ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್'ಗೆ ಐದು ವರ್ಷ ಜೈಲು

ಜೋಧಪುರ್ ಸೆಷನ್ ನ್ಯಾಯಾಲಯವು ಸಲ್ಮಾನ್ ಖಾನ್ ಅವರಿಗೆ ಐದು ವರ್ಷಗಳ ಶಿಕ್ಷೆಯನ್ನು ಘೋಷಿಸಿದೆ. ಈ ಸಂದರ್ಭದಲ್ಲಿ ಸೈಫ್ ಅಲಿ ಖಾನ್, ಸೋನಾಲಿ ಬೇಂದ್ರೆ, ತಬು ಮತ್ತು ನೀಲಮ್ ಅವರನ್ನು ನ್ಯಾಯಾಲಯವು ಖುಲಾಸೆಗೊಳಿಸಲಾಗಿದೆ.

Last Updated : Apr 5, 2018, 02:49 PM IST
ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್'ಗೆ ಐದು ವರ್ಷ ಜೈಲು title=

ನವದೆಹಲಿ: ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೋಧಪುರ್ ಸೆಷನ್ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ದೇವ್ ಕುಮಾರ್ ಖಾತ್ರಿಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ದೋಷಿ ಎಂದು ಘೋಷಿಸಿ, ಐದು ವರ್ಷಗಳ ಶಿಕ್ಷೆ ವಿಧಿಸಿದ್ದಾರೆ. ಸಲ್ಮಾನ್ ಖಾನ್ ಜೋಧಪುರ್ ಸೆಂಟ್ರಲ್ ಜೈಲಿನಲ್ಲಿ ಸೆರೆವಾಸ ಅನುಭವಿಸಲಿದ್ದಾರೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಸಲ್ಮಾನ್ ಖಾನ್ ತಪ್ಪಿತಸ್ಥರೆಂದು ಕಂಡು ಬಂದಿದ್ದು, ಅವರಿಗೆ ರೂ 10,000 ದಂಡ ವಿಧಿಸಿ, ಐದು ವರ್ಷ ಶಿಕ್ಷೆ ವಿಧಿಸಲಾಗಿದೆ. ಈ ಪ್ರಕರಣದಲ್ಲಿ ಇತರ ಆರೋಪಿಗಳನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಕೃಷ್ಣಮೃಗ ಬೇಟೆ ಸಂದರ್ಭದಲ್ಲಿ, ಸೈಫ್ ಅಲಿ ಖಾನ್, ಟಬು, ನೀಲಮ್, ಸೋನಾಲಿ ಬೇಂದ್ರೆ ಮತ್ತು ದುಶ್ಯಂತ್ ಕುಮಾರ್ ಅವರನ್ನೂ ಆರೋಪಿಗಳೆಂದು ಪ್ರಕರಣ ದಾಖಲಿಸಲಾಗಿತ್ತು. 1998 ರಲ್ಲಿ 'ಹಮ್ ಸಾಥ್ ಸಾಥ್ ಹೈ' ಚಿತ್ರದ ಚಿತ್ರೀಕರಣದ ವೇಳೆ ಈ ಘಟನೆ ಸಂಭವಿಸಿತ್ತು. 

ಪ್ರಕರಣದ ಹಿನ್ನೆಲೆ
1998 ರಲ್ಲಿ 'ಹಮ್ ಸಾಥ್ ಸಾಥ್ ಹೈ' ಚಿತ್ರದ ಚಿತ್ರೀಕರಣದ ವೇಳೆ ಅ.1 ಮತ್ತು ಅ.2ರ ಮಧ್ಯರಾತ್ರಿ ಜೋಧ್ಪುರದಲ್ಲಿ ಲುನಿ ಪೊಲೀಸ್ ಠಾಣೆಯ ಕಂಕನಿ ಗ್ರಾಮದಲ್ಲಿ ಎರಡು ಕೃಷ್ಣಮೃಗ ಬೇಟೆಯಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಾಲಿವುಡ್ ಸ್ಟಾರ್ ಗಳು ಶಸ್ತ್ರಾಸ್ತ್ರಗಳನ್ನು ಹೊಂದಿದ್ದರು ಎಂದೂ ಸಹ ಹೇಳಲಾಗಿದೆ. ಅಲ್ಲದೆ ಅವು ಅನುಮತಿ ಇಲ್ಲದ ಶಸ್ತ್ರಾಸ್ತ್ರಗಳು ಎಂದೂ ಸಹ ಹೇಳಲಾಗಿತ್ತು. ಇದೀಗ ವನ್ಯಜೀವಿ ಸಂರಕ್ಷಣಾ ಕಾಯ್ದೆ ಸೆಕ್ಷನ್ 51ರ ಅಡಿ ಸಲ್ಮಾನ್ ಖಾನ್ ಅವರನ್ನು ದೋಷಿ ಎಂದು ಘೋಷಿಸಿರುವ ಮುಖ್ಯ ನ್ಯಾಯಮೂರ್ತಿ ದೇವ್ ಕುಮಾರ್ ಖಾತ್ರಿ ಅವರಿಗೆ 5 ವರ್ಷ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.

Trending News