ನಾಗ ಚೈತನ್ಯ ಮತ್ತು ಸಮಂತಾ ಡಿವೋರ್ಸ್ ಗಾಸಿಪ್: ಬೋಲ್ಡ್ ನಟನೆಯಿಂದ ಹಾಳಾಯ್ತಾ ಸಂಬಂಧ?

ಬಾಲಿವುಡ್ ನಟ ಅಮೀರ್ ಖಾನ್ ಗಾಗಿ ಅಕ್ಕಿನೇನಿ ಕುಟುಂಬ ಆಯೋಜಿಸಿದ್ದ ಔತಕೂಟದಲ್ಲಿ ನಟಿ ಸಮಂತಾ ಭಾಗವಹಿಸಿರಿಲ್ಲವೆಂದು ತಿಳಿದುಬಂದಿದೆ.

Written by - Puttaraj K Alur | Last Updated : Sep 25, 2021, 10:34 AM IST
  • ವಿಚ್ಛೇದನದ ಮೂಲಕ ದೂರವಾಗ್ತಾರಾ ನಾಗ ಚೈತನ್ಯ ಮತ್ತು ಸಮಂತಾ ಅಕ್ಕಿನೇನಿ
  • ತೆಲುಗು ಚಿತ್ರರಂಗದ ಸೂಪರ್‌ಸ್ಟಾರ್‌ ದಂಪತಿಯ ವೈವಾಹಿಕ ಸಂಬಂಧ ಹಾಳಾಗಲು ಕಾರಣವೇನು..?
  • ಟಾಲಿವುಡ್ ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ ನಾಗಚೈತನ್ಯ ಮತ್ತು ಸಮಂತಾ ಡಿವೋರ್ಸ್ ಸುದ್ದಿ
ನಾಗ ಚೈತನ್ಯ ಮತ್ತು ಸಮಂತಾ ಡಿವೋರ್ಸ್ ಗಾಸಿಪ್: ಬೋಲ್ಡ್ ನಟನೆಯಿಂದ ಹಾಳಾಯ್ತಾ ಸಂಬಂಧ?  title=
ನಾಗಚೈತನ್ಯ ಮತ್ತು ಸಮಂತಾ ಪರಸ್ಪರ ದೂರವಾಗ್ತಾರಾ? (Photo Courtesy: @Zee News)

ನವದೆಹಲಿ: ತೆಲುಗು ಚಿತ್ರರಂಗದ ಸೂಪರ್‌ಸ್ಟಾರ್‌ ದಂಪತಿ ನಾಗ ಚೈತನ್ಯ(Naga Chaitanya) ಮತ್ತು ಸಮಂತಾ ಅಕ್ಕಿನೇನಿ ಅವರ ವೈವಾಹಿಕ ಸಂಬಂಧ ಇತ್ತೀಚೆಗೆ ಭಾರೀ ಸುದ್ದಿಯಲ್ಲಿದೆ. ಇವರಿಬ್ಬರು ಪರಸ್ಪರ ಬೇರ್ಪಟ್ಟಿದ್ದಾರೆ ಮತ್ತು ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂಬ ಊಹಾಪೋಹಗಳು ಎದ್ದಿವೆ. ಈ ವದಂತಿಗಳ ಬಗ್ಗೆ ವಿಚಾರಿಸಿದಾಗ ಇಬ್ಬರೂ ಯಾವುದೇ ಪ್ರಶ್ನೆಗಳಿಗೆ ಉತ್ತರ ನೀಡಿಲ್ಲ. ಪ್ರಸ್ತುತ ನಾಗ ಚೈತನ್ಯ ಅವರು ಸಾಯಿ ಪಲ್ಲವಿ ಜೊತೆಗಿನ ‘ಲವ್ ಸ್ಟೋರಿ’ ಚಿತ್ರದ ಮೂಲಕ ಗಮನ ಸೆಳೆದಿದ್ದಾರೆ. ಬಾಲಿವುಡ್ ನಟ ಅಮೀರ್ ಖಾನ್ ಇತ್ತೀಚೆಗೆ ಚಿತ್ರದ ಪ್ರಚಾರಕ್ಕಾಗಿ ಹೈದರಾಬಾದ್‌ಗೆ ಹೋಗಿದ್ದರು.

ಅಮೀರ್ ಖಾನ್ ಗಾಗಿ ನಾಗಚೈತನ್ಯ ಮತ್ತು ಅವರ ತಂದೆ ಸೂಪರ್‌ಸ್ಟಾರ್ ನಾಗಾರ್ಜುನ ಅವರು ಔತಣಕೂಟ ಆಯೋಜಿಸಿದ್ದರು. ಈ ಪಾರ್ಟಿಯ ಅನೇಕ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿವೆ. ಆದರೆ ಈ ಔತಣಕೂಟದಲ್ಲಿ ಸಮಂತಾ ಅವರ ಅನುಪಸ್ಥಿತಿಯು ಅಭಿಮಾನಿಗಳ ಗಮನ ಸೆಳೆದಿದೆ. ನಟಿ ಔತನಕೂಟದಲ್ಲಿ ಭಾಗಿಯಾಗದಿರುವುದು ನಾಗಚೈತನ್ಯ ಮತ್ತು ಸಮಂತಾ(Samantha Akkineni) ದೂರವಾಗಲು ಪ್ರಯತ್ನಿಸುತ್ತಿದ್ದಾರೆಂಬುದಕ್ಕೆ ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ.

ಇದನ್ನೂ ಓದಿ: Rashmika Mandanna: ಸಿನಿಮಾ ಸೆಟ್ ನಲ್ಲಿ ಸ್ಟಾರ್ ಆದ ನಟಿ ರಶ್ಮಿಕಾ ಮಂದಣ್ಣರ ಮುದ್ದಿನ ಶ್ವಾನ..!

ಟಾಲಿವುಡ್​(Tollywood) ತುಂಬಾ ಈಗ ಸಮಂತಾ- ನಾಗಚೈತನ್ಯ ದಂಪತಿ ಡಿವೋರ್ಸ್​ನದ್ದೇ ಸದ್ದು. ಆದರೆ ಈ ಬಗ್ಗೆ ಇಬ್ಬರೂ ತುಟಿ ಬಿಚ್ಚಿ ಮಾತನಾಡುತ್ತಿಲ್ಲ. ಹೀಗಾಗಿ ಇವರಿಬ್ಬರ ವೈವಾಹಿಕ ಸಂಬಂಧದ ಬಗ್ಗೆ ಅನೇಕ ಊಹಾಪೋಹಗಳು ಹರಿದಾಡುತ್ತಿವೆ. ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಜೋಡಿಯ ಜೀವನದಲ್ಲಿ ಇದ್ದಕ್ಕಿದ್ದಂತೆ ಏನಾಯ್ತು ಅನ್ನೋ ಪ್ರಶ್ನೆ ಮೂಡಿದೆ. ಸೂಪರ್‌ಸ್ಟಾರ್‌ ದಂಪತಿಯ ಅಭಿಮಾನಿಗಳಂತೂ ಇವರೇಕೆ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆಂದು ತಲೆ ಕೆಡೆಸಿಕೊಂಡಿದ್ದಾರೆ. ಈ ಮಧ್ಯೆ ಫ್ಯಾಮಿಲಿಮ್ಯಾನ್-2 ವೆಬ್ ಸೀರಿಸ್​ನಲ್ಲಿ ಸಮಂತಾ ಬೋಲ್ಡ್ ಆಗಿ ನಟಿಸಿದ್ದೇ ಇವರ ಸಂಬಂಧ ಹಾಳಾಗಲು ಮುಖ್ಯ ಕಾರಣ ಅಂತಾ ಹೇಳಲಾಗುತ್ತಿದೆ.  

ಹೌದು, ಫ್ಯಾಮಿಲಿಮ್ಯಾನ್​-2 ವೆಬ್​ ಸೀರಿಸ್(The Family Man-2 Web Series)​ನಲ್ಲಿ ರಾಜಿ ಎನ್ನುವ ಪಾತ್ರದಲ್ಲಿ ಸಮಂತಾ ಬೋಲ್ಡ್ ಆಗಿ ನಟಿಸಿದ್ದರು. ಅವರ ನಟನೆಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕಥೆಯ ಪಾತ್ರಕ್ಕೆ ತಕ್ಕ ನ್ಯಾಯವನ್ನು ಸಮಂತಾ ಒದಗಿಸಿದ್ದರು. ಕೆಲ ದೃಶ್ಯಗಳಲ್ಲಿ ಅವರು ಬೋಲ್ಡ್ ಆಗಿ ಅಭಿನಯಿಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದರು. ಮದುವೆಯಾದ ಬಳಿಕವೂ ನಟನೆ ಮುಂದುವರಿಸಿದ ಸಮಂತಾ, ಅಕ್ಕಿನೇನಿ ಕುಟುಂಬವನ್ನು ಕೇರ್ ಮಾಡದೆ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: Viral Video: ರಿಯಾಲಿಟಿ ಶೋ ವೇದಿಕೆಯಲ್ಲಿಯೇ ಸ್ಪರ್ಧಿಯ ಕೆನ್ನೆ ಕಚ್ಚಿದ ಕನ್ನಡ ನಟಿ..!

ಹಾಟ್​ ಹಾಟ್​ ಫೋಟೋಶೂಟ್​​ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಗ್ಲಾಮರಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಫ್ಯಾಮಿಲಿಮ್ಯಾನ್-2 ವೆಬ್​ ಸೀರಿಸ್​ನಲ್ಲಿ ಒಂದು ಹೆಜ್ಜೆ ಮುಂದೆ ಹೋದ ಅವರು ಸಿಕ್ಕಾಪಟ್ಟೆ ಬೋಲ್ಡ್​ ಆಗಿ ಅಭಿನಯಿಸಿದ್ದರು. ಇದಾದ ಬಳಿಕ ದಂಪತಿ ನಡುವಿನ ಅಂತರ ಮತ್ತಷ್ಟು ಹೆಚ್ಚಾಗಿದೆ ಅಂತಾ ಹೇಳಲಾಗುತ್ತಿದೆ. ದಂಪತಿಗಳು ವಿಚ್ಛೇದನದೊಂದಿಗೆ ದೂರವಾಗಲು ನಿರ್ಧರಿಸಿದ್ದಾರೆಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಇನ್ನೂ ಯಾವುದೇ ಸ್ಪಷ್ಟನೆಯನ್ನು ನಟ-ನಟಿ ಇಬ್ಬರೂ ನೀಡಿಲ್ಲ.

ಸದ್ಯ ಟಾಲಿವುಡ್ ಅಂಗಳದಲ್ಲಿ ಸಮಂತಾ ಮತ್ತು ನಾಗಚೈತನ್ಯ ಡಿವೋರ್ಸ್ ಗಾಸಿಪ್(Naga Chaitanya & Samantha Divorce) ಸಖತ್ ಸದ್ದು ಮಾಡುತ್ತಿದೆ. ಈ ಎಲ್ಲಾ ಅಂತೆ-ಕಂತೆಗಳಿಗೆ ಸ್ವತಃ ಸ್ಟಾರ್ ದಂಪತಿಯೇ ಸ್ಪಷ್ಟನೆ ನೀಡಬೇಕಾಗಿದೆ. ಇಬ್ಬರ ನಡುವಿನ ಮುನಿಸಾದರೂ ಏನೂ ಎಂದು ತಲೆಕೆಡಿಸಿಕೊಂಡಿರುವ ಅಭಿಮಾನಿಗಳು ಕೂಡ ಅವರ ಉತ್ತರಕ್ಕಾಗಿ ಕಾಯುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News