ಆ ಡೈರೆಕ್ಟರ್ ಜೊತೆ ಒಂದು ರಾತ್ರಿ ಮಲಗಿದರೆ ಮಾತ್ರ ಸೀರಿಯಲ್ ಆಫರ್..! ಶಾಕಿಂಗ್‌ ವಿಚಾರ ಬಿಚ್ಚಿಟ್ಟ ನಟಿ

Divyanka Tripathi on casting couch : ಕಿರುತೆರೆಯಲ್ಲಿ ನಟಿ ದಿವ್ಯಾಂಕಾ ತ್ರಿಪಾಠಿ ಸಖತ್‌ ಕ್ರೇಜ್‌ ಹೊಂದಿದ್ದಾರೆ. ಅಲ್ಲದೆ, ಧಾರಾವಾಹಿ ಲೋಕದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯೂ ಸಹ ಹೌದು.. ತಮ್ಮ ವೃತ್ತಿಜೀವನದ ಕುರಿತು ಮಾತನಾಡಿರುವ ದಿವ್ಯಾಂಕಾ, ಶಾಕಿಂಗ್‌ ಸುದ್ದಿಯನ್ನು ಬಿಚ್ಚಿಟ್ಟಿದ್ದಾರೆ.

Written by - Krishna N K | Last Updated : Apr 20, 2024, 04:23 PM IST
    • ಕಿರುತೆರೆಯಲ್ಲಿ ನಟಿ ದಿವ್ಯಾಂಕಾ ತ್ರಿಪಾಠಿ ಸಖತ್‌ ಕ್ರೇಜ್‌ ಇದೆ.
    • ಲೋಕದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ದಿವ್ಯಾಂಕಾ.
    • ತ್ರಿಪಾಠಿ ಬಿಟೌನ್‌ ಕಾಸ್ಟಿಂಗ್ ಕೌಚ್ ಬಗ್ಗೆ ಮೌನ ಮುರಿದಿದ್ದಾರೆ.
ಆ ಡೈರೆಕ್ಟರ್ ಜೊತೆ ಒಂದು ರಾತ್ರಿ ಮಲಗಿದರೆ ಮಾತ್ರ ಸೀರಿಯಲ್ ಆಫರ್..! ಶಾಕಿಂಗ್‌ ವಿಚಾರ ಬಿಚ್ಚಿಟ್ಟ ನಟಿ title=

Divyanka Tripathi : ಬಾಲಿವುಡ್‌ ಕರಾಳ ಮುಖ ದಿನದಿಂದ ದಿನಕ್ಕೆ ಬಯಲಾಗುತ್ತಿದೆ. ಹಲವು ನಟಿಯರು ತೆರೆ ಹಿಂದೆ ತಾವು ಅನುಭವಿಸಿದ ಅನುಭವಗಳನ್ನು ಹೊರ ಹಾಕುತ್ತಿದ್ದಾರೆ. ಇದೀಗ ಈ ಪೈಕಿ ಹಿಂದಿ ಕಿರುತೆರೆ ಲೋಕದಲ್ಲಿ ಸಾಕಷ್ಟು ಖ್ಯಾತಿ ಗಳಿಸಿರುವ ನಟಿ ದಿವ್ಯಾಂಕಾ ತ್ರಿಪಾಠಿ ಬಿಟೌನ್‌ ಕಾಸ್ಟಿಂಗ್ ಕೌಚ್ ಬಗ್ಗೆ ಮೌನ ಮುರಿದಿದ್ದಾರೆ.

ಬಿಟೌನ್‌ ಕಿರುತೆರೆಯಲ್ಲಿ ನಟಿ ದಿವ್ಯಾಂಕಾ ತ್ರಿಪಾಠಿ ಸಖತ್‌ ಕ್ರೇಜ್‌ ಹೊಂದಿದ್ದಾರೆ. ಅಲ್ಲದೆ, ಧಾರಾವಾಹಿ ಲೋಕದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯೂ ಸಹ ಹೌದು.. ತಮ್ಮ ವೃತ್ತಿಜೀವನದ ಕುರಿತು ಮಾತನಾಡಿರುವ ದಿವ್ಯಾಂಕಾ, ಸಿನಿ ಲೋಕಕ್ಕೆ ಎಂಟ್ರಿ ಕೊಡುವ ಮುನ್ನ ಟೂತ್‌ ಪೇಸ್ಟ್ ಬಾಕ್ಸ್‌ಗಳನ್ನು ಮಾರಾಟ ಮಾಡುತ್ತಿದ್ದರು.. ಇದರಿಂದ ಅವರಿಗೆ ತಿಂಗಳಿಗೆ 2 ಸಾವಿರ ರೂ. ಸಿಗುತ್ತಿತ್ತು ಅಂತ ಹೇಳಿಕೊಂಡಿದ್ದಾರೆ. 

ಇದನ್ನೂ ಓದಿ: ನಟಿ ರಾಧಿಕಾ ಕುಮಾರಸ್ವಾಮಿ ಮಗಳು ಹೇಗಿದಾರೆ ಗೊತ್ತಾ? ಥೇಟ್‌ ಅಮ್ಮನಂತೆ ಮುದ್ದು ಗೊಂಬೆ!!  

ಸಧ್ಯ ದಿವ್ಯಾಂಕಾ ಕಾಸ್ಟಿಂಗ್ ಕೌಚ್ ಮೌನ ಮುರಿದಿದ್ದಾರೆ. ಸಿನಿಮಾದಲ್ಲಿ ನಟಿಸಲು ಚಾನ್ಸ್‌ ಬೇಕು ಅಂದ್ರೆ ಏನೇಲ್ಲಾ ಮಡ್ಬೇಕು ಅಂತ ಬಿಟೌನ್‌ ಕಾಸ್ಟಿಂಗ್‌ ಕೌಚ್‌ ಬಗ್ಗೆ ಮಾತನಾಡಿದ್ದಾರೆ. ನನಗೊಂದು ಸೀರಿಯಲ್​ನಲ್ಲಿ ನಟಿಸುವ ಅವಕಾಶ ಬಂದಿತ್ತು. ಒಳ್ಳೆ ಅವಕಾಶ ಸಿಕ್ಕದೆ ಅಂತ ಅಂದುಕೊಂಡು ಅಲ್ಲಿಗೆ ಹೋದ್ರೆ, ಡೈರೆಕ್ಟರ್ ತನ್ನ ಜೊತೆ ಒಂದು ರಾತ್ರಿ ಕಳೆದರೆ ಮಾತ್ರ ಸೀರಿಯಲ್ ಆಫರ್ ಕೊಡುತ್ತೇನೆ ಎಂದು ಹೇಳಿದ್ದ ಅಂತ ಶಾಕಿಂಗ್‌ ನ್ಯೂಸ್‌ ಹೊರ ಹಾಕಿದ್ದಾರೆ.

ಒಪ್ಪಿಕೊಳ್ಳದಿದ್ದರೆ, ವೃತ್ತಿಜೀವನವನ್ನು ಹಾಳು ಮಾಡುವುದಾಗಿ ಬೆದರಿಕೆ ಹಾಕುತ್ತಾರೆ. ಆದರೆ, ಅಂತಹ ಜನರಿಂದ ಏನನ್ನೂ ಮಾಡಲು ಸಾಧ್ಯವಿಲ್ಲ. ನೀವು ನಿಮ್ಮ ಪ್ರತಿಭೆಯನ್ನು ನಂಬಿ ಅಂತ ಯುವ ಪಿಳೀಗೆಗೆ ಸಲಹೆ ನೀಡಿದ್ದಾರೆ. ಸಧ್ಯ ದಿವ್ಯಾಂಕಾ ಹೇಳಿಕೆ ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News