Anushka Shetty : ಅನುಷ್ಕಾ ಬೇಕು ಅಂದ್ರೆ 50 ಲಕ್ಷ..? ಸಿನಿಮಾ ಮ್ಯಾನೇಜರ್ ಗುಟ್ಟು ರಟ್ಟು

ಬಹುಭಾಷಾ ನಟಿ ಅನುಷ್ಕಾ ಶೆಟ್ಟಿ ಅವರ ಕಾಲ್‌ಶೀಟ್‌ ಕೊಡಿಸುವುದಾಗಿ ನಂಬಿಸಿ, ನಿರ್ಮಾಪಕರಿಗೆ ಐವತ್ತು ಲಕ್ಷ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಇತ್ತೀಚಿನ ದಿನಗಳಲ್ಲಿ ಇಂತಹ ವಂಚನೆಗಳು ಹೆಚ್ಚಾಗಿ ನಡೆಯುತ್ತಿವೆ. ರಶ್ಮಿಕಾ ಮಂದಣ್ಣ ಹೆಸರಲ್ಲೂ ಇದೇ ರೀತಿಯ ಹಗರಣಗಳು ನಡೆದಿವೆ. ಈಗ ಚಿತ್ರ ನಿರ್ಮಾಪಕ ಲಕ್ಷ್ಮಣ್ ಚಾರಿ ಮ್ಯಾನೇಜರ್‌ ಎಲ್ಲಾ ರೆಡ್ಡಿಯಿಂದ ಮೋಸ ಹೋಗಿದ್ದಾರೆ.

Written by - Krishna N K | Last Updated : Jan 25, 2023, 03:24 PM IST
  • ಬಹುಭಾಷಾ ನಟಿ ಅನುಷ್ಕಾ ಶೆಟ್ಟಿ ಅವರ ಹೆಸರಲ್ಲಿ ಮೋಸ.
  • ಲಕ್ಷ ಲಕ್ಷ ಹಣ ಪಡೆದು ನಿರ್ಮಾಪಕರಿಗೆ ಪಂಗನಾಮ.
  • ನಿರ್ಮಾಪಕ ಲಕ್ಷ್ಮಣ್ ಚಾರಿಗೆ ಮ್ಯಾನೇಜರ್‌ ಎಲ್ಲಾ ರೆಡ್ಡಿಯಿಂದ ವಂಚನೆ.
Anushka Shetty : ಅನುಷ್ಕಾ ಬೇಕು ಅಂದ್ರೆ 50 ಲಕ್ಷ..? ಸಿನಿಮಾ ಮ್ಯಾನೇಜರ್ ಗುಟ್ಟು ರಟ್ಟು title=

Anushka Shetty : ಬಹುಭಾಷಾ ನಟಿ ಅನುಷ್ಕಾ ಶೆಟ್ಟಿ ಅವರ ಕಾಲ್‌ಶೀಟ್‌ ಕೊಡಿಸುವುದಾಗಿ ನಂಬಿಸಿ, ನಿರ್ಮಾಪಕರಿಗೆ ಐವತ್ತು ಲಕ್ಷ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಇತ್ತೀಚಿನ ದಿನಗಳಲ್ಲಿ ಇಂತಹ ವಂಚನೆಗಳು ಹೆಚ್ಚಾಗಿ ನಡೆಯುತ್ತಿವೆ. ರಶ್ಮಿಕಾ ಮಂದಣ್ಣ ಹೆಸರಲ್ಲೂ ಇದೇ ರೀತಿಯ ಹಗರಣಗಳು ನಡೆದಿವೆ. ಈಗ ಚಿತ್ರ ನಿರ್ಮಾಪಕ ಲಕ್ಷ್ಮಣ್ ಚಾರಿ ಮ್ಯಾನೇಜರ್‌ ಎಲ್ಲಾ ರೆಡ್ಡಿಯಿಂದ ಮೋಸ ಹೋಗಿದ್ದಾರೆ.

ವಿಶ್ವಕರ್ಮ ಕ್ರಿಯೇಷನ್ಸ್ ಮುಖ್ಯಸ್ಥ ಹಾಗೂ ನಿರ್ಮಾಪಕ ಲಕ್ಷ್ಮಣ್ ಚಾರಿ ಅವರಿಂದ 51 ಲಕ್ಷವನ್ನು ಮ್ಯಾನೇಜರ್‌ ಹಣ ಪಡೆದಿದ್ದಾರೆ ಎನ್ನಲಾಗಿದೆ. ಅನುಷ್ಕಾ ಮತ್ತು ಸಂಗೀತ ನಿರ್ದೇಶಕ ಮಣಿ ಶರ್ಮಾ ಡೇಟ್ಸ್ ಕೊಡಿಸುವುದಾಗಿ ಹೇಳಿ ನಿರ್ಮಾಪಕರಿಗೆ ಮೋಸ ಮಾಡಿದ್ದಾರೆ. ಕೊನೆಗೆ ತಾವು ಮೋಸ ಹೋಗಿರುವುದನ್ನು ಅರಿತ ನಿರ್ಮಾಪಕರು ಬಂಜಾರ ಹಿಲ್ಸ್ ಪೊಲೀಸರ ಮೊರೆ ಹೋಗಿದ್ದಾರೆ.

ಇದನ್ನೂ ಓದಿ: Pathaan Movie Review : ಕಿಂಗ್‌ ಖಾನ್‌ ಆಕ್ಷನ್‌ಗೆ ಪ್ರೇಕ್ಷಕ ಫಿದಾ.. ಹೇಗಿದೆ ʼಪಠಾಣ್‌ʼ..!

ಅಲ್ಲದೆ, ಹಲವು ಬಾರಿ ಬೆಂಗಳೂರಿಗೆ ಕರೆದೊಯ್ದಿದ್ದು, ಅನುಷ್ಕಾ ಅವರನ್ನು ಪರಿಚಯಿಸುವುದಾಗಿ ಹೇಳಿ, ಮೋತಿ ಮಹಲ್ ಹೋಟೆಲ್‌ನಲ್ಲಿ ಹಲವರಿಗೆ ಪರಿಚಯ ಮಾಡಿಕೊಟ್ಟಿದ್ದರಂತೆ. ಕೊನೆಗೆ ಎಲ್ಲಾ ರೆಡ್ಡಿಯಿಂದ ತಮಗೆ ಮೋಸವಾಗಿದೆ ಎಂದು ತಿಳಿದ ನಿರ್ಮಾಪಕರ ನ್ಯಾಯಕ್ಕಾಗಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ಈ ಹಿಂದೆ ಇದೇ ವಿಚಾರವಾಗಿ ಲಕ್ಷ್ಮಣ್‌ ಚಾರಿ ನಿರ್ಮಾಪಕರ ಮಂಡಳಿಗೆ ದೂರು ನೀಡಿದ್ದರು. ಎಲ್ಲ ರೆಡ್ಡಿಗೆ ನಿರ್ಮಾಪಕರ ಒಕ್ಕೂಟದ ಅಧ್ಯಕ್ಷರು ಛೀಮಾರಿ ಹಾಕಿದ್ದರು. ಆದರೂ ಹಣ ವಾಪಸ್ ಬರದ ಕಾರಣ ಬಂಜಾರ ಹಿಲ್ಸ್ ಪೊಲೀಸರಿಗೆ ದೂರು ನೀಡಿದ್ದಾನೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News