ಎಕ್ಸ್‌ ಬಾಯ್‌ಫ್ರೆಂಡ್ ಜೊತೆ ಮಾಲ್ಡೀವ್ಸ್‌ನಲ್ಲಿ ಜಾನ್ವಿ : ಗುಟ್ಟು ರಟ್ಟು ಮಾಡಿದ ಸ್ಟೇಟಸ್‌..!

ಈ ಸೆಲೆಬ್ರೆಟಿಗಳು ಏನೇ ಮಾಡಿದ್ರೂ ನೆಟ್ಟಿಗರ ಹದ್ದಿನ ಕಣ್ಣು ಅವರ ತೆರೆ ಮರೆಯ ವಿಚಾರಗಳನ್ನು ಬಯಲಿಗೆಳೆದೆ ಬಿಡಲ್ಲ ಅನಿಸುತ್ತೆ. ಇದೀಗ ಬಾಲಿವುಡ್‌ ಬೆಡಗಿ ಜಾನ್ವಿ ಕಪೂರ್‌ಗೆ ಸಂಬಂಧಪಟ್ಟ ವಿಚಾರವೊಂದು ಬಯಲಿಗೆ ಬಂದಿದ್ದು, ಸುದಿ ತಿಳಿದಿ ಅವರ ಅಭಿಮಾನಿಗಳು ನಿಜನಾ ಜಾನ್ವಿ ಅಂತ ಪ್ರಶ್ನೆ ಮಾಡುವಂತಾಗಿದೆ. ಅಷ್ಟಕ್ಕೂ ಶ್ರೀದೇವಿ ಮಗಳ ಸ್ಟೇಟರ್‌ ರಹಸ್ಯ ಏನೂ ಅಂತ ತಿಳಿಯೊಕೆ ಮುಂದೆ ಓದಿ.

Written by - Krishna N K | Last Updated : Dec 11, 2022, 02:27 PM IST
  • ಸೆಲೆಬ್ರೆಟಿಗಳು ಏನೇ ಮಾಡಿದ್ರೂ ನೆಟ್ಟಿಗರ ಹದ್ದಿನ ಕಣ್ಣು ಅವರ ತೆರೆ ಮರೆಯ ವಿಚಾರಗಳನ್ನು ಬಯಲಿಗೆಳೆದೆ ಬಿಡಲ್ಲ
  • ಇದೀಗ ಬಾಲಿವುಡ್‌ ಬೆಡಗಿ ಜಾನ್ವಿ ಕಪೂರ್‌ಗೆ ಸಂಬಂಧಪಟ್ಟ ವಿಚಾರವೊಂದು ಬಯಲಿಗೆ ಬಂದಿದೆ
  • ಮಾಜಿ ಗೆಳೆಯನ ಜೊತೆ ಜಾನ್ವಿ ಮಾಲ್ಡೀವ್ಸ್‌ ಹೋಗಿದ್ದಾರೆ ಇಲ್ಲಿ ನೋಡಿ ಅಂತ ಸಾಕ್ಷಿ ಮುಂದಿಟ್ಟಿದ್ದಾರೆ
ಎಕ್ಸ್‌ ಬಾಯ್‌ಫ್ರೆಂಡ್ ಜೊತೆ ಮಾಲ್ಡೀವ್ಸ್‌ನಲ್ಲಿ ಜಾನ್ವಿ : ಗುಟ್ಟು ರಟ್ಟು ಮಾಡಿದ ಸ್ಟೇಟಸ್‌..! title=

Janhvi Kapoor boyfriend : ಈ ಸೆಲೆಬ್ರೆಟಿಗಳು ಏನೇ ಮಾಡಿದ್ರೂ ನೆಟ್ಟಿಗರ ಹದ್ದಿನ ಕಣ್ಣು ಅವರ ತೆರೆ ಮರೆಯ ವಿಚಾರಗಳನ್ನು ಬಯಲಿಗೆಳೆದೆ ಬಿಡಲ್ಲ ಅನಿಸುತ್ತೆ. ಇದೀಗ ಬಾಲಿವುಡ್‌ ಬೆಡಗಿ ಜಾನ್ವಿ ಕಪೂರ್‌ಗೆ ಸಂಬಂಧಪಟ್ಟ ವಿಚಾರವೊಂದು ಬಯಲಿಗೆ ಬಂದಿದ್ದು, ಸುದಿ ತಿಳಿದಿ ಅವರ ಅಭಿಮಾನಿಗಳು ನಿಜನಾ ಜಾನ್ವಿ ಅಂತ ಪ್ರಶ್ನೆ ಮಾಡುವಂತಾಗಿದೆ. ಅಷ್ಟಕ್ಕೂ ಶ್ರೀದೇವಿ ಮಗಳ ಸ್ಟೇಟರ್‌ ರಹಸ್ಯ ಏನೂ ಅಂತ ತಿಳಿಯೊಕೆ ಮುಂದೆ ಓದಿ.

ಬಾಲಿವುಡ್‌ ದಿವಾ ಜಾನ್ವಿ ಕಪೂರ್ ಹೆಸರು ಕೇಳಿದ್ರೆ ಪಡ್ಡೆ ಯುವಕರ ಹಾರ್ಟ್‌ ಬೀಟ್‌ ಹೆಚ್ಚಾಗುತ್ತದೆ. ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದ ಬೆಡಗಿ, ರಿಲ್ಯಾಕ್ಸ್‌ ಮಾಡೋಕೆ ಮಾಲ್ಡೀವ್ಸ್‌ಗೆ ಹೋಗಿದ್ದಾರೆ. ಅಲ್ಲದೆ, ತಮ್ಮ ಅಭಿಮಾನಿಗಳಿಗಾಗಿ ಆಗಾಗ ಅದ್ಭುತ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಮೊನ್ನೆ ಬಿಕಿನಿ ತೊಟ್ಟು ಬರ್ಜರಿ ಲುಕ್‌ನಲ್ಲಿ ಕಾಣಿಸಿಕೊಂಡು ನೆಟ್ಟಿಗರ ತಲೆ ತಿರುಗುವಂತೆ ಮಾಡಿದ್ದರು.

ಇದನ್ನೂ ಓದಿ: ಮದುವೆ ಆದ್ರೂ ʼMr ಬ್ಯಾಚುಲರ್ʼ ಅಂತೆ : ಜ.6ಕ್ಕೆ ಡಾರ್ಲಿಂಗ್‌ ಕೃಷ್ಣನ ಹೊಸ ಅವತಾರ ತೆರೆಗೆ..!

ಇನ್ನು ಸ್ಟಾರ್‌ ಮಕ್ಕಳ ಲವ್‌ ಕಹಾನಿಗಳಿಗೆನು ಕಮ್ಮಿ ಇಲ್ಲ. ಈ ಹಿಂದೆ ಜಾನ್ವಿ ಶಿಖರ್‌ ಪಹರಿಯಾ ಜೊತೆ ಡೇಟಿಂಗ್‌ ಮಾಡ್ತಿದ್ರು ಎನ್ನುವ ವಿಚಾರ ಎಲ್ಲರಿಗೂ ತಿಳಿದಿದೆ. ಇದೀಗ ಇದೇ ವಿಚಾರ ಮುನ್ನೆಲೆಗೆ ಬಂದಿದ್ದು, ಎಕ್ಸ್‌ ಬಾಯ್‌ ಫ್ರೆಂಡ್‌ ಜೊತೆ ಜಾನ್ವಿ ಮಾಲ್ಡೀವ್ಸ್‌ಗೆ ಹಾರಿದ್ರಾ ಎಂದು ದಢಕ್‌ ಬೆಡಗಿಯ ಅಭಿಮಾನಿಗಳು ತಲೆ ಕೆಡಿಸಿಕೊಂಡು ಯೋಚಿಸುವಂತೆ ಮಾಡಿದೆ.

ಇದಕ್ಕೆಲ್ಲ ಕಾರಣ ರಾತ್ರಿ ಸಮಯ ನಿಯಾನ್ ಬಿಕಿನಿ ಸೆಟ್‌ನಲ್ಲಿ ತನ್ನ ಅದ್ಭುತ ಆಕೃತಿಯನ್ನು ತೋರಿ ಚಂದಿರನತ್ತ ಮುಖ ಮಾಡಿ ನಿಂತಿರುವ ಫೋಟೋ. ಹೌದು.. ಮಾಜಿ ಗೆಳೆಯ ಶಿಖರ್ ಪಹಾರಿಯಾ ಕೂಡ ಚಂದ್ರನ ಬೆಳಕಿನಲ್ಲಿ ಕಡು ನೀಲಿ ಸಾಗರದ ಇದೇ ರೀತಿಯ ಫೋಟೋವನ್ನು ಇನ್‌ಸ್ಟಾಗ್ರಾಮ್‌ ಸ್ಟೇಟಸ್‌ ಹಾಕಿದ್ದಾರೆ. ಹದ್ದಿನ ಕಣ್ಣಿನ ಕೆಲ ನೆಟ್ಟಿಗರು ಇವರಿಬ್ಬರ ಫೋಟೋವನ್ನು ನೋಡಿ ಇಬ್ಬರೂ ಒಟ್ಟಿಗೆ ಮಾಲ್ಡೀವ್ಸ್‌ ಹೋಗಿದ್ದಾರೆ ಇಲ್ಲಿ ನೋಡಿ ಅಂತ ಸಾಕ್ಷಿ ಮುಂದಿಟ್ಟಿದ್ದಾರೆ. ಆದ್ರೆ ಇದು ಎಷ್ಟ ಮಟ್ಟಿಗೆ ನಿಜ ಅನ್ನೋದೆ ಡೌಟು.

ಇದನ್ನೂ ಓದಿ: ಹೇಗಿದ್ಲು... ಹೇಗಾದ್ಳು.. ವಿಶ್ವ ಸುಂದರಿ : ಹರ್ನಾಜ್ ಸಂಧು ವಿಡಿಯೋ ವೈರಲ್‌..!

ಇನ್ನು ಶಿಖರ್ ಪಹಾರಿಯಾ ಯಾರು ಅಂತ ತಲೆಕೆಡಿಸಕೊಂಡು ಗೂಗಲ್‌ ಮಾಡೋಕೆ ಹೋಗ್ಬೇಡಿ, ಶಿಖರ್‌ ಜಾನ್ವಿಯ ಮಾಜಿ ಗೆಳೆಯ ಅಷ್ಟೇ ಅಲ್ಲ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್‌ಕುಮಾರ್ ಶಿಂಧೆ ಅವರ ಮೊಮ್ಮಗ. ಅವರು ಜಾನ್ವಿ ಕಪೂರ್ ಅವರೊಂದಿಗೆ ಮೊದಲು ಡೇಟಿಂಗ್ ಮಾಡುತ್ತಿದ್ದರು ನಂತರ ಬೇರೆಯಾದರು ಎಂಬ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News