ಬಾಯಿತಪ್ಪಿ ʼಸಲಾರ್‌ʼ ಕಥೆ ಹೇಳಿದ ನಟ ಜಗಪತಿ ಬಾಬು..! ಭಾಗ 1ರಲ್ಲಿ ಏನಾಗುತ್ತೆ ಗೊತ್ತೆ..?

Jagapathi Babu on Salaar : ಕನ್ನಡಿಗ ಪ್ರಶಾಂತ್ ನೀಲ್ ನಿರ್ದೇಶನದ ಪ್ರಭಾಸ್ ನಟನೆಯ ಮುಂಬರುವ ಚಿತ್ರ 'ಸಾಲಾರ್' ಕುರಿತು ಟಾಲಿವುಡ್‌ ಖ್ಯಾತ ನಟ ಜಗಪತಿ ಬಾಬು ಕೆಲವೊಂದಿಷ್ಟು ಆಸಕ್ತಿದಾಯಕ ವಿಚಾರಗಳನ್ನು ಹೇಳಿದ್ದಾರೆ. ಸಲಾರ್‌ ಭಾಗ 1ರ ಕಥೆ ಕುರಿತು ಕೆಲವೊಂದಿಷ್ಟು ಹೇಳಿಕೆ ನೀಡಿದ್ದು, ಸಖತ್‌ ಕ್ಯೂರಿಯಾಸಿಟಿಗೆ ಕಾರಣವಾಗಿದೆ.

Written by - Krishna N K | Last Updated : Jul 16, 2023, 05:15 PM IST
  • ಕನ್ನಡಿಗ ಪ್ರಶಾಂತ್ ನೀಲ್ ನಿರ್ದೇಶನದ ಪ್ರಭಾಸ್ ನಟನೆಯ ಮುಂಬರುವ ಚಿತ್ರ 'ಸಾಲಾರ್'.
  • 'ಸಾಲಾರ್' ಕುರಿತು ಟಾಲಿವುಡ್‌ ಖ್ಯಾತ ನಟ ಜಗಪತಿ ಬಾಬು ಕೆಲವೊಂದಿಷ್ಟು ಆಸಕ್ತಿದಾಯಕ ವಿಚಾರಗಳನ್ನು ಹೇಳಿದ್ದಾರೆ.
  • ಲಾರ್‌ ಭಾಗ 1ರ ಕಥೆ ಕುರಿತು ಕೆಲವೊಂದಿಷ್ಟು ಹೇಳಿಕೆ ನೀಡಿದ್ದು, ಸಖತ್‌ ಕ್ಯೂರಿಯಾಸಿಟಿಗೆ ಕಾರಣವಾಗಿದೆ.
 ಬಾಯಿತಪ್ಪಿ ʼಸಲಾರ್‌ʼ ಕಥೆ ಹೇಳಿದ ನಟ ಜಗಪತಿ ಬಾಬು..! ಭಾಗ 1ರಲ್ಲಿ ಏನಾಗುತ್ತೆ ಗೊತ್ತೆ..? title=

Salaar movie stroy : ಕೆಜಿಎಫ್‌ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ 'ಸಾಲಾರ್: ಭಾಗ 1 ಬಿಡುಗಡೆಗೆ ಸಿದ್ಧವಾಗುತ್ತಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಚಿತ್ರದ ಟೀಸರ್‌ಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಟೀಸರ್‌ ಕುರಿತು ಟೀಕೆ ಮಾಡಿದವರಿಗೆ ಡಾರ್ಲಿಂಗ್‌ ಅಭಿಮಾನಿಗಳು ಇದು ಟೀಸರ್ ಅಲ್ಲ ಗ್ಲಿಂಪ್ಸ್ ಎಂದು ತಿರುಗೇಟು ನೀಡಿದ್ದರು. ಇದೀಗ ಈ ಚಿತ್ರದ ಬಗ್ಗೆ ಜಗಪತಿ ಬಾಬು ಮತ್ತೊಂದು ಕುತೂಹಲಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. 

ಹೌದು.. ‘ಸಲಾರ್’ ಸಿನಿಮಾದಲ್ಲಿ ಬಹುದೊಡ್ಡ ತಾರಾಬಳಗ ಇದೆ. ಈ ಪೈಕಿ ಖ್ಯಾತ ಖಳನಟ ಜಗಪತಿಬಾಬು ಸಹ ನಟಿಸಿದಾರೆ. ಅವರು ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ಮೊದಲ ಭಾಗದಲ್ಲಿ ತಾವು ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇದರಿಂದ ಜಗಪತಿ ಬಾಬು ಅಭಿಮಾನಿಗಳಿಗೆ ಸ್ವಲ್ಪ ಹರ್ಟ್‌ ಆಗಿದೆ.

ಇದನ್ನೂ ಓದಿ: Rakhi Sawant: ಈ ಬಾರಿ ಕಾರು ಚಾಲಕನ ನಂಬಿ ಮೋಸ ಹೋದ ರಾಖಿ.. ಎದೆಬಡಿದುಕೊಂಡು ಅಳುವಂಥದ್ದೇ ನಡೆದೋಯ್ತಾ?

ಬಿಡುಗಡೆಗೂ ಮುನ್ನವೇ ಭಾರೀ ನಿರೀಕ್ಷೆ ಹುಟ್ಟು ಹಾಕುತ್ತಿರುವ 'ಸಲಾರ್' ಚಿತ್ರದಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ನಟಿಸುತ್ತಿದ್ದರೆ, ಮಲಯಾಳಂ ಸ್ಟಾರ್ ಹೀರೋ ಪೃಥ್ವಿರಾಜ್ ಸುಕುಮಾರನ್ ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾದ ಒಟಿಟಿ ಡೀಲ್ ಬಗ್ಗೆ ಕುತೂಹಲಕಾರಿ ಸುದ್ದಿಯೊಂದು ಹೊರಬಿದ್ದಿತ್ತು. ಈ ಚಿತ್ರದ OTT ಹಕ್ಕುಗಳನ್ನು ಅಮೆಜಾನ್ ಪ್ರೈಮ್ ಪಡೆದುಕೊಂಡಿದ್ದಾಗಿ ವರದಿಯಾಗಿತ್ತು.

ʼಸಲಾರ್‌ʼಗೆ ರವಿ ಬಸ್ರೂರು ಸಂಗೀತ ನೀಡಿದ್ದು, ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡುತ್ತಿದೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಬರುತ್ತಿರುವ ಈ ಸಿನಿಮಾ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ಈ ಮಧ್ಯ 'ಸಾಲಾರ್' ಸೆಪ್ಟೆಂಬರ್ 28, 2023 ರಂದು ವಿಶ್ವದಾದ್ಯಂತ ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿತ್ತು.

ಇದನ್ನೂ ಓದಿ: Priya Varrier : ಬ್ಯಾಂಕಾಕ್‌ನಲ್ಲಿ ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್..! ಫೋಟೋಸ್‌ ನೋಡಿ

ಇತ್ತೀಚೆಗಷ್ಟೇ ಬಿಡುಗಡೆಯಾಗಿದ ಸಲಾರ್‌ ಫಸ್ಟರ್‌ ಗ್ಲಿಂಪ್ಸ್‌ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದೆ. ಹೊಸ ದಾಖಲೆಗಳನ್ನು ಸೃಷ್ಟಿಸಿದೆ. 'ಸಾಲಾರ್' ಚಿತ್ರದ ಟೀಸರ್ ಬಿಡುಗಡೆಯಾದ 24 ಗಂಟೆಗಳಲ್ಲಿ 83 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಇದು ಈಗಾಗಲೇ 100 ಮಿಲಿಯನ್ ವೀಕ್ಷಣೆಗಳನ್ನು ದಾಟಿದೆ.

ಇತ್ತೀಚೆಗಷ್ಟೇ ‘ಆದಿಪುರುಷ’ ಸಿನಿಮಾದ ಮೂಲಕ ಬಂದಿದ್ದ ಪ್ರಭಾಸ್ ಗೆ ನಿರೀಕ್ಷಿತ ಫಲಿತಾಂಶ ಸಿಗಲಿಲ್ಲ. ಭಾರೀ ನಿರೀಕ್ಷೆಗಳ ನಡುವೆ ತೆರೆಕಂಡ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸೋತಿತ್ತು. ರಾಮಾಯಣದ ಹಿನ್ನೆಲೆಯಲ್ಲಿ ತಯಾರಾದ ಈ ಸಿನಿಮಾದಲ್ಲಿ ಪ್ರಭಾಸ್ ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಸಲಾರ್‌ ಮೇಲೆ ಡಾರ್ಲಿಂಗ್‌ ಫ್ಯಾನ್ಸ್‌ ಹೆಚ್ಚು ಭರವಸೆ ಇಟ್ಟುಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News