ತಲೈವಾ ಜೊತೆಗೆ ಬ್ಲಾಕ್‌ ಕೋಬ್ರಾ: ಲೋಕೇಶ್‌ ಕನಕರಾಜ್‌ ಸಿನಿಮಾದಲ್ಲಿ ಸ್ಯಾಂಡಲ್ವುಡ್‌ ಭೀಮ

Vijay With Rajanikanth: 'ಜೈಲರ್' ಸಕ್ಸಸ್ ಸಂಭ್ರಮದಲ್ಲೇ ಸೂಪರ್ ಸ್ಟಾರ್ ರಜನಿಕಾಂತ್ ಮತ್ತೆರಡು ಸಿನಿಮಾಗಳು ಬ್ಯುಸಿಯಾಗಿದ್ದು,'ಲಾಲ್‌ ಸಲಾಂ' ಚಿತ್ರದ ಮುಖ್ಯ ಪಾತ್ರದಲ್ಲಿ ತಲೈವಾ ನಟಿಸಿದ್ದಾರೆ. ಸದ್ಯ ಜ್ಞಾನವೇಲ್ ನಿರ್ದೇಶನದ ಚಿತ್ರದ ಚಿತ್ರೀಕರಣವೂ ನಡೀತಿದ್ದು, ಇದರ ನಡುವೆ ತಲೈವಾ 171 ಸಿನಿಮಾ ದುನಿಯಾ ವಿಜಯ್‌ ನಟಿಸಲಿದ್ದಾರೆಂಬ ಸುದ್ದಿಯಿದೆ.

Written by - Zee Kannada News Desk | Last Updated : Oct 31, 2023, 05:53 PM IST
  • ತಲೈವಾ 171 ಚಿತ್ರದಲ್ಲಿ ದುನಿಯಾ ವಿಜಯ್ ನಟಿಸುತ್ತಾರೆಂಬ ಸುದ್ದಿನ ಹರಡಿದೆ.
  • ಲೋಕೇಶ್ ಕನಕರಾಜ್ ಟೀಂ, ದುನಿಯಾ ವಿಜಯ್ ಸಂಪರ್ಕಿದ್ದಾರೆ.
  • ಬೇರೆ ಬೇರೆ ಭಾಷೆಯ ಸ್ಟಾರ್‌ ನಟರನ್ನು ಒಂದೇ ಸಿನಿಮಾದಲ್ಲಿ ತೋರಿಸಲಿದ್ದಾರೆ.
ತಲೈವಾ ಜೊತೆಗೆ ಬ್ಲಾಕ್‌ ಕೋಬ್ರಾ: ಲೋಕೇಶ್‌ ಕನಕರಾಜ್‌ ಸಿನಿಮಾದಲ್ಲಿ ಸ್ಯಾಂಡಲ್ವುಡ್‌ ಭೀಮ title=

Duniya Vijay is Collaborating With Lokesh kanakaraj: 'ಲಿಯೋ' ಸಿನಿಮಾ ಸಕ್ಸಸ್ ಬೆನ್ನಲ್ಲೇ ಲೋಕೇಶ್ ಕನಕರಾಜ್ ಮುಂದಿನ ಸಿನಿಮಾ ಕಡೆ ಮುಖ ಮಾಡುತ್ತಿದ್ದು, ಸನ್ ಪಿಕ್ಚರ್ಸ್ ಬ್ಯಾನರ್‌ನಲ್ಲಿ ತಲೈವಾ 171 ಚಿತ್ರಕ್ಕೆ ಲೋಕೇಶ್ ಆಕ್ಷನ್ ಕಟ್ ಹೇಳುವುದು ಪಕ್ಕಾ ಆಗಿದೆ. ಸಂದರ್ಶನಗಳಲ್ಲಿ ಆ ಸಿನಿಮಾ ಬಗ್ಗೆ ಕಾಲಿವುಡ್ ಕ್ರೇಜಿ ಡೈರೆಕ್ಟರ್ ಮಾತನಾಡುತ್ತಿದ್ದು, ಇದೆಲ್ಲದರ ನಡುವೆ ತಲೈವಾ 171 ಚಿತ್ರದಲ್ಲಿ ದುನಿಯಾ ವಿಜಯ್ ನಟಿಸುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ.

ರಜನಿಕಾಂತ್ ಜೊತೆ ದುನಿಯಾ ವಿಜಯ್ ನಟಿಸುತ್ತಾರೆ ಎನ್ನುವ ಸುದ್ದಿ ಕಳೆದೆರಡು ದಿನಗಳಿಂದ ಭಾರೀ ಸದ್ದು ಮಾಡುತ್ತಿದ್ದು, ಈಗಾಗಲೇ ಲೋಕೇಶ್ ಕನಕರಾಜ್ ಟೀಂ, ದುನಿಯಾ ವಿಜಯ್  ಸಂಪರ್ಕಿಸಿದ್ದು, ತಲೈವಾ 171 ಚಿತ್ರದಲ್ಲಿ ನಟಿಸೋ ಬಗ್ಗೆ ಚರ್ಚೆ ನಡೆಸಿದೆ ಎನ್ನುವ ಮಾತುಗಳು ಕೇಳಿಬರ್ತಿದೆ.

ಇದನ್ನು ಓದಿ: ಟ್ರೆಡಿಷನಲ್‌ ಲುಕ್‌ನಲ್ಲಿ ಫ್ಯಾನ್ಸ್‌ಗಳ ಗಮನ ಸಳೆದ ʼದಿ ಕೇರಳಾ ಸ್ಟೋರಿʼ ಬೆಡಗಿ

ಈ ಹಿಂದೆ ದುನಿಯಾ ಸಿನಿಮಾ ಬಂದಾಗ ಸ್ವತಃ ರಜನಿಕಾಂತ್, ವಿಜಯನ್ನು ಮನೆಗೆ ಕರೆಸಿ ಬೆನ್ನು ತಟ್ಟುವುದರ ಜೊತೆ, ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಇನ್ನು ದುನಿಯಾ ವಿಜಯ್ 'ರಜನಿಕಾಂತ' ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ.ನಟ ದುನಿಯಾ ವಿಜಯ್‌ಗೆ ಸೂಪರ್‌ ಸ್ಟಾರ್ ರಜನಿಕಾಂತ್ ಆರಾಧ್ಯ ದೈವವಾಗಿದ್ದು, ಸದ್ಯ ಪ್ಯಾನ್ ಇಂಡಿಯಾ ಟ್ರೆಂಡ್ ನಡೀತಿರುವುದರಿಂದ ಬೇರೆ ಬೇರೆ ಭಾಷೆಯ ಸ್ಟಾರ್‌ ನಟರನ್ನು ಒಂದೇ ಸಿನಿಮಾದಲ್ಲಿ ತೋರಿಸಿ ಪ್ರೇಕ್ಷಕರನ್ನು ಸೆಳೆಯುವ ತಂತ್ರವಿದೆ.

ತೆಲುಗಿನ 'ವೀರಸಿಂಹ ರೆಡ್ಡಿ' ಚಿತ್ರದಲ್ಲಿ ದುನಿಯಾ ವಿಜಯ್ ನಟಿಸಿದ್ದು, ಇದೀಗ ಟಾಲಿವುಡ್‌ನಲ್ಲಿ ವಿಜಯ್ ನಟನೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಸದ್ಯ ಕಾಲಿವುಡ್‌ನಿಂದಲೂ ಸ್ಯಾಂಡಲ್‌ವುಡ್ 'ಭೀಮ'ನಿಗೆ ಬುಲಾವ್ ಬಂದಿರುವ ಸುದ್ದಿ ಭಾರೀ ಸದ್ದು ಮಾಡ್ತಿದ್ದು, ಶೀಘ್ರದಲ್ಲೇ ಅಭಿಮಾನಿಗಳಿಗೆ ವಿಜಿ ಸಿಹಿಸುದ್ದಿ ಕೊಡುವ ಸಾಧ್ಯತೆಯಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News