ಬೆಂಗಳೂರು : ಗುರು ಶಿಷ್ಯರು (gurushishyaru) ಸಿನೆಮಾ ಯಾರಿಗೆ ಗೊತ್ತಿಲ್ಲ. ಗುರುಶಿಷ್ಯರು ಅಂದಾಕ್ಷಣ ದ್ವಾರಕೀಶ್ , (dwarakeesh)ವಿಷ್ಣುವರ್ಧನ್ ಅಭಿನಯದ ಚಿತ್ರದ ತುಣುಕು ಕಣ್ಣ ಮುಂದೆ ಬರುತ್ತದೆ. ಇದೀಗ 40 ವರ್ಷಗಳ ನಂತರ ಮತ್ತೆ ಗುರುಶಿಷ್ಯರು ಸಿನೆಮಾ ತೆರೆಗೆ ಬರಲಿದೆ. ಆದರೆ ಈ ಬಾರಿ ದ್ವಾರಕೀಶ್ ಬದಲಾಗಿ ಕಾಮಿಡಿ ಕಿಂಗ್ ಶರಣ್ (sharan) ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.
https://zeenews.india.com/kannada/tags/sharan
ನಾಯಕ ಶರಣ್ ( ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ದ್ವಾರಕೀಶ್ ಗೆ ಧನ್ಯವಾದ ಹೇಳಿರುವ ಶರಣ್ ಹೊಸ ಗುರುಶಿಷ್ಯರು ಚಿತ್ರಕ್ಕೆ ಎಲ್ಲರ ಹಾರೈಕೆ ಕೇಳಿಕೊಂಡಿದ್ದಾರೆ. ಶರಣ್ ಹಂಚಿಕೊಂಡಿರುವ ಚಿತ್ರದ ಫಸ್ಟ್ ಲುಕ್ ನಲ್ಲಿ (first look) ಒಂದು ಕಡೆ ಶರಣ್ ಮತ್ತೊಂದು ಕಡೆ ಮಕ್ಕಳು ಹಗ್ಗಜಗ್ಗಾಟ ಮಾಡುತ್ತಿರುವುದು ಕಂಡುಬರುತ್ತದೆ.
ಇದನ್ನೂ ಓದಿ: ಶ್ರೀಮುರುಳಿ ಹುಟ್ಟುಹಬ್ಬಕ್ಕೆ 'ಬಘೀರ' ನ ಗಿಫ್ಟ್ ನೀಡಿದ ಹೊಂಬಾಳೆ ಫಿಲಂಸ್
ಹೊಸ ಗುರುಶಿಷ್ಯರು ಚಿತ್ರ 1995ರ ಕಾಲಘಟ್ಟದ ಕಥೆಯನ್ನು ಒಳಗೊಂಡಿದೆ ಎನ್ನುವುದನ್ನು ಕೂಡಾ ಶರಣ್ ಹೇಳಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದು, ಜಡೇಶ್ ಹಂಪಿ ನಿರ್ದೇಶನವಿದೆ. ಲಡ್ಡು ಸಿನಿಮಾ ಹೌಸ್ ಮತ್ತು ತರುಣ್ ಸುಧೀರ್ (tarun sudheer) ಕ್ರಿಯೇಟಿವ್ಸ್ ಚಿತ್ರವನ್ನು ನಿರ್ಮಿಸಲಿದೆ. ಜನವರಿಯಿಂದ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಚಿತ್ರವು ಸ್ಥಳೀಯ ಕ್ರೀಡೆಯಾದ ಖೋಖೋವನ್ನು (kho kho)ಮುನ್ನಲೆಗೆ ತರಲಿದೆ ಎನ್ನುವುದು ಸಿನೆಮಾ ತಂಡದ ವಿಶ್ವಾಸ.
Prepare yourself to be taken on an amaze spree! Raising the screens off our grand title - #GuruShishyaru 🥳
A huge thanks to #Dwarakish Sir for releasing the title 🤗
ನಿರ್ಮಾಪಕನಾಗಿ ನನ್ನ ಮೊದಲ ಪ್ರಯತ್ನ - #ಗುರುಶಿಷ್ಯರು. ಹರಸಿ, ಹಾರೈಸಿ..https://t.co/TogiY6oFnE@realSharaan @AJANEESHB— Tharun Sudhir (@TharunSudhir) December 21, 2020
.ಇದನ್ನೂ ಓದಿ : KGF chapter 2 ಟೀಸರ್ ಬಿಡುಗಡೆ ಬಗ್ಗೆ ಸಿಹಿ ಸುದ್ದಿ ಹಂಚಿಕೊಂಡ ಪ್ರಶಾಂತ್ ನೀಲ್
1981ರಲ್ಲಿ ಬಿಡುಗಡೆಯಾದ ಗುರುಶಿಷ್ಯರು ಚಿತ್ರವನ್ನು ದ್ವಾರಕೀಶ್ ನಿರ್ಮಿಸಿ, ಹೆಚ್ ಆರ್ ಭಾರ್ಗವ ನಿರ್ದೇಶಿಸಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ Android Link - https://bit.ly/3hDyh4G iOS Link - https://apple.co/3loQYe ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.