ಬೆಂಗಳೂರು : ಐಎಂಡಿಬಿ (www.imdb.com) ಜಗತ್ತಿನ ಸಿನಿಮಾ, ಟಿವಿ ಶೋ ಹಾಗೂ ಸಿನಿಮಾ ತಾರೆಯರ ಅಧಿಕೃತ ಮಾಹಿತಿ ಮೂಲ ಎನಿಸಿಕೊಂಡಿರುವ ವಿಶ್ವಪ್ರಸಿದ್ಧ ತಾಣ. ವಿಶ್ವದಾದ್ಯಂತ ಇರುವ ಕೋಟ್ಯಂತರ ಐಎಂಡಿಬಿ ಬಳಕೆದಾರರ ಪುಟ ವೀಕ್ಷಣೆಯ ಆಧಾರದ ಮೇಲೆ 2025ರ ಭಾರತದ ಬಹುನಿರೀಕ್ಷಿತ ಚಲನಚಿತ್ರಗಳ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದೆ. ಬಹುನಿರೀಕ್ಷಿತ ಚಿತ್ರಗಳಲ್ಲಿ ನಂ. 1 ಸ್ಥಾನದಲ್ಲಿ ಸಿಕಂದರ್ ಸಿನಿಮಾ ಇದೆ.
ಐಎಂಡಿಬಿಯ 2025ರ ಭಾರತದ ಬಹುನಿರೀಕ್ಷಿತ ಚಿತ್ರಗಳು :
ಸಿಕಂದರ್
ಟಾಕ್ಸಿಕ್
ಕೂಲಿ
ಕ್ರಿಶ್ 4
ಹೌಸ್‌ಫುಲ್ 5
ಬಾಘಿ 4
ದಿ ರಾಜಾ ಸಾಬ್
ವಾರ್ 2
ಎಲ್ 2: ಎಂಪುರಾನ್
ದೇವ
ಛಾವಾ
ಕಣ್ಣಪ್ಪ
ರೆಟ್ರೊ
ಥಗ್ ಲೈಫ್
ಜಾಟ್
ಸ್ಕೈಫೋರ್ಸ್
ಸಿತಾರೆ ಝಮೀನ್ ಪರ್
ಥಾಮಾ
ಕಾಂತಾರ ಎ ಲೆಜೆಂಡ್: ಚಾಪ್ಟರ್ 1
ಆಲ್ಫಾ
ಇದನ್ನೂ ಓದಿ : ಸ್ಯಾಂಡಲ್‌ವುಡ್‌ಗೆ ಮತ್ತೊಂದು ಆಘಾತ.. ಖ್ಯಾತ ಹಿರಿಯ ನಟ ಸರಿಗಮ ವಿಜಿ ಇನ್ನಿಲ್ಲ
2025ರಲ್ಲಿ ಬಿಡುಗಡೆ ಮಾಡಲು ಉದ್ದೇಶಿಸಲಾದ ಭಾರತೀಯ ಚಲನಚಿತ್ರಗಳಲ್ಲಿ, ಈ ಶೀರ್ಷಿಕೆಗಳು ಐಎಂಡಿಬಿ ಬಳಕೆದಾರರಲ್ಲಿ ಗ್ರಾಹಕರಲ್ಲಿ ಸ್ಥಿರವಾಗಿ ಹೆಚ್ಚು ಜನಪ್ರಿಯವಾಗಿದ್ದವು. ವಿಶ್ವಾದ್ಯಂತ ಮಾಸಿಕ 250 ಮಿಲಿಯನ್‌ಗಿಂತಲೂ ಹೆಚ್ಚು ಪುಟ ವೀಕ್ಷಣೆಗಳಿಂದ ಆಧರಿಸಿ ಈ ಪಟ್ಟಿಯನ್ನು ನಿರ್ಧರಿಸಲ್ಪಟ್ಟಿದೆ.
ಈ ಪಟ್ಟಿಯಲ್ಲಿರುವ 20 ಶೀರ್ಷಿಕೆಯಗಳ ಪೈಕಿ, 12 ಹಿಂದಿ, ಮೂರು ತಮಿಳು ಹಾಗೂ ಕನ್ನಡ, ಮಲಯಾಳಂ ಮತ್ತು ತೆಲುಗಿನ ತಲಾ ಒಂದು ಚಿತ್ರಗಳು ಇವೆ. ಅಕ್ಷಯ್ ಕುಮಾರ್ ನಟನೆಯ ಮೂರು ಚಿತ್ರಗಳು ಪಟ್ಟಿಯಲ್ಲಿವೆ. ಹೌಸ್ ಫುಲ್ 5 (ನಂ. 5), ಕಣ್ಣಪ್ಪ (ನಂ 12) ಮತ್ತು ಸ್ಕೈಫೋರ್ಸ್ (ನಂ. 16), ಮತ್ತು ಅವರಂತೆ ರಶ್ಮಿಕಾ ಮದಣ್ಣ ಅವರ ಸಿಕಂದರ್ (ನಂ. 1), ಛಾವಾ (ನಂ. 11) ಮತ್ತು ಥಾಮಾ (ನಂ.18). ಮೋಹನ್ ಲಾಲ್, ಪ್ರಭಾಸ್, ಹೃತಿಕ್ ರೋಶನ್, ಪೂಜಾ ಹೆಗಡೆ ಮತ್ತು ಕೈರಾ ಅಡ್ವಾಣಿ ನಟನೆಯ ಚಿತ್ರಗಳು ಕೂಡಾ ಈ ಪಟ್ಟಿಯಲ್ಲಿವೆ.
ಇದನ್ನೂ ಓದಿ : ಎಲ್ಲಾ ಲೆಕ್ಕಾಚಾರ ತಲೆಕೆಳಗೆ!ಮಿಡ್ ವೀಕ್ ಎಲಿಮಿನೇಶನ್ ಮಧ್ಯೆ ಟಾಪ್ 3 ಪಟ್ಟಕ್ಕೇರುವ ಸ್ಪರ್ಧಿಗಳು ಇವರೇ !
ಈ ಪಟ್ಟಿಯಲ್ಲಿರುವ 6 ಚಿತ್ರಗಳು ಸೀಕ್ವೆಲ್‌ಗಳಾಗಿದ್ದು, ಕ್ರಿಶ್ 4( ನಂ.4), ಹೌಸ್‌ಫುಲ್ (ನಂ 5), ಬಾಘಿ 4 (ನಂ. 6), ವಾರ್ 2 (ನಂ. 8), ಸಿತಾರೆ ಝಮೀನ್ ಪರ್ (ನಂ. 17) ಮತ್ತು ಕಾಂತಾರಾ ಎ ಲೆಜೆಂಡ್ : ಚಾಪ್ಟರ್ 1 (ನಂ. 19).ಸೀಕ್ವೆಲ್ ಸಿನಿಮಾಗಳಾಗಿವೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ