ಐಶ್ವರ್ಯಾ ರೈ ಜೀವನದಲ್ಲಿ ಅಭಿಷೇಕ್ ಬಚ್ಚನ್ ಬಂದಿದ್ದು ಹೇಗೆ? ಸದ್ಯ ವಿಚ್ಛೇದನ ಸುದ್ದಿ ಹರಿದಾಡ್ತಿರೋದು ಏಕೆ? ಇಲ್ಲಿದೆ ಅಸಲಿ ಸತ್ಯ!

Abhishek Bachchan-Aishwarya Rai: ಬಾಲಿವುಡ್‌ನ ಅತ್ಯಂತ ಸುಂದರ ಮತ್ತು ಅತ್ಯುತ್ತಮ ಜೋಡಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್  2007 ರಲ್ಲಿ ವಿವಾಹವಾದರು. ಆದರೆ ಕಳೆದ ಕೆಲವು ದಿನಗಳಿಂದ ಇದೀಗ ಐಶ್ವರ್ಯಾ ಮತ್ತು ಅಭಿಷೇಕ್ ಬೇರೆಯಾಗುತ್ತಿದ್ದಾರೆ, ಇಬ್ಬರ ನಡುವೆ ಮನಸ್ತಾಪವಿದೆ, ಶೀಘ್ರದಲ್ಲೇ ಅವರಿಬ್ಬರು ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ವದಂತಿಗಳು ಹರಡಿವೆ..

Written by - Savita M B | Last Updated : Aug 3, 2024, 01:09 PM IST
  • ಬಾಲಿವುಡ್ ಸುಂದರ ಜೋಡಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್
  • ಇಬ್ಬರೂ ಬ್ರೇಕಪ್‌ ಮಾಡಿಕೊಂಡಿದ್ದರು..
 ಐಶ್ವರ್ಯಾ ರೈ ಜೀವನದಲ್ಲಿ ಅಭಿಷೇಕ್ ಬಚ್ಚನ್ ಬಂದಿದ್ದು ಹೇಗೆ? ಸದ್ಯ ವಿಚ್ಛೇದನ ಸುದ್ದಿ ಹರಿದಾಡ್ತಿರೋದು ಏಕೆ? ಇಲ್ಲಿದೆ ಅಸಲಿ ಸತ್ಯ! title=

Aishwarya Rai: ಬಾಲಿವುಡ್ ಸುಂದರ ಜೋಡಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಅವರ ಪ್ರತ್ಯೇಕತೆಯ ಸುದ್ದಿ ಕೇವಲ ವದಂತಿಗಳಲ್ಲದೆ ಬೇರೇನೂ ಅಲ್ಲ ಎನ್ನಲಾಗುತ್ತಿದೆ... ಮತ್ತೊಂದೆಡೆ ನಟಿ ಈ ನಡುವೆ ಅವರ ಕುಟುಂಬದೊಂದಿಗೆ ಕಾಣಿಸಿಕೊಂಡಿಲ್ಲ ಹೀಗಾಗಿ ಅಭಿ ಐಶ್‌ ದೂರಾವಾಗಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.. 

ವಾಸ್ತವಾವಗಿ ಸಲ್ಮಾನ್‌ ಖಾನ್‌ ಜೊತೆಗಿನ ಬ್ರೇಕಪ್‌ ನಂತರ ನಟಿ ಐಶ್ವರ್ಯ ಮತ್ತು ಅಭಿಷೇಕ್ ಮೊದಲಬಾರಿಗೆ 2000 ರಲ್ಲಿ 'ಧಾಯಿ ಅಕ್ಷರ ಪ್ರೇಮ್' ಮತ್ತು 2003 ರಲ್ಲಿ 'ಕುಚ್ನಾಕಹೋ' ಚಿತ್ರದಲ್ಲಿ ಒಟ್ಟಿ ಗೆ ಕೆಲಸಮಾಡಿದರು.

ಇದನ್ನೂ ಓದಿ-ಬಿಗ್‌ಬಾಸ್‌ಗೆ ಇಬ್ಬರು ಹಾಟ್‌ ಬ್ಯೂಟೀಸ್‌ ಎಂಟ್ರಿ..! ಇವಾಗ್ಲೇ ಮೈ ಮೇಲೆ ಬಟ್ಟೆ ನಿಲ್ಲಲ್ಲ, ಇನ್ನು ದೊಡ್ಮನೆ ಒಳಗೆ.?.

ಇಲ್ಲಿಯವರೆಗೆ ಅಭಿಷೇಕ್ ಬಚ್ಚನ್ ಕರಿಷ್ಮಾ ಕಪೂರ್ ಮತ್ತು ಐಶ್ವರ್ಯಾ ರೈ ಸಲ್ಮಾನ್ ಖಾನ್ ಅವರೊಂದಿಗೆ ಸಂಬಂಧದಲ್ಲಿದ್ದರು. ಆದರೆ 2005ರಲ್ಲಿ ಐಶ್‌ ಹಾಗೂ ಅಭಿ ‘ಬಂಟಿ ಔರ್ ಬಬ್ಲಿ ’ ಚಿತ್ರದ ‘ಕಜ್ರಾ ರೇ’ ಹಾಡಿನ ಶೂಟಿಂಗ್‌ ವೇಳೆ ಇಬ್ಬರೂ ಕೊಂಚ ಹತ್ತಿರವಾದರು.. ಆ ಸಮಯದಲ್ಲಿ ಐಶ್ವರ್ಯಾ ಮತ್ತು ಅಭಿಷೇಕ್ ಇಬ್ಬರೂ ಒಂಟಿಯಾಗಿದ್ದರು ಎಂದರೇ ಇಬ್ಬರೂ ಬ್ರೇಕಪ್‌ ಮಾಡಿಕೊಂಡಿದ್ದರು.. 

2006 ಮತ್ತು 2007 ರ ನಡುವೆ, ಇಬ್ಬರೂ ಮೂರು ಚಿತ್ರಗಳಲ್ಲಿ ಒಟ್ಟಿ ಗೆ ಕೆಲಸಮಾಡಿದರು, ಈ ಮಧ್ಯೆ ಅವರ ನಿಕಟತೆ ಹೆಚ್ಚಾಗಿ.. ಅದೇ ಪ್ರೀತಿಗೆ ತಿರುಗಿ ಅದೇ ವರ್ಷದಲ್ಲಿ ಅಂದರೇ 2007ರಲ್ಲಿ ಇಬ್ಬರೂ ವಿವಾಹವಾದರು.. 

ಇದನ್ನೂ ಓದಿ-ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್‌ ಮಾಡಿದ್ದು ನಿಜ... ಆದ್ರೆ ಅದಕ್ಕೆ ಪವಿತ್ರಾ ಗೌಡ ಕೊಟ್ಟ ರಿಪ್ಲೈ ಏನು? ಸಿಕ್ಕೇಬಿಡ್ತು ಪಕ್ಕಾ ಮಾಹಿತಿ

ಸದ್ಯ ಐಶ್ವರ್ಯಾ ಹಾಗೂ ಅಭಿಷೇಕ್‌ ದೂರಾವಾಗಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.. ಇದಕ್ಕೆ ಮೂಲ ಕಾರಣವೆಂದರೇ ನಟಿ ತನ್ನ ಅತ್ತೆ ಜಯಾ ಬಚ್ಚನ್ ಮತ್ತು ಅವರ ಕುಟುಂಬದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿಲ್ಲ ಎಂದು ಹಲವು ಮಾಧ್ಯಮ ವರದಿಗಳಲ್ಲಿ ಹೇಳಲಾಗಿದೆ. ಇದಲ್ಲದೆ, ಕಾರ್ಯಕ್ರಮವೊಂದರಲ್ಲಿ ಅಭಿಷೇಕ್ ಬಚ್ಚನ್ ಮದುವೆಯ ಉಂಗುರವಿಲ್ಲದೆ ಕಾಣಿಸಿಕೊಂಡಿದ್ದರು.. 

ಬಳಿಕ ಅವರಿಬ್ಬರು ಸೋಷಿಯಲ್‌ ಮಿಟಿಯಾದಲ್ಲಿಯೂ ಅನ್‌ಫಾಲೋ ಮಾಡಿಕೊಂಡಿದ್ದರು.. ಅಲ್ಲದೇ ಇತ್ತೀಚೆಗೆ ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಮದುವೆಗೂ ದಂಪತಿಗಳು ಪ್ರತ್ಯೇಕವಾಗಿ ಆಗಮಿಸಿದ್ದರು.. ಜೊತೆಗೆ ಅಭಿಷೇಕ್‌ ಗ್ರೇ ಡಿವೋರ್ಸ್‌ ಪೋಸ್ಟ್‌ವೊಂದನ್ನು ಲೈಕ್‌ ಮಾಡಿದ್ದರು.. ಹೀಗೆ ಒಂದಾದ ಮೇಲೊಂದರಂತೆ ಅವರಿಬ್ಬರ ನಡುವಳಿಕೆಗಳು ವಿಚ್ಚೇದನ ಪಡೆಯಲಿದ್ದಾರೆ ಎನ್ನುವ ವದಂತಿಗೆ ಪುಷ್ಟಿ ನೀಡುತ್ತಿವೆ. ಆದರೆ ಈ ಬಗ್ಗೆ ಅವರಿಂದ ಯಾವುದೇ ಹೇಳಿಕೆಯಾಗಲಿ ಪ್ರತಿಕ್ರಿಯೆಯಾಗಲಿ ಬಂದಿಲ್ಲ.. 
 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News