ಬಾಕ್ಸ್‌ ಆಫೀಸ್‌ ‌'ಬಲಭೀಮ'ನ ಎಂಟ್ರಿಗೆ ಕ್ಷಣಗಣನೆ..! 160 ಭಾಷೆಗಳಲ್ಲಿ ರಿಲೀಸ್ ಆಗಲಿದೆ 'ಅವತಾರ್‌-2

Written by - Malathesha M | Edited by - Manjunath N | Last Updated : May 10, 2022, 09:21 PM IST
  • ಇನ್ನು ಅವತಾರ್‌ ಪಾರ್ಟ್‌ 2 ಟ್ರೈಲರ್‌ ವಿಚಾರಕ್ಕೆ ಬರೋದಾದ್ರೆ, ಜನರು ಟ್ರೈಲರ್‌ ನೋಡಿ ಶಿಳ್ಳೆ ಹೊಡೆದಿದ್ದಾರೆ.
  • ಇನ್ನೇನು ಥಿಯೇಟರ್‌ಗಳಿಗೆ ನುಗ್ಗಿ, ಚಪ್ಪಾಳೆ ತಟ್ಟೋದು ಬಾಕಿ ಅಷ್ಟೇ.
ಬಾಕ್ಸ್‌ ಆಫೀಸ್‌ ‌'ಬಲಭೀಮ'ನ ಎಂಟ್ರಿಗೆ ಕ್ಷಣಗಣನೆ..! 160 ಭಾಷೆಗಳಲ್ಲಿ ರಿಲೀಸ್ ಆಗಲಿದೆ 'ಅವತಾರ್‌-2 title=

ಅದು ಜಗತ್ತನ್ನೇ ಆಳಿದ ಸಿನಿಮಾ.ಆ ಚಿತ್ರ ರಿಲೀಸ್‌ ಆದಾಗ ವರ್ಲ್ಡ್‌ ವೈಡ್ ಬಾಕ್ಸ್‌ ಆಫಿಸ್‌ ಉಡೀಸ್‌ ಆಗೋಗಿತ್ತು. ಆ ರೇಂಜ್‌ಗೆ ಹವಾ ಎಬ್ಬಿಸಿದ್ದ ಸಿನಿಮಾದ ಸೀಕ್ವೆಲ್‌ ಸದ್ಯ ರಿಲೀಸ್‌ಗೆ ರೆಡಿಯಾಗಿದೆ. ಬರೋಬ್ಬರಿ 13 ವರ್ಷದ ನಂತರ ಬಾಕ್ಸ್‌ ಆಫಿಸ್‌ ಬಲಭೀಮ ಪಾರ್ಟ್‌ 2 ಮೂಲಕ ಎಂಟ್ರಿ ಕೊಡ್ತಿದ್ದು, ಟ್ರೈಲರ್‌ ಮೂಲಕ ಮಿಂಚಿನ ಸಂಚಲನ ಸೃಷ್ಟಿಮಾಡಿದೆ.

ಇದನ್ನೂ ಓದಿ - Mango Peel Benefits: ಬೇಸಿಗೆಯಲ್ಲಿ ಮಾವಿನ ಹಣ್ಣಿನ ಸಿಪ್ಪೆ ಬಳಸಿ ಈ ರೀತಿ ಪ್ರಯೋಜನ ಪಡೆಯಿರಿ

ಅವತಾರ್‌.. ಬಹುಶಃ ಈ ಹೆಸರು ಕೇಳಿದ್ರೆ ಸಾಕು ಜಗತ್ತಿನ ಪ್ರತಿಯೊಂದು ಸಿನಿ ಇಂಡಸ್ಟ್ರಿ ಕೂಡ ಶೇಕ್‌ ಆಗಿಬಿಡುತ್ತೆ.ಯಾಕೆ ಅಂತಾ ನಿಮಗೆ ಗೊತ್ತಾ..? ಯಾಕಂದ್ರೆ ಅವತಾರ್‌ ಅನ್ನೋ ಸಿನಿಮಾ ತೋರಿಸಿದ ಅವತಾರಗಳು ಅಂತಹ ಮಿಂಚು ಹರಿಸಿದ್ದವು. ಹೌದು, ಅವತಾರ್‌ ಸಿನಿಮಾದ ಪಾರ್ಟ್-1 2009ರಲ್ಲಿ ವರ್ಲ್ಡ್‌ವೈಡ್‌ ರಿಲೀಸ್‌ ಆಗಿತ್ತು.ಅವತಾರ್‌ ಚಾಪ್ಟರ್‌-1 ಊಹೆಗೂ ಮೀರಿದ ಸಕ್ಸಸ್‌ ಕಂಡಿತ್ತು. ಒಂದಲ್ಲ ಎರಡಲ್ಲ ಬರೋಬ್ಬರಿ 3 ಬಿಲಿಯನ್‌ ಡಾಲರ್‌ ಅಂದ್ರೆ 20 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಹಣ ಬಾಚಿಬಿಟ್ಟಿತ್ತು ಅವತಾರ್‌ ಪಾರ್ಟ್‌ 1 ಸಿನಿಮಾ.

No description available.

5 ಪಾರ್ಟ್‌ನಲ್ಲಿ ಅಬ್ಬರ
ಅರೆರೆ ಈಗ ಯಾಕೆ ಅವತಾರ್‌ ಮೂವಿ ವಿಷಯ ಅಂದ್ರ. ಅಷ್ಟಕ್ಕೂ ಈಗ ಅವತಾರ್‌ ಸಿನಿಮಾ ಬಗ್ಗೆ ಮಾತಾಡೋದಕ್ಕೆ ಬಲವಾದ ಕಾರಣ ಇದೆ. ಇದರ ಜೊತೆಗೆ ಅವತಾರ್‌ ಫ್ಯಾನ್ಸ್‌ಗೆ ಬಿಗ್‌ ಅಪ್‌ಡೇಟ್‌ ಇದೆ.ಅದೇನಂದ್ರೆ ಅವತಾರ್‌ ಪಾರ್ಟ್‌ 2 ಇದೇ ವರ್ಷದ‌ ಡಿಸೆಂಬರ್‌ನಲ್ಲಿ 160ಕ್ಕೂ ಹೆಚ್ಚು ಭಾಷೆಗಳಲ್ಲಿ ರಿಲೀಸ್‌ ಆಗುತ್ತಿದೆ. ಇದು ಬಹುತೇಕರಿಗೆ ಗೊತ್ತಿರೋ ಸಂಗತಿ.ಇದರ ಜೊತೆಗೆ ಮತ್ತೆ ಒಂದಷ್ಟು ಬಿಗ್‌ ಅಪ್‌ಡೇಟ್‌ಗಳು ಸಿಕ್ಕಿವೆ. ಅಷ್ಟಕ್ಕೂ ಅವತಾರ್‌ ಒಟ್ಟು 5 ಪಾರ್ಟ್‌ ಹೊಂದಿರಲಿದೆಯಂತೆ. ಈ ಪೈಕಿ ಅವತಾರ್-3 2024ರ ಡಿಸೆಂಬರ್ 20ರಂದು ರಿಲೀಸ್‌ ಆದ್ರೆ, 2026ರ ಡಿಸೆಂಬರ್ 18ಕ್ಕೆ ಅವತಾರ್-4  ಹಾಗೂ 2028ರ ಡಿಸೆಂಬರ್ 22ರಂದು ಅವತಾರ್ ಪಾರ್ಟ್ 5 ರಿಲೀಸ್‌ ಆಗಲಿದೆ.

ಇದನ್ನೂ ಓದಿ -  ಮಾವಿನಹಣ್ಣು ತಿಂದ ಮೇಲೆ ಈ 5 ವಸ್ತುಗಳನ್ನು ಸೇವಿಸಲೇಬಾರದು

₹20 ಸಾವಿರ ಕೋಟಿ
ಅವತಾರ್‌ ಒಂದು ಬಿಗ್‌ ಬಜೆಟ್‌ ಸಿನಿಮಾ ಅನ್ನೋದಕ್ಕಿಂತ, ನೂರಾರು ಕೋಟಿ ಅಭಿಮಾನಿಗಳನ್ನು ಹೊಂದಿರುವ ಮೂವಿ. ಹೀಗಾಗಿ ಅವತಾರ್‌ ಭಾಗ 2ರಲ್ಲಿ ಮತ್ತೊಂದು ರೆಕಾರ್ಡ್‌ ಕ್ರಿಯೇಟ್‌ ಮಾಡೋಕೆ ದಾಪುಗಾಲು ಇಟ್ಟಿದೆ ಜೇಮ್ಸ್‌ ಕ್ಯಾಮರೋನ್‌ ಆಂಡ್‌ ಟೀಂ.2009ರಲ್ಲೇ 20 ಸಾವಿರ ಕೋಟಿಗೂ ಹೆಚ್ಚು ಕಲೆಕ್ಷನ್‌ ಮಾಡಿದ್ದ ಅವತಾರ್‌ ಪಾರ್ಟ್‌ 1 ಇದೀಗ ಪಾರ್ಟ್‌ 2ರಲ್ಲಿ ಮತ್ತೊಂದು ಇತಿಹಾಸವನ್ನೇ ಸೃಷ್ಟಿಮಾಡಲು ಸಜ್ಜಾಗಿದೆ.ಸ್ಟಾರ್‌ ಡೈರೆಕ್ಟರ್‌ ಜೇಮ್ಸ್‌ ಕ್ಯಾಮರೋನ್‌ ಮತ್ತೊಮ್ಮೆ ವರ್ಲ್ಡ್‌ ಬಾಕ್ಸ್‌ ಆಫಿಸ್‌ನ ರೂಲ್‌ ಮಾಡಲು ಎಂಟ್ರಿ ಕೊಡುತ್ತಿದ್ದಾರೆ.

ಫ್ಯಾನ್ಸ್‌ ಕನಸು..!
ಒಂದು ಕಡೆ ಅವತಾರ್‌ ಪಾರ್ಟ್‌ 2 ರಿಲೀಸ್‌ಗೆ ಕೌಂಟ್‌ಡೌನ್‌ ಶುರುವಾದ ಬೆನ್ನಲ್ಲೇ, ಟ್ರೈಲರ್‌ ಕೂಡ ರಿಲೀಸ್‌ ಆಗಿದೆ.ಅವತಾರ್: ದಿ ವೇ ಆಫ್ ವಾಟರ್' ಹೆಸರಿನಲ್ಲಿ ಅವತಾರ್‌ ಪಾರ್ಟ್‌ 2 ಬಿಡುಗಡೆಯಾಗುತ್ತಿದೆ. ಭಾಗ ಒಂದರಲ್ಲಿ ತನ್ನದೇ ಆದ ವಿಚಿತ್ರ ಲೋಕ ಹಾಗೂ ಸುಂದರವಾದ ಕಾಡು ಮತ್ತು ವಿಚಿತ್ರ ಪ್ರಾಣಿ ಹಾಗೂ ಪಕ್ಷಿಗಳನ್ನ ತೋರಿಸಿ ಅವತಾರ್‌ ಪ್ರೇಕ್ಷಕನ ಮನಸ್ಸು ಗೆದ್ದು ಬೀಗಿತ್ತು. ಇದೀಗ ನೀರಿನ ಮೇಲೆ ತನ್ನ ಆಟ ತೋರಿಸಲು ಅವತಾರ್‌ ಸಕಲ ಸಿದ್ಧತೆ ನಡೆಸಿದ್ದು, 2022ರ ಡಿಸೆಂಬರ್‌ಗೆ ಫ್ಯಾನ್ಸ್‌ ಕನಸು ನನಸಾಗಲಿದೆ.No description available.

ಇದನ್ನೂ ಓದಿ: ಬಿಜೆಪಿ ಸೇರ್ತಾರಾ ಸೌರವ್ ಗಂಗೂಲಿ...? ಗಂಗೂಲಿ ಮನೆಯಲ್ಲಿ ಔತಣಕೂಟದಲ್ಲಿ ಭಾಗಿಯಾಗಲಿರುವ ಅಮಿತ್ ಶಾ..!

ಇನ್ನು ಅವತಾರ್‌ ಪಾರ್ಟ್‌ 2 ಟ್ರೈಲರ್‌ ವಿಚಾರಕ್ಕೆ ಬರೋದಾದ್ರೆ, ಜನರು ಟ್ರೈಲರ್‌ ನೋಡಿ ಶಿಳ್ಳೆ ಹೊಡೆದಿದ್ದಾರೆ.ಇನ್ನೇನು ಥಿಯೇಟರ್‌ಗಳಿಗೆ ನುಗ್ಗಿ, ಚಪ್ಪಾಳೆ ತಟ್ಟೋದು ಬಾಕಿ ಅಷ್ಟೇ. ಯಾಕಂದ್ರೆ ಅವತಾರ್‌ ಸಿನಿಮಾಗಾಗಿ 13 ವರ್ಷಗಳ ಕಾಲ ಕಷ್ಟಪಟ್ಟಿರುವ ಚಿತ್ರತಂಡ, ಮತ್ತೊಂದು ಅದ್ಭುತ ಲೋಕ ಸೃಷ್ಟಿಸಿದೆ. ಈ ಅದ್ಭುತ ಲೋಕವನ್ನು ಕಣ್ತುಂಬಿಕೊಳ್ಳಲು ಇನ್ನೂ 7 ತಿಂಗಳು ಕಾಯಲೇಬೇಕಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News