BIG NEWS: ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್ ಸೇರಿದಂತೆ ಹಲವರಿಗೆ ಸಮನ್ಸ್ ಜಾರಿಗೊಳಿಸಿದ NCB

Drugs Case ನಲ್ಲಿ ದೀಪಿಕಾ ಪಡುಕೋಣೆ (Deepika Padukone), ಶ್ರದ್ಧಾ ಕಪೂರ್ (Shraddha Kapoor) ಹಾಗೂ ಸಾರಾ ಅಲಿ ಖಾನ್ (Sara Ali Khan) ಸೇರಿದಂತೆ ಹಲವು ನಟಿಯರ ವಿಚಾರಣೆಗಾಗಿ ಸಮನ್ಸ್ ಜಾರಿಗೊಳಿಸಿದೆ.

Last Updated : Sep 23, 2020, 06:19 PM IST
  • ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್ ನ 4 ದಿಗ್ಗಜ ನಟಿಗಳಿಗೆ ಸಮಸ್ನ್ ನೀಡಿದ NCB
  • ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ರಕುಲ್ ಪ್ರೀತ್ ಸಿಂಗ್, ಶ್ರದ್ಧಾ ಕಪೂರ್ ಗೆ ಸಮನ್ಸ್ ನೀಡಿದ NCB
  • ಮುಂದಿನ ಮೂರು ದಿನಗಳಲ್ಲಿ ಹಾಜರಾಗಲು ಸಮನ್ಸ್ ಜಾರಿ.
BIG NEWS: ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್ ಸೇರಿದಂತೆ ಹಲವರಿಗೆ ಸಮನ್ಸ್ ಜಾರಿಗೊಳಿಸಿದ NCB title=

ನವದೆಹಲಿ: ಡ್ರಗ್ಸ್ ಪ್ರಕರಣದಲ್ಲಿ NCB ನಟಿ ದೀಪಿಕಾ ಪಡುಕೋಣೆ (Deepika Padukone), ಶ್ರದ್ಧಾ ಕಪೂರ್ (Shraddha Kapoor), ಸಾರಾ ಅಲಿ ಖಾನ್ (Sara Ali Khan), ರಕುಲ್ ಪ್ರೀತ್ ಸಿಂಗ್ (Rakul Preet Singh) ಸೇರಿದಂತೆ ಏಳು ಮಂದಿ ವಿಚಾರಣೆಗೆ ಸಮನ್ಸ್ ಕಳುಹಿಸಿದೆ. ಮುಂದಿನ ಮೂರು ದಿನಗಳಲ್ಲಿ, ಎಲ್ಲರೂ ತಮ್ಮ ಹೇಳಿಕೆಯನ್ನು ದಾಖಲಿಸಲು ಹಾಜರಾಗಬೇಕಾಗಲಿದೆ. ರಕುಲ್ ಪ್ರೀತ್ ಸಿಂಗ್, ಸೈಮನ್ ಹಾಗೂ ಶ್ರುತಿ ಮೋದಿ ಅವರು ನಾಳೆ ಎನ್‌ಸಿಬಿ ಮುಂದೆ ಹಾಜರಾಗಬೇಕಿದೆ.

ಇದನ್ನು ಓದಿ- Full Video: Karan Johar Drug Party ಮೇಲೆ NCB ಕಣ್ಣು... ದಿಗ್ಗಜ ಬಾಲಿವುಡ್ ನಟ-ನಟಿಯರು ಇದರಲ್ಲಿ ಶಾಮೀಲು

ನಟಿ ದೀಪಿಕಾ ಪಡುಕೋಣೆ ವ್ಯವಸ್ಥಾಪಕ ಕರಿಷ್ಮಾ ಪ್ರಕಾಶ್ ಮತ್ತು ಕ್ವಾನ್ ಟ್ಯಾಲೆಂಟ್ ಮ್ಯಾನೇಜ್‌ಮೆಂಟ್ ಏಜೆನ್ಸಿಯ ಸಿಇಒ ಧ್ರುವ ಚಿತ್ತಗೋಪೇಕರ್ ಅವರಿಗೂ ಕೂಡ ಎನ್‌ಸಿಬಿ ಬುಲಾವ್ ಕಳುಹಿಸಿತ್ತು. ಆದರೆ ಅನಾರೋಗ್ಯದಿಂದಾಗಿ ಕರೀಷ್ಮಾ ಪ್ರಕಾಶ್ ಅವರು ಏಜೆನ್ಸಿಯ ಮುಂದೆ ಹಾಜರಾಗಲು ಸಾಧ್ಯವಾಗಿಲ್ಲ.

ಇದನ್ನು ಓದಿ- Exclusive: Shraddha Kapoorಗಾಗಿ ಜಯಾ ಶಾಹ್ ತರಿಸಿಕೊಂಡ ವಿಶೇಷ Drugs ಯಾವುದು ಗೊತ್ತಾ?

ಈ ಕುರಿತು ಮಂಗಳವಾರ ಹೇಳಿಕೆ ನೀಡಿದ್ದ NCB ಅಧಿಕಾರಿಗಳು, ಆವಶ್ಯಕತೆ ಎನಿಸಿದಾಗ ದೀಪಿಕಾ ಪಡುಕೋಣೆ ಅವರನ್ನು ವಿಚಾರಣೆಗೆ ಬುಲಾವ್ ಕಳುಹಿಸಲಾಗುವುದು ಎಂದು ಹೇಳಿದ್ದರು. ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಮಾದಕ ಪದಾರ್ಥಗಳಿಗೆ ಸಂಬಂಧಿಸಿದಂತೆ ವಾಟ್ಸ್ ಆಪ್ ಮೇಲೆ ನಡೆಸಲಾಗಿರುವ ಸಂಭಾಷಣೆ ಸದ್ಯ ಏಜೆನ್ಸಿಯ ತನಿಖಾ ವ್ಯಾಪ್ತಿಯಲ್ಲಿವೆ ಎನ್ನಲಾಗಿದೆ.

Trending News