Celebrities Pregnant Before Marriage: ಭಾರತ ಪಾಶ್ಚಿಮಾತ್ಯ ದೇಶಗಳಂತಲ್ಲ. ಇಲ್ಲಿ ಕಾಮ, ಲೈಂಗಿಕ ಸಂಬಂಧಗಳು ಮತ್ತು ದೈಹಿಕ ಸಂಬಂಧಗಳ ಬಗ್ಗೆ ಇವತ್ತಿಗೂ ಒಂದು ರೀತಿಯ ಮಡಿವಂತಿಕೆ ಇದ್ದೇ ಇದೆ. ಹಾಗಿದ್ದೂ ಹಿಂದಿ ಚಿತ್ರರಂಗದ ಹಲವು ನಟಿಯರು ಮದುವೆಗೆ ಮುನ್ನವೇ ಗರ್ಭಿಣಿಯಾಗಿದ್ದಾರಲ್ಲದೆ ಅದನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
ಅದು ಬಾಲಿವುಡ್ ಇರಲಿ, ಅಥವಾ ಬೇರೆ ಪ್ರಾದೇಶಿಕ ಚಿತ್ರರಂಗಗಳಿರಲಿ ನಟರ ಬಗ್ಗೆ ಅಭಿಮಾನ ಇದ್ದರೆ ನಟಿಯರ ಬಗ್ಗೆ ಅಭಿಯಾನಕ್ಕಿಂತ ಅನುಮಾನ, ಕುತೂಹಲಗಳು ಜಾಸ್ತಿ ಇರುತ್ತದೆ. ನಟಿಯರ ಕುರಿತಾದ ಗಾಸಿಪ್ ಗಳಿಗೂ ಸಿಕ್ಕಾಪಟ್ಟೆ ಬೇಡಿಕೆ ಇರುತ್ತದೆ. ಅದರಲ್ಲೂ ನಟ-ನಟಿಯರ ಫ್ರೆಂಡ್ ಶಿಪ್, ಲವ್, ಬ್ರೇಕ್ ಅಪ್, ಎಕ್ಸ್ಟ್ರಾ ಮ್ಯಾರಿಟಲ್ ಅಫೇರ್ ಗಳ ಬಗ್ಗೆ ಅಂತೂ ಎಲ್ಲಿಲ್ಲದ ಕುತೂಹಲ ಇರುತ್ತದೆ.
ಇನ್ನೂ ಯಾರಾದರೂ ನಟಿ ಮದುವೆಗೆ ಮುಂಚೆಯೇ ಗರ್ಭವತಿ ಆಗಿದ್ದಳೆಂದರೆ ಸುಮ್ಮನೇನಾ… ಕುತೂಹಲದ ಕೊಡಿ ಒಡೆದು ಮನ ತಡಬಡಿಸಿಬಿಡುತ್ತದೆ. ಆದರೆ ಎಲ್ಲಾ ಮಡಿವಂತಿಕೆಯ ನಡುವೆಯೂ ಬಾಲಿವುಡ್ ಮೊದಲಿಂದಲೂ ಬೋಲ್ಡ್ ಆಗಿದೆ. ಹಿಂದಿ ಚಿತ್ರರಂಗ ಬಹಳ ಹಿಂದೆಯೇ ಇಂತಹ ನಟಿಯರನ್ನು ಕಂಡಿದೆ. ದಶಕಗಳ ಕಾಲ ಬಾಲಿವುಡ್ ಆಳಿದ್ದ ಸುರಸುಂದರಿ ಶ್ರೀದೇವಿ 1996ರಲ್ಲಿ ಬೋನಿ ಕಪೂರ್ ಅವರನ್ನು ಮದುವೆ ಆಗುವ ಮುನ್ನವೇ ಗರ್ಭಿಣಿಯಾಗಿದ್ದರು. ಅದು ಕ್ಯಾಮರಾ ಕಣ್ಣಿಗೆ ಬಿದ್ದು ಜಗಜ್ಜಾಹೀರಾಗಿತ್ತು.
ಇದನ್ನೂ ಓದಿ- ಸಿನಿ ರಂಗದಲ್ಲಿ ಗ್ಲಾಮರ್ ಗರ್ಲ್, ರಾಜಕೀಯದಲ್ಲಿ ರಾಣಿ, ಇಡೀ ನಾಡಿಗೆ 'ಅಮ್ಮ'ನಾಗಿದ್ದ ಹೃದಯವಂತೆ ಈಕೆ ಯಾರು ಗೊತ್ತಾ..!
ಹಿರಿಯ ನಟಿ ನೀನಾ ಗುಪ್ತಾ ಕೂಡ ವಿವಾಹಕ್ಕೆ ಮುಂಚಿತವಾಗಿಯೇ ಗರ್ಭಧರಿಸಿದ್ದರು. ಅವರ ಹೆಚ್ಚುಗಾರಿಕೆ ಏನೆಂದರೆ ಅದನ್ನು ಮುಚ್ಚು ಮರೆ ಇಲ್ಲದೆ ಹೇಳಿಕೊಂಡಿದ್ದರು. ನೀನಾ ಗುಪ್ತಾ ವೆಸ್ಟ್ ಇಂಡೀಸ್ ತಂಡದ ಖ್ಯಾತ ಕ್ರಿಕೆಟ್ ಆಟಗಾರ ವಿವಿಯನ್ ರಿಚರ್ಡ್ಸ್ ಅವರನ್ನು ವಿವಾಹವಾಗಿದ್ದರು. ಇದಲ್ಲದೆ ಬಾಬಿ ಮುಖರ್ಜಿ ಜೊತೆ 2006ರಲ್ಲಿ ವಿವಾಹವಾಗಿದ್ದ ಮಹಿಮಾ ಚೌಧರಿ 2007ರಲ್ಲಿ ಪುತ್ರಿಗೆ ಜನ್ಮ ನೀಡಿದ್ದರು. ಇದರಿಂದ ಅವರು ಮದುವೆಗೆ ಮುನ್ನವೇ ಗರ್ಭಧರಿಸಿದ್ದರು ಎನ್ನುವುದು ಜಗತ್ತಿಗೆ ಗೊತ್ತಾಯಿತು.
ಇತ್ತೀಚೆಗಿನ ವರ್ಷಗಳಲ್ಲಿ ನೋಡುವುದಾದರೆ ಹಲವು ನಟಿಯರು ವಿವಾಹಕ್ಕೆ ಮುನ್ನವೇ ಗರ್ಭ ಧರಿಸಿದ್ದಾರೆ ಮತ್ತು ಕ್ಯಾಮರಾಗೆ ಫೋಸನ್ನೂ ನೀಡಿದ್ದಾರೆ. ಅಲಿಯಾ ಭಟ್, ಇಲಿಯಾನ ಡಿಸೋಜಾ, ದಿಯಾ ಮಿರ್ಜಾ, ಅಮೃತಾ ಅರೋರಾ, ಸಿಲಿನಾ, ಸಾರಿಕಾ, ನತಾಶಾ ಸ್ಟ್ಯಾನ್ ಕೋವಿಕ್, ವೀಣಾ ಮಲ್ಲಿಕ್ ಮತ್ತು ನೇಹಾ ದುಬೇ ಮದುವೆಗೆ ಮುನ್ನವೇ ಗರ್ಭವತಿಯಾದವರು.
ಇದನ್ನೂ ಓದಿ- ಸಖತ್ ಸೌಂಡ್ ಮಾಡುತ್ತಿರುವ ಪುಷ್ಪಾ-2 ಸಿನಿಮಾವನ್ನು ಈ ಐದು ಕಾರಣಗಳಿಗಾಗಿ ನೋಡಲೇಬೇಕು..!
ಶಿವರಾಜಕುಮಾರ್ ಮತ್ತು ಸುದೀಪ್ ಅಭಿನಯದ ಹಾಗು ಪ್ರೇಮ್ ನಿರ್ದೇಶನದ ‘ವಿಲನ್’ ಚಿತ್ರದ ನಾಯಕಿ, ಇಂಗ್ಲಿಷ್ ಮೂಲದ ನಟಿ ಏಮಿ ಜಾಕ್ಸನ್ ಕೂಡ ಮದುವೆಗೆ ಮುನ್ನವೇ ಗರ್ಭ ಧರಿಸಿದ್ದರು. ಇರಲಿ, ಇನ್ನೂ ಕೆಲವು ನಟಿಯರು ವಿವಾಹಕ್ಕೆ ಮುನ್ನವೇ ಗರ್ಭಿಣಿಯರಾಗಿರಬಹುದು. ಆದರೆ ಆ ವಿಷಯ ಹೊರ ಜಗತ್ತಿಗೆ ಗೊತ್ತಾಗಿಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.