Johnny Lever Visits Jr Mehmood House: ಜೂನಿಯರ್ ಮೆಹಮೂದ್ ಎಂದೇ ಜನಪ್ರಿಯರಾಗಿರುವ ಹಿರಿಯ ನಟ ಮತ್ತು ಚಲನಚಿತ್ರ ನಿರ್ದೇಶಕ ನಯೀಮ್ ಸಯ್ಯದ್ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದು, ಹಿರಿಯ ನಟ ಹೊಟ್ಟೆಯ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಗುರುತು ಹಿಡಿಯದ ಸ್ಥಿತಿಯಲ್ಲಿರುವ ಅವರನ್ನು ಹಾಸ್ಯನಟ ಜಾನಿ ಲಿವರ್ ಭೇಟಿ ಮಾಡಿ, ಜೂನಿಯರ್ ಮೆಹಮೂದ್ ಹಾಸಿಗೆ ಪಕ್ಕದಲ್ಲಿ ಕುಳಿತು ಅವರಿಗೆ ಧೈರ್ಯ ಹೇಳುತ್ತಿರುವುದು, ಆರೋಗ್ಯ ವಿಚಾರಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಹಿರಿಯ ನಟ ಜೂನಿಯರ್ ಮೆಹಮೂದ್‌ಗೆ ಕ್ಯಾನ್ಸರ್ ಇದೆ ಎಂದು ಕಳೆದ ತಿಂಗಳ ನವೆಂಬರ್‌ನಲ್ಲಿ ಪತ್ತೆಯಾಗಿದ್ದು, ಕಳೆದ 15 ವರ್ಷಗಳಿಂದ ನಟನ ಜೊತೆಗಿರುವ ಆಪ್ತ ಸ್ನೇಹಿತ ಸಲಾಮ್ ಕಾಜಿ, ಜೂನಿಯರ್ ಮೆಹಮೂದ್ ತನ್ನ ಕುಟುಂಬದೊಂದಿಗೆ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ . "ಕ್ಯಾನ್ಸರ್ ಇದೆ ಎಂಬುದು ಕೇವಲ ಒಂದು ತಿಂಗಳ ಹಿಂದೆ ತಿಳಿದು ಬಂತು. ಅವರು ಕ್ಯಾನ್ಸರ್ ನಾಲ್ಕನೇ ಹಂತದಲ್ಲಿದ್ದಾರೆ. ಕ್ಯಾನ್ಸರ್ ಅವರ ಶ್ವಾಸಕೋಶಗಳು ಮತ್ತು ದೇಹದ ಇತರ ಭಾಗಗಳ ಮೇಲೆ ಪರಿಣಾಮ ಬೀರಿದೆ. ಕೇವಲ 40 ದಿನಗಳು ಮಾತ್ರ ಉಳಿಯುತ್ತಾರೆ ಎಂದು ವೈದ್ಯರು ನಮಗೆ ಹೇಳಿದ್ದಾರೆ. ಆದರೆ ನಾವೆಲ್ಲರೂ ಅವರಿಗಾಗಿ ಪ್ರಾರ್ಥಿಸುತ್ತಿದ್ದೇವೆ" ಎಂದಿದ್ದಾರೆ.
Viral | Popular actor of yester years, Junior Mehmood has not been keeping well. Comedian Jonny liver seen here trying to lift up his spirits. pic.twitter.com/KQyErg4EBL
— MUMBAI NEWS (@Mumbaikhabar9) December 1, 2023
ಇದನ್ನೂ ಓದಿ: ನಾಲ್ಕು ಚಿತ್ರಗಳಲ್ಲಿ ನಟಿಸಿದರೂ ಈ ನಟಿಗೆ ಯಶಸ್ಸು ದಕ್ಕಲಿಲ್ಲ, ರಣಬೀರ್ ಜೊತೆಗಿನ 'ನ್ಯೂಡ್ ಸೀನ್' ಫೇಮಸ್ಸಾಗಿಸಿದೆ!
ಹಿರಿಯ ನಟನನ್ನು ನೋಡಲು ಚಿತ್ರರಂಗದಿಂದ ಬಂದ ಮೊದಲ ನಟ ಜಾನಿ ಲಿವರ್ ಚಲನಚಿತ್ರೋದ್ಯಮದಿಂದ ತಮ್ಮನ್ನು ಭೇಟಿ ಮಾಡಿದ ಮೊದಲ ವ್ಯಕ್ತಿ ಜಾನಿ ಲಿವರ್ ಎಂದು ಸಲಾಮ್ ಕಾಜಿ ಕೃತಜ್ಞತೆ ಸಲ್ಲಿಸಿದ್ದಾರೆ. ಜೂನಿಯರ್ ಮೆಹಮೂದ್ ಭೇಟಿ ಮಾಡಿದ ಜಾನಿ ಲಿವರ್ ಹಣಕಾಸಿನ ನೆರವು ನೀಡಲು ಸಿದ್ಧ ಎಂದು ಹೇಳಿದ್ದಾರೆ. ಆದರೆ, ಎರಡನೆ ಯದು ಯಾವುದೇ ಹಣಕಾಸಿನ ಸಮಸ್ಯೆಗಳು ನಮಗಿಲ್ಲ ಎಂದು ಹೇಳಿದ್ದಾರೆ. ಸಲಾಮ್ ಕಾಜಿ ಪ್ರಕಾರ, ಹಿರಿಯ ನಟ ಜೂನಿಯರ್ ಮೆಹಮೂದ್ ಹಲವಾರು ಮರಾಠಿ ಚಲನಚಿತ್ರಗಳಲ್ಲಿ ನಟಿಸಿದ್ದು, ನಿರ್ದೇಶನ ಮಾಡಿದ್ದು, ಅವುಗಳಿಂದ ಹಣ ಗಳಿಸಿದ್ದಾರೆ. ಆದರೂ, ಯಾವುದಾದರೂ ಸಹಾಯದ ಅಗತ್ಯವಿದೆಯೇ ಎಂದು ಜಾನಿ ಲಿವರ್ ಕೇಳಿದರು, ಆದರೆ ಜೂನಿಯರ್ ಮೆಹಮೂದ್ ಅವರ ಮಕ್ಕಳು ಚೆನ್ನಾಗಿದ್ದಾರೆ ಮತ್ತು ಕಾಳಜಿ ವಹಿಸುತ್ತಿದ್ದಾರೆ ಎಂದು ಹೇಳಿದ್ದಾಗಿ ತಿಳಿಸಿದ್ದಾರೆ.
ಜೂನಿಯರ್ ಮೆಹಮೂದ್ ಬಾಲ ಕಲಾವಿದರಾಗಿ ಸಿನಿಮಾಗಳಿಗೆ ಪಾದಾರ್ಪಣೆ ಮಾಡಿದವರು. ಮತ್ತು ನಂತರ ಮರಾಠಿ ಚಲನಚಿತ್ರಗಳನ್ನು ನಿರ್ದೇಶಿಸಿದರು. ಅವರು ಬ್ರಹ್ಮಚಾರಿ (1968), ಮೇರಾ ನಾಮ್ ಜೋಕರ್ (1970), ಪರ್ವರೀಶ್ (1977), ಮತ್ತು ದೋ ಔರ್ ದೋ ಪಾಂಚ್ (1980) ನಂತಹ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು, ಲೆಜೆಂಡರಿ ಕಾಮಿಡಿಯನ್ ಜಾನಿ ಲಿವರ್ ವೆಲ್‌ಕಮ್ ಫ್ರಾಂಚೈಸ್‌ನ ತ್ರಿಕ್ವೆಲ್ ವೆಲ್‌ಕಮ್ ಟು ದಿ ಜಂಗಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ