ಆಗಸ್ಟ್ 12ರಂದು "ಗಾಳಿಪಟ 2" ಎಲ್ಲೆಲ್ಲಿ ಹಾರಲಿದೆ ಗೊತ್ತಾ..!?

ಈ ಹಿಂದೆ ತಯಾರಾಗಿದ್ದ ಗಾಳಿಪಟ ಚಿತ್ರ ಸಾಕಷ್ಟು ಸದ್ದು ಮಾಡಿತ್ತು. ಅಲ್ಲದೆ ಗಲ್ಲಾ ಪೆಟ್ಟಿಗೆಯಲ್ಲೂ ಯಶಸ್ವಿಯಾಗಿತ್ತು. ಇದೀಗ "ಗಾಳಿಪಟ 2" ಕೂಡ ರೆಡಿಯಾಗಿದ್ದು, ವಿಶ್ವಾದ್ಯಂತ ಹಾರಲು ಮುಹೂರ್ತ ಕೂಡ ಫಿಕ್ಸ್‌ ಆಗಿದೆ.   

Written by - YASHODHA POOJARI | Edited by - Ranjitha R K | Last Updated : May 11, 2022, 12:12 PM IST
  • ಯೋಗರಾಜ್ ಭಟ್ ಗಣೇಶ್ ಜೋಡಿಯಲ್ಲಿ ಬರುತ್ತಿರುವ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯಿದೆ.
  • ಗಾಳಿಪಟ 2" ರೆಡಿಯಾಗಿದ್ದು, ವಿಶ್ವಾದ್ಯಂತ ಹಾರಲು ಮುಹೂರ್ತ ಫಿಕ್ಸ್‌ ಆಗಿದೆ.
  • ಈ ಹಿಂದೆ ತಯಾರಾಗಿದ್ದ ಗಾಳಿಪಟ ಚಿತ್ರ ಸಾಕಷ್ಟು ಸದ್ದು ಮಾಡಿತ್ತು
 ಆಗಸ್ಟ್ 12ರಂದು "ಗಾಳಿಪಟ 2" ಎಲ್ಲೆಲ್ಲಿ ಹಾರಲಿದೆ ಗೊತ್ತಾ..!? title=
Galipata 2 release date (photo twitter)

ಬೆಂಗಳೂರು : ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಸದಭಿರುಚಿಯ ಸಿನಿಮಾಗಳನ್ನು ನೀಡಿರುವ ಯೋಗರಾಜ್ ಭಟ್ ನಿರ್ದೇಶನದ, ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್, ಪವನ್ ಕುಮಾರ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ, ಬಹು ನಿರೀಕ್ಷಿತ "ಗಾಳಿಪಟ 2" ಚಿತ್ರ ಆಗಸ್ಟ್ 12ರಂದು ಬಿಡುಗಡೆಯಾಗುತ್ತಿದೆ. ಕರ್ನಾಟಕದಲ್ಲಷ್ಟೇ ಅಲ್ಲದೇ ಹೊರರಾಜ್ಯ ಹಾಗೂ ಹೊರದೇಶಗಳಲ್ಲೂ "ಗಾಳಿಪಟ 2" ಬಿಡುಗಡೆಯಾಗಲಿದೆ. 

ಸೂರಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ರಮೇಶ್ ರೆಡ್ಡಿ ಅವರು ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಬಹಳ ದಿನಗಳ ನಂತರ ಯೋಗರಾಜ್ ಭಟ್ - ಗಣೇಶ್ ಜೋಡಿಯಲ್ಲಿ ಬರುತ್ತಿರುವ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯಿದೆ. ಈಗಾಗಲೇ ಟೀಸರ್ ಹಾಗೂ ಹಾಡಿನ ಮೂಲಕ "ಗಾಳಿಪಟ 2" ಜನಮನ ಗೆದ್ದಿದೆ. ಅದರಲ್ಲೂ ಇತ್ತೀಚೆಗೆ ಬಿಡುಗಡೆಯಾದ ಪರೀಕ್ಷೆ ಹಾಡಿಗಂತೂ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಸಂತೋಷ್ ರೈ ಪಾತಾಜೆ ಈ ಚಿತ್ರದ ಛಾಯಾಗ್ರಾಹಕರು.

ಇದನ್ನೂ ಓದಿ : ವಿದ್ಯುತ್‌ ಸ್ಪರ್ಶಿಸಿ ಜ್ಯೂ. ರವಿಚಂದ್ರನ್‌ ನಿಧನ

ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್, ಪವನ್ ಕುಮಾರ್, ಅನಂತನಾಗ್, ರಂಗಾಯಣ ರಘು, ಬುಲೆಟ್ ಪ್ರಕಾಶ್, ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಸುಧಾ ಬೆಳವಾಡಿ, ಪದ್ಮಜಾರಾವ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ನಿಮಗೆಲ್ಲಾ ಗೊತ್ತಿರುವಂತೆ ಈ ಹಿಂದೆ ತಯಾರಾಗಿದ್ದ ಗಾಳಿಪಟ ಚಿತ್ರ ಸಾಕಷ್ಟು ಸದ್ದು ಮಾಡಿತ್ತು. ಅಲ್ಲದೆ ಗಲ್ಲಾ ಪೆಟ್ಟಿಗೆಯಲ್ಲೂ ಯಶಸ್ವಿಯಾಗಿತ್ತು. ಇದೀಗ "ಗಾಳಿಪಟ 2" ಕೂಡ ರೆಡಿಯಾಗಿದ್ದು, ವಿಶ್ವಾದ್ಯಂತ ಹಾರಲು ಮುಹೂರ್ತ ಕೂಡ ಫಿಕ್ಸ್‌ ಆಗಿದೆ. 

ಇದನ್ನೂ ಓದಿ : ‘KGF-2’ ಕಣ್ತುಂಬಿಕೊಂಡಿದ್ದು ಎಷ್ಟು ಜನ..? ಕನ್ನಡ ಸಿನಿಮಾದ ಮತ್ತೊಂದು ಸಾಧನೆ!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News