Keerthy Suresh: ಒಂದು ಚಿತ್ರಕ್ಕೆ 4 ಕೋಟಿ ಸಂಭಾವನೆ.. ಕೀರ್ತಿ ಸುರೇಶ್ ಒಟ್ಟು ಆಸ್ತಿ ಎಷ್ಟು?

Keerthy Suresh Remuneration : ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್ ತಮಿಳು, ಮಲಯಾಳಂ ಮತ್ತು ತೆಲುಗು ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡುತ್ತಾರೆ. 

Written by - Chetana Devarmani | Last Updated : Oct 17, 2023, 01:18 PM IST
  • ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್
  • ನಿರ್ಮಾಪಕ ಸುರೇಶ್ ಕುಮಾರ್ ಅವರ ಪುತ್ರಿ ಕೀರ್ತಿ
  • ಒಂದು ಚಿತ್ರಕ್ಕೆ 4 ಕೋಟಿ ಸಂಭಾವನೆ
Keerthy Suresh: ಒಂದು ಚಿತ್ರಕ್ಕೆ 4 ಕೋಟಿ ಸಂಭಾವನೆ.. ಕೀರ್ತಿ ಸುರೇಶ್ ಒಟ್ಟು ಆಸ್ತಿ ಎಷ್ಟು? title=

Keerthy Suresh Net Worth : ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್ ತಮಿಳು, ಮಲಯಾಳಂ ಮತ್ತು ತೆಲುಗು ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡುತ್ತಾರೆ. ತಮ್ಮ ನಟನಾ ಕೌಶಲ್ಯದಿಂದ ಜನರ ಮನಗೆದ್ದಿದ್ದಾರೆ. Instagram ನಲ್ಲಿ ಸುಮಾರು 16 ಮಿಲಿಯನ್ ಫಾಲೋವರ್ಸ್‌ ಹೊಂದಿದ್ದಾರೆ.  

ಚಲನಚಿತ್ರ ನಿರ್ಮಾಪಕ ಸುರೇಶ್ ಕುಮಾರ್ ಅವರ ಪುತ್ರಿ ಕೀರ್ತಿ ಸುರೇಶ್‌ ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ನಂತರ 2013 ರಲ್ಲಿ, ನಟಿ ಪ್ರಿಯದರ್ಶನ್ ಅವರ ಮಲಯಾಳಂ ಸಿನಿಮಾ ಗೀತಾಂಜಲಿಯಲ್ಲಿ ತನ್ನ ಮೊದಲ ಪ್ರಮುಖ ಪಾತ್ರವನ್ನು ಪಡೆದರು. ಒಂದೆರಡು ಬಾಕ್ಸ್ ಆಫೀಸ್ ಫ್ಲಾಪ್‌ಗಳ ಹೊರತಾಗಿಯೂ, ಕೀರ್ತಿ ಸುರೇಶ್‌ ದಕ್ಷಿಣದಲ್ಲಿ ಹೆಚ್ಚಿನ ಬೇಡಿಕೆಯಿರುವ ನಟಿಯಾಗಿದ್ದಾರೆ. 

ಇದನ್ನೂ ಓದಿ:  ಗಂಡನಂತೆ ಪೂರ್ತಿ ಮುಖ ಮುಚ್ಚಿಕೊಂಡ ಕರಾವಳಿ ಬೆಡಗಿ..! ಕಾರಣ ಏನು ಗೊತ್ತಾ?

ಮಹಾನಟಿ ಎಂದೇ ಖ್ಯಾತರಾಗಿರುವ ನಟಿ ಕೀರ್ತಿ ಸುರೇಶ್‌ 2023 ರಲ್ಲಿ ಸುಮಾರು 41 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಕೀರ್ತಿ ಸುರೇಶ್ ಅವರ ಮಾಸಿಕ ಆದಾಯವು 35 ಲಕ್ಷಕ್ಕಿಂತ ಹೆಚ್ಚಿದ್ದು ವಾರ್ಷಿಕ ಆದಾಯ 4 ಕೋಟಿಗಿಂತ ಹೆಚ್ಚಿದೆ. ಕೀರ್ತಿಯವರ ಆದಾಯವು ಮುಖ್ಯವಾಗಿ ಚಲನಚಿತ್ರಗಳು ಮತ್ತು ದೂರದರ್ಶನ ಕಾರ್ಯಕ್ರಮಗಳಲ್ಲಿ ನಟಿಸುವುದರಿಂದ ಬರುತ್ತದೆ. ಅಲ್ಲದೇ ಬ್ರ್ಯಾಂಡ್ ಡೀಲ್‌ಗಳಿಂದ ಬರುತ್ತದೆ. ಕೀರ್ತಿ ಸುರೇಶ್ ಪ್ರತಿ ಚಿತ್ರಕ್ಕೆ ಸುಮಾರು‌ 3 ರಿಂದ 4 ಕೋಟಿ ಚಾರ್ಜ್ ಮಾಡುತ್ತಾರೆ.

ಸಾಮಾಜಿಕ ಮಾಧ್ಯಮದಲ್ಲಿ ಅವರ ಜನಪ್ರಿಯತೆಯಿಂದಾಗಿ, Instagram ನಲ್ಲಿ ಪ್ರತಿ ಪ್ರಾಯೋಜಿತ ಪೋಸ್ಟ್‌ಗೆ 25 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಶುಲ್ಕ ವಿಧಿಸುತ್ತಾರೆ. ಕೀರ್ತಿ ಸುರೇಶ್ ಅವರು ತಮ್ಮ ಪೋಷಕರೊಂದಿಗೆ ವಾಸಿಸುವ ಚೆನ್ನೈನಲ್ಲಿರುವ ಅವರ ಅದ್ದೂರಿ ಮನೆ ಸೇರಿದಂತೆ ದೇಶಾದ್ಯಂತ ಹಲವಾರು ಆಸ್ತಿಗಳನ್ನು ಹೊಂದಿದ್ದಾರೆ. ಹೈದರಾಬಾದ್‌ನ ಜುಬಿಲಿ ಹಿಲ್ಸ್ ಪ್ರದೇಶದಲ್ಲಿ ಐಷಾರಾಮಿ ಅಪಾರ್ಟ್‌ಮೆಂಟ್ ಹೊಂದಿದ್ದಾರೆ.

ಇದನ್ನೂ ಓದಿ: 33ರ ಹರೆಯದಲ್ಲಿ ಬಹುಕೋಟಿ ಆಸ್ತಿಯ ಒಡೆಯ ಈ ಮ್ಯೂಸಿಕ್ ಡೈರೆಕ್ಟರ್..! ಯಾರು ಗೊತ್ತಾ? 

ಕೀರ್ತಿ ಸುರೇಶ್‌ ಫ್ಯಾನ್ಸಿ ಕಾರುಗಳ ಬಗ್ಗೆ ಕ್ರೇಜ್‌ ಹೊಂದಿದ್ದಾರೆ. 60 ಲಕ್ಷ ಮೌಲ್ಯದ Volvo S90, 1.38 ಕೋಟಿ ಮೌಲ್ಯದ BMW 7 ಸರಣಿ 730Ld, 81 ಲಕ್ಷ ಬೆಲೆಯ Mercedes Benz AMG GLC43, ಟೊಯೋಟಾ ಇನ್ನೋವಾ ಸೇರಿದಂತೆ ಕೆಲವು ಕಾರುಗಳನ್ನು ಹೊಂದಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News