ಕಮಲ್ ಹಾಸನ್ ರಾಜಕೀಯಕ್ಕೆ ಬರಲು ಯಾರು ಕಾರಣ ಗೊತ್ತೇ?

ಈಗಾಗಲೇ ಮಕ್ಕಳ ನೀಧಿ ಮಯ್ಯಂ ಪಕ್ಷವನ್ನು ಸ್ಥಾಪನೆ ಮಾಡುವ ಮೂಲಕ ಸಿನಿಮಾದಿಂದ ಈಗ ಸಕ್ರೀಯ ರಾಜಕೀಯಕ್ಕೆ ಪಾದಾರ್ಪಣೆ ಮಾಡಿರುವ ಕಮಲ್ ಹಾಸನ್ ಈಗ ತಾವು ರಾಜಕೀಯ ಪ್ರವೇಶಿಸಲು ಒಬ್ಬ ಮಹಾನ್ ವ್ಯಕ್ತಿ ನೀಡಿದ ಸಲಹೆಯೇ ಕಾರಣ ಎನ್ನುವ ಅಪರೂಪದ ಸಂಗತಿಯನ್ನು ಈಗ ಹಂಚಿಕೊಂಡಿದ್ದಾರೆ.

Last Updated : Feb 5, 2019, 11:04 AM IST
ಕಮಲ್ ಹಾಸನ್ ರಾಜಕೀಯಕ್ಕೆ ಬರಲು ಯಾರು ಕಾರಣ ಗೊತ್ತೇ? title=

ನವದೆಹಲಿ: ಈಗಾಗಲೇ ಮಕ್ಕಳ ನೀಧಿ ಮಯ್ಯಂ ಪಕ್ಷವನ್ನು ಸ್ಥಾಪನೆ ಮಾಡುವ ಮೂಲಕ ಸಿನಿಮಾದಿಂದ ಈಗ ಸಕ್ರೀಯ ರಾಜಕೀಯಕ್ಕೆ ಪಾದಾರ್ಪಣೆ ಮಾಡಿರುವ ಕಮಲ್ ಹಾಸನ್ ಈಗ ತಾವು ರಾಜಕೀಯ ಪ್ರವೇಶಿಸಲು ಒಬ್ಬ ಮಹಾನ್ ವ್ಯಕ್ತಿ ನೀಡಿದ ಸಲಹೆಯೇ ಕಾರಣ ಎನ್ನುವ ಅಪರೂಪದ ಸಂಗತಿಯನ್ನು ಈಗ ಹಂಚಿಕೊಂಡಿದ್ದಾರೆ.

ಅವರ್ಯಾರು ಅಂತೀರಾ ಹಾಗಾದರೆ, ನಟ ಕಮಲ್ ಹಾಸನ್ ರಾಜಕೀಯಕ್ಕೆ ಬರಲು ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ್ ಅವರು ನೀಡಿದ ಸಲಹೆ ಮೇರೆಗೆ ತಾವು ರಾಜಕೀಯಕ್ಕೆ ಪ್ರವೇಶಿಸಿರುವುದಾಗಿ ಇಳಯರಾಜ್ ಅವರ ಎದುರುಗಡೆಯೇ ಹೇಳಿದ್ದಾರೆ. 

ತಮಿಳುನಾಡು ಚಿತ್ರನಿರ್ಮಾಪಕರು ಆಯೋಜಿಸಿದ್ದ ಇಳಯರಾಜ-75 ಕಾರ್ಯಕ್ರಮದಲ್ಲಿ ಭಾಗವಹಿಸಿ  ಮಾತನಾಡಿದ ಕಮಲ್‌ ಹಾಸನ್ " ತಮಗೆ ಇಳಯರಾಜ ಅವರು ಬಹಳ ವರ್ಷಗಳಿಂದ ಆತ್ಮೀಯರು ಅವರೇ ನನಗೆ ರಾಜಕೀಯಕ್ಕೆ ಹೋಗಿ ಜನಸೇವೆ ಮಾಡು ಎನ್ನುವ ಸಲಹೆ ನೀಡಿದ್ದರು ಎಂದು ಕಮಲ್  ಹೇಳಿದರು. 

ವಿಶೇಷವೆಂದರೆ ಈ ಕಾರ್ಯಕ್ರಮದಲ್ಲಿ ತಮಿಳು ಚಿತ್ರರಂಗದ ಘಟಾನುಘಟಿಗಳು ಅಲ್ಲಿ ನೆರೆದಿದ್ದರು.

\

Trending News