Fighter: ʼಫೈಟರ್ʼನಲ್ಲಿ ಲಿಪ್ ಲಾಕ್ ಸೀನ್... ಭಾರತೀಯ ವಾಯುಪಡೆ ಅಧಿಕಾರಿಗಳಿಂದ ಲೀಗಲ್ ನೋಟಿಸ್!

Legal Notice on Fighter Movie: 'ಫೈಟರ್' ಚಿತ್ರಕ್ಕೆ ಹಿನ್ನಡೆಯಾಗಿದೆ.. ಆದರೆ ಇದೀಗ ಈ ಇದರಲ್ಲಿನ ಲಿಪ್ ಲಾಕ್ ಸೀನ್‌ಗೆ ಭಾರತೀಯ ವಾಯುಪಡೆ ಗಂಭೀರವಾಗಿದ್ದು.. ಕಾನೂನು ನೋಟಿಸ್ ಜಾರಿ ಮಾಡಲಾಗಿದೆ ಎನ್ನಲಾಗುತ್ತಿದೆ..   

Written by - Savita M B | Last Updated : Feb 7, 2024, 02:01 PM IST
  • ಬಾಲಿವುಡ್ ಆಕ್ಷನ್ ಹೀರೋ ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಅವರ ಇತ್ತೀಚಿನ ಸಿನಿಮಾ 'ಫೈಟರ್
  • ಇತ್ತೀಚೆಗಷ್ಟೇ ಚಿತ್ರಮಂದಿರಕ್ಕೆ ಎಂಟ್ರಿ ಕೊಟ್ಟ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ.
  • ಹಿಂದಿ ಭಾಷೆಯಲ್ಲಿ ಮಾತ್ರ ಬಿಡುಗಡೆಯಾದ ಈ ಚಿತ್ರ ಭರ್ಜರಿ ಕಲೆಕ್ಷನ್‌ ಮಾಡಿದೆ..
Fighter: ʼಫೈಟರ್ʼನಲ್ಲಿ ಲಿಪ್ ಲಾಕ್ ಸೀನ್... ಭಾರತೀಯ ವಾಯುಪಡೆ ಅಧಿಕಾರಿಗಳಿಂದ ಲೀಗಲ್ ನೋಟಿಸ್!  title=

Fighter Movie: ಬಾಲಿವುಡ್ ಆಕ್ಷನ್ ಹೀರೋ ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಅವರ ಇತ್ತೀಚಿನ ಸಿನಿಮಾ 'ಫೈಟರ್'... ಇತ್ತೀಚೆಗಷ್ಟೇ ಚಿತ್ರಮಂದಿರಕ್ಕೆ ಎಂಟ್ರಿ ಕೊಟ್ಟ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಿಂದಿ ಭಾಷೆಯಲ್ಲಿ ಮಾತ್ರ ಬಿಡುಗಡೆಯಾದ ಈ ಚಿತ್ರ ಭರ್ಜರಿ ಕಲೆಕ್ಷನ್‌ ಮಾಡಿದೆ.. ಆದರೆ ಇದರ ಕೆಲವು ದೃಶ್ಯಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಮಧ್ಯಪ್ರಾಚ್ಯ ರಾಷ್ಟ್ರಗಳು ಈ ಚಿತ್ರವನ್ನು ನಿಷೇಧಿಸಿವೆ. ಇತ್ತೀಚೆಗೆ ಈ ಚಿತ್ರ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದೆ. ಈ ಚಿತ್ರದಲ್ಲಿ ಹೃತಿಕ್ ಮತ್ತು ದೀಪಿಕಾ ನಡುವಿನ ಲಿಪ್ ಲಾಕ್ ದೃಶ್ಯದ ಬಗ್ಗೆ ಕಾನೂನು ಕ್ರಮಕ್ಕೆ ಭಾರತೀಯ ವಾಯುಪಡೆ ಸಿದ್ಧವಾಗಿದ್ದು.. ಚಿತ್ರತಂಡಕ್ಕೆ ಲೀಗಲ್ ನೋಟಿಸ್ ನೀಡಲಾಗಿದೆ.

ಇದನ್ನೂ ಓದಿ-Sai Pallavi: ರಾಮಾಯಣ ಸಿನಿಮಾದಿಂದ ಸಾಯಿ ಪಲ್ಲವಿ ಔಟ್? ಸೀತೆಯಾಗಿ ಶ್ರೀದೇವಿ ಪುತ್ರಿ!?

ಅಸ್ಸಾಂನ ವಾಯುಸೇನೆ ಅಧಿಕಾರಿ ಸೌಮ್ಯಾ ದೀಪ್‌ದಾಸ್ ಅವರು 'ಫೈಟರ್' ಲಿಪ್ ಲಾಕ್ ದೃಶ್ಯವನ್ನು ಗಂಭೀರವಾಗಿ ಪರಿಗಣಿಸಿದ್ದು.. ಚುಂಬನದ ದೃಶ್ಯವನ್ನು ವಿರೋಧಿಸಿದ್ದಾರೆ... ಸಿನಿಮಾಗಳಲ್ಲಿ ಲಿಪ್ ಲಾಕ್ ದೃಶ್ಯಗಳು ಹೊಸದೇನಲ್ಲವಾದರೂ, ಭಾರತೀಯ ವಾಯುಪಡೆಯ ಸಮವಸ್ತ್ರದಲ್ಲಿ ಈ ರೀತಿಯ ಲಿಪ್ ಕಿಸ್ ಮಾಡುವುದು ತಪ್ಪು.. ಈ ದೃಶ್ಯ ಭಾರತೀಯ ವಾಯುಪಡೆಯ ಅಧಿಕಾರಿಗಳಿಗೆ ಮಾನಹಾನಿಕರವಾಗಿದೆ ಎಂದು ಹೇಳಲಾಗುತ್ತಿದೆ.. 

ಇದನ್ನೂ ಓದಿ-Esha Deol divorce: ಹೇಮಾ ಮಾಲಿನಿ ಪುತ್ರಿ ಇಶಾ ಡಿಯೋಲ್ ಹಾಗೂ ಭರತ್ ತಖ್ತಾನಿ ಡಿವೋರ್ಸಗೆ ಇದೇ ಮೂಲ ಕಾರಣವಂತೆ!

ವಾಯುಪಡೆಯ ಸಮವಸ್ತ್ರವು ಕೇವಲ ಉಡುಗೆ ಅಲ್ಲ, ಇದು ಗೌರವ, ಸೇವೆ ಮತ್ತು ದೇಶಕ್ಕೆ ಬದ್ಧತೆಯ ಸಂಕೇತವಾಗಿದೆ ಎಂದು ನೋಟಿಸ್‌ಗಳಲ್ಲಿ ತಿಳಿಸಲಾಗಿದ್ದು.. ಇಂತಹ ಹೈ-ಕ್ಲಾಸ್ ಡ್ರೆಸ್ ಧರಿಸಿ ತುಟಿಗೆ ಮುತ್ತು ಕೊಡುವುದು ಎಂದರೆ ವಾಯುಸೇನೆಯ ಅಧಿಕಾರಿಗಳಿಗೆ ಅವಮಾನ ಮಾಡಿದಂತಾಗುತ್ತದೆ ಎಂದಿದ್ದಾರೆ... ಇಂತಹ ಅನುಚಿತ ವರ್ತನೆಯು ವಾಯುಪಡೆಯ ಪ್ರತಿಷ್ಠೆಗೆ ಧಕ್ಕೆ ತರುತ್ತದೆ.. ಮೇಲಾಗಿ ವಾಯುಸೇನೆಗೆ ಸೇರಿದ ರನ್ ವೇ ಅತ್ಯಂತ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಲಾಗಿದೆ ಆ ಸ್ಥಳದಲ್ಲಿ ಲಿಪ್ ಲಾಕ್ ದೃಶ್ಯಗಳನ್ನು ಮಾಡುವುದು ತುಂಬಾ ದೊಡ್ಡ ತಪ್ಪು.. ಈ ಸಿನಿಮಾ ನೋಡಿ ಮುಂದೆ ಯಾರಾದರೂ ಹೀಗೆ ಮಾಡಿದರೆ ಯಾರು ಹೊಣೆ" ಎಂದು ಪ್ರಶ್ನಿಸಿದ್ದಾರೆ.. ಆದರೆ, ಈ ಲೀಗಲ್ ನೋಟಿಸ್‌ಗಳಿಗೆ ಚಿತ್ರತಂಡದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News