Gadar 2: ಅತಿಯಾದ ದೇಶಪ್ರೇಮ ಕೂಡ ಹಾನಿಕರ..! ಸನ್ನಿ ಡಿಯೋಲ್‌ ಚಿತ್ರವನ್ನು ನಸೀರುದ್ದೀನ್ ಶಾ ಟೀಕಿಸಿದ್ದೇಕೆ?

Naseeruddin Shah on Gadar 2 : ಸನ್ನಿ ಡಿಯೋಲ್‌ ನಟನೆಯ ‘ಗದರ್ 2’ ಸಿನಿಮಾ ರಿಲೀಸ್‌ ಆಗಿ ಸಖತ್‌ ಸೌಂಡ್‌ ಮಾಡುವುದರ ಜೊತೆಗೆ ಸಾಕಷ್ಟು ವಿವಾದಗಳನ್ನು ಸೃಷ್ಟಿಸಿತ್ತು. ಸದ್ಯ ಈ ಸಿನಿಮಾದ ಬಗ್ಗೆ ಬಾಲಿವುಡ್‌ನ ಖ್ಯಾತ ನಟ ನಸೀರುದ್ದೀನ್ ಶಾ ಟೀಕೆ ಮಾಡಿದ್ದಾರೆ. 

Written by - Savita M B | Last Updated : Sep 12, 2023, 02:21 PM IST
  • ವಿವಾದಗಳಿದ್ದರೂ ಸಹ ಸನ್ನಿ ಡಿಯೋಲ್ ಅವರ ‘ಗದರ್ 2’ ಸಿನಿಮಾ ಭರ್ಜರಿ ಕಲೆಕ್ಷನ್‌ ಮಾಡಿತ್ತು
  • ಕೆಲವೊಂದು ಸೀನ್‌ಗಳ ಮೂಲಕ ಸೋಷಿಯಲ್‌ ಮಿಡಿಯಾದಲ್ಲಿ ಸಂಚಲನ ಮೂಡಿಸಿದ್ದ‘ಗದರ್ 2’
  • ಇದೀಗ ಖ್ಯಾತ ನಟರೊಬ್ಬರು ‘ಗದರ್ 2’ ಸಿನಿಮಾ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
Gadar 2: ಅತಿಯಾದ ದೇಶಪ್ರೇಮ ಕೂಡ ಹಾನಿಕರ..! ಸನ್ನಿ ಡಿಯೋಲ್‌ ಚಿತ್ರವನ್ನು ನಸೀರುದ್ದೀನ್ ಶಾ ಟೀಕಿಸಿದ್ದೇಕೆ?  title=

Gadar 2 : ವಿವಾದಗಳಿದ್ದರೂ ಸಹ ಸನ್ನಿ ಡಿಯೋಲ್ ಅವರ ‘ಗದರ್ 2’ ಸಿನಿಮಾ 500 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಜನರಿಂದ ಮೆಚ್ಚುಗೆ ಪಡೆದಿತ್ತು. ಮಗನ ರಕ್ಷಣೆಗೆ ಪಾಕಿಸ್ತಾನಕ್ಕೆ ಹೋಗುವ ತಂದೆಯ ಪಾತ್ರಕ್ಕೆ ಸನ್ನಿಡಿಯೋಲ್‌ ಜೀವ ತುಂಬಿದ್ದರು. ಈ ಚಿತ್ರದಲ್ಲಿ ಅಮೀಷಾ ಪಟೇಲ್ ಮೊದಲಾದವರು ನಟಿಸಿದ್ದು, ಅನಿಲ್ ಶರ್ಮಾ ಅವರು ನಿರ್ದೇಶನ ಮಾಡಿದ್ದಾರೆ.

ಕೆಲವೊಂದು ಸೀನ್‌ಗಳ ಮೂಲಕ ಸೋಷಿಯಲ್‌ ಮಿಡಿಯಾದಲ್ಲಿ ಸಂಚಲನ ಮೂಡಿಸಿದ್ದ ಸನ್ನಿ ಡಿಯೋಲ್‌ ‘ಗದರ್ 2’ ಸಿನಿಮಾ ಬಗ್ಗೆ ಇದೀಗ ಖ್ಯಾತ ನಟರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ನಸೀರುದ್ದೀನ್ ಶಾ ಅತಿಯಾದ ದೇಶಪ್ರೇಮ ಹಾನಿಕರ...ಸಿನಿಮಾದ ಜನಪ್ರಿಯತೆ ಎಂಬುದು ಇದರಿಂದಲೇ ಪ್ರಭಾವಿತವಾಗಿದೆ. ಬರೀ ನೀವು ನಿಮ್ಮ ದೇಶವನ್ನು ಪ್ರೀತಿಸಿದರೆ ಸಾಕಾಗುವುದಿಲ್ಲ...ಕಾಲ್ಪನಿಕ ಶತ್ರುಗಳನ್ನು ಸೃಷ್ಟಿಮಾಡಿಕೊಳ್ಳಬೇಕು. ದಿ ಕೇರಳ ಸ್ಟೋರಿ, ಗದರ್ 2 ಚಿತ್ರಗಳು ಸಾಕಷ್ಟು ಅಪಾಯಕಾರಿ ಸಿನಿಮಾಗಳು. ನಾನು ಆ ಸಿನಿಮಾಗಳನ್ನು ವೀಕ್ಷಿಸಿಲ್ಲ ಆದರೆ ಅದರಲ್ಲಿ ಏನಿದೆ ಅನ್ನೋದು ನನಗೆ ಗೊತ್ತಿದೆ" ಎಂದಿದ್ದಾರೆ. 

ಇದನ್ನೂ ಓದಿ-ಸೈಫ್ ಜೊತೆಗಿನ ವಯಸ್ಸಿನ ಅಂತರದ ಟೀಕೆಗಳಿಗೆ ಮುಟ್ಟಿನೋಡಿಕೊಳ್ಳುವಂತೆ ಉತ್ತರಿಸಿದ ಕರೀನಾ ಕಪೂರ್!!

ಅಲ್ಲದೇ ದಿ ಕೇರಳ ಸ್ಟೋರಿ ಸಿನಿಮಾ ಸಹ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡಿತ್ತು. ಕೇರಳದ ಯುವತಿಯರನ್ನು ಮತಾಂತರಗೊಳಿಸಿ ಉಗ್ರ ಸಂಘಟನೆಗಳಿಗೆ ಅವರನ್ನು ನೇಮಿಸುವ ಕಥೆಯನ್ನು ಈ ಸಿನಿಮಾ ಒಳಗೊಂ ಡಿದೆ. ಜೊತೆಗೆ ಇದು ನೈಜ ಘಟನೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಅಂದು ಆ ಚಿತ್ರವನ್ನು ಸಹ ನಸೀರುದ್ದೀನ್ ಶಾ ಟೀಕಿಸಿದ್ದರು.

ಇನ್ನು ಈ ‘ಗದರ್ 2’ ಸಿನಿಮಾ ಭಾರತ – ಪಾಕಿಸ್ತಾನ ನಡುವಿನ ಕಥೆಯನ್ನು ಒಳಗೊಂಡಿರುವುದರಿಂದ ಇತ್ತೀಚೆಗಷ್ಟೇ ಸೋಷಿಯಲ್‌ ಮಿಡಿಯಾದಲ್ಲಿ ಈ ಸಿನಿಮಾ ವಿರೋಧ ಪೋಸ್ಟ್‌ಗಳು ಸಾಕಷ್ಟು ಹರಿದಾಡುತ್ತಿದ್ದವು. ಇದೆಲ್ಲದರ ನಡುವೆಯೂ ಇತ್ತೀಚೆಗೆ ಚಿತ್ರತಂಡ ಸಕ್ಸಸ್ ಪಾರ್ಟಿಯನ್ನು ಕೂಡ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಿತ್ತು. 

ಇದನ್ನೂ ಓದಿ-ʼಕಾದಂಬರಿʼಯ ವಿಲನ್‌, ಹೊಸ ಫೋಟೊಶೂಟ್‌ನಲ್ಲಿ ಕಿರುತೆರೆ ನಟಿ ಅನಿಕಾ ಸಿಂಧ್ಯಾ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
  

Trending News