರದ ಸೆಟ್‌ಗೆ ಹೋದ ಜೂನಿಯರ್ ಎನ್‌ಟಿಆರ್ ಬಿಳಿ ಶರ್ಟ್ ಮತ್ತು ಪ್ಯಾಂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 'RRR' ಯಶಸ್ಸಿನ ನಂತರ ನಟ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಆದರೆ 'ಪುಷ್ಪಾ 2' ನಲ್ಲಿ ಅವರ ಅತಿಥಿ ಪಾತ್ರದ ಸುದ್ದಿ ಎಷ್ಟರ ಮಟ್ಟಿಗೆ ಸತ್ಯ ಎಂಬುದು ಮಾತ್ರ ಬಹಿರಂಗವಾಗಿಲ್ಲ. ಅದೇ ಸಮಯದಲ್ಲಿ ಅವರು ಯಾವ ಉದ್ದೇಶಕ್ಕಾಗಿ ಸೆಟ್‌ಗೆ ಬಂದಿದ್ದರು ಅನ್ನೋದು ಕೂಡ ಸದ್ಯದಲ್ಲೇ ಬಹಿರಂಗವಾಗಲಿದೆ. 

 

 

ಕಳೆದ ವರ್ಷ ನವೆಂಬರ್‌ನಲ್ಲಿ ಅಲ್ಲು ಅರ್ಜುನ್ 'ಪುಷ್ಪ 2' ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ. ಚಿತ್ರದ ಸೀಕ್ವೆಲ್‌ನಲ್ಲಿ, ನಟ ಕಳೆದ ಬಾರಿಗಿಂತ ಹೆಚ್ಚು ಅಪಾಯಕಾರಿ ಆಕ್ಷನ್ ಮಾಡುವುದನ್ನು ಕಾಣಬಹುದು. ಇತ್ತೀಚೆಗಷ್ಟೇ ಚಿತ್ರದ ಟೀಸರ್ ಮೂಲಕ ಅವರ ಲುಕ್ ರಿವೀಲ್ ಆಗಿದ್ದು, ಅಭಿಮಾನಿಗಳಲ್ಲಿ ಹುಬ್ಬೇರಿಸುವಂತೆ ಮಾಡಿದೆ. ಮುಂದಿನ ವರ್ಷ ಬಿಡುಗಡೆಯಾಗಲಿರುವ ಈ ಚಿತ್ರದ ಟ್ರೇಲರ್ ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ಬೆತ್ತಲಾದ ʻಹೆಡ್ ಬುಷ್ʼ ನಟಿ ಪಾಯಲ್ ಫೋಟೋ ಸಿಕ್ಕಾಪಟ್ಟೆ ವೈರಲ್!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News