ಬೆಂಗಳೂರು : ಹಣ್ಣುಗಳನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ಮಾರುಕಟ್ಟೆಯಲ್ಲಿ ನಾನಾ ರೀತಿಯ ಹಣ್ಣುಗಳು ಸಿಗುತ್ತವೆ. ಮಾರುಕಟ್ಟೆಯಲ್ಲಿ ಸಿಗುವ ಹಣ್ಣುಗಳ ಮೇಲೆ ಸ್ಟಿಕ್ಕರ್ ಗಳನ್ನು ಹಾಕಿರುವುದನ್ನು ನೀವು ಕೂಡಾ ಗಮನಿಸಿರಬಹುದು. ಈ ಸ್ಟಿಕರ್ ಗಳನ್ನು ಹಣ್ಣುಗಳ ಮೇಲೆ ಯಾತಕ್ಕಾಗಿ ಹಾಕಿರುತ್ತಾರೆ ಎನ್ನುವುದನ್ನು ಯಾವತ್ತಾದರೂ ತಿಳಿದುಕೊಳ್ಳುವ ಪ್ರಯತ್ನ ಪಟ್ಟಿದ್ದೀರಾ? ಈ ಸ್ಟಿಕರ್ ಗೆ ಅದರದ್ದೇ ಆದ ಅರ್ಥವಿದೆ. ಇದನ್ನು ಅರಿತುಕೊಂಡರೆ ನೀವು ಉತ್ತಮ ಗುಣಮಟ್ಟದ ಹಣ್ಣುಗಳನ್ನೇ ಖರೀದಿಸಿ ತರಬಹುದು.
ಹಣ್ಣಿನ ಮೇಲಿನ ಸ್ಟಿಕ್ಕರ್ ಹೇಳುವ ಸತ್ಯಗಳು ಇವು :
ಹಣ್ಣುಗಳ ಮೇಲಿನ ಸ್ಟಿಕ್ಕರ್ಗಳು ಅವುಗಳ ಗುಣಮಟ್ಟದ ಬಗ್ಗೆ ನಿಖರವಾದ ಮಾಹಿತಿಯನ್ನು ನೀಡುತ್ತವೆ. ಈ ಮೂಲಕ ಯಾವ ಹಣ್ಣುಗಳನ್ನು ಖರೀದಿಸಬೇಕು ಮತ್ತು ಯಾವ ಹಣ್ಣುಗಳು ಆರೋಗ್ಯಕ್ಕೆ ಒಳ್ಳೆಯದು ಎನ್ನುವ ನಿಜಾಂಶವನ್ನು ತಿಳಿಸುತ್ತದೆ. ಹಾಗಾಗಿ ಹಣ್ಣುಗಳನ್ನು ಖರೀದಿಸುವ ಮೊದಲು ಈ ಸ್ಟಿಕರ್ ಹಿಂದಿನ ಸತ್ಯವನ್ನು ಅರಿತುಕೊಳ್ಳುವುದು ಮುಖ್ಯ.
ಇದನ್ನೂ ಓದಿ : Jio 5G ಹೊಸ ರಿಚಾರ್ಜ್ ಪ್ಲಾನ್ಸ್...! ಅತಿ ಕಡಿಮೆ ಬೆಲೆ ಬೊಂಬಾಟ್ ಲಾಭ!
4 ಅಂಕಿಯ ಕೋಡ್ :
ಹಣ್ಣಿನ ಸ್ಟಿಕ್ಕರ್ನಲ್ಲಿ ಹಣ್ಣಿನ ಕೋಡ್ ಅನ್ನು ನೀಡಲಾಗುತ್ತದೆ. ಇದನ್ನು PLU ಎಂದು ಕರೆಯಲಾಗುತ್ತದೆ.ಅಂದರೆ Price Look Up. ಪ್ರತಿಯೊಂದು ಕೋಡಿಗೂ ಒಂದೊಂದು ಅರ್ಥವಿದೆ. ಈ ಕೋಡ್ ನಿಮಗೆ ಅರ್ಥವಾದರೆ ಖರೀದಿಸುವ ಹಣ್ಣಿನ ಬಗ್ಗೆಯೂ ನಮಗೆ ತಿಳಿಯುತ್ತದೆ. ಸ್ಟಿಕ್ಕರ್ನಲ್ಲಿ ನಾಲ್ಕು-ಅಂಕಿಯ ಕೋಡ್ ಇದ್ದರೆ ಆ ಹಣ್ಣುಗಳನ್ನು ಬೆಳೆಯುವಾಗ ಕೀಟನಾಶಕಗಳು ಮತ್ತು ರಾಸಾಯನಿಕಗಳನ್ನು ಬಳಸಲಾಗಿದೆ ಎಂದು ಅರ್ಥ.
5 ಅಂಕಿಯ ಕೋಡ್ :
ಒಂದು ಹಣ್ಣಿನಲ್ಲಿ 8 ನಂಬರಿನಿಂದ ಆರಂಭವಾಗುವ 5 ಅಂಕೆಯ ಕೋಡ್ ಇದ್ದರೆ, ಆ ಹಣ್ಣನ್ನು ಸಾವಯವ ರೂಪದಿಂದ ಬೆಳೆಸಲಾಗಿದೆ ಎಂದರ್ಥ. ಈ ಹಣ್ಣುಗಳನ್ನು ತಳೀಯವಾಗಿ ಮಾರ್ಪಡಿಸಬಹುದು ಎಂಬುದನ್ನು ಹೇಳುತ್ತದೆ.
ಸಂಖ್ಯೆ 7 ರಿಂದ ಪ್ರಾರಂಭವಾಗುವ ಕೋಡ್ನ ಅರ್ಥ:
ಒಂದು ಹಣ್ಣಿನಲ್ಲಿ 7ನಂಬರಿನಿಂದ ಆರಂಭವಾಗುವ 5 ಅಂಕೆಗಳ ಕೋಡ್ ಇದ್ದರೆ, ಹಣ್ಣನ್ನು ಸಾವಯವ ರೂಪದಿಂದ ಬೆಳೆಸಲಾಗಿದೆ. ಆದರೆ ಈ ಹಣ್ಣುಗಳನ್ನು ತಳೀಯವಾಗಿ ಮಾರ್ಪಡಿಸಲಾಗುವುದಿಲ್ಲ ಎನ್ನುವ ಅರ್ಥ ನೀಡುತ್ತದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಹಾಗಾಗಿ ನೀವು ಇನ್ನು ಮುಂದೆ ಮಾರುಕಟ್ಟೆಗೆ ಹಣ್ಣು ಖರೀದಿಗೆ ತೆರಳುವಾಗ ಈ ಸ್ಟಿಕ್ಕರ್ ಗಳನ್ನು ನೋಡಿಯೇ ಹಣ್ಣು ಖರೀದಿಸಿ ತರುವುದು ಒಳ್ಳೆಯದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ