ಸಲಾರ್‌ ಕಥೆಯ ಹಿಂಟ್‌ ರಿವಿಲ್‌:‌ ಉಗ್ರಂ ರೀಮೆಕ್‌ ಚರ್ಚೆಗೆ ಬ್ರೇಕ್‌ ಹಾಕಿದ ಪ್ರಶಾಂತ್‌ ನೀಲ್!

Salaar Story: ನಿರ್ದೇಶಕ ಪ್ರಶಾಂತ್‌ ನೀಲ್‌ ಸಂದರ್ಶನವೊಂದರಲ್ಲಿ ಸಲಾರ್‌ ಸಿನಿಮಾ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದು, ಅದರಲ್ಲೂ ಚಿತ್ರದ ಕಥೆಯ ಎಳೆಯ ಬಗ್ಗೆ ಸುಳಿವು ನೀಡಿ, ಉಗ್ರಂ ರೀಮೆಕ್‌ ಅನ್ನುವವರ ಮಾತಿಗೆ ಬ್ರೇಕ್‌ ಹಾಕಿದ್ದಾರೆ. ಹಾಗಾದ್ರೆ ಸಲಾರ್‌ ಸಿನಿಕಥೆ ಏನು? ಇಲ್ಲಿದೆ ಡಿಟೇಲ್ಡ್ ಸ್ಟೋರಿ.  

Written by - Zee Kannada News Desk | Last Updated : Nov 29, 2023, 01:11 PM IST
  • 'ಸಲಾರ್' ಸಿನಿಮಾ ಅಂತೂ ಇಂತೂ ಡಿಸೆಂಬರ್ 22ಕ್ಕೆ ತೆರೆಗಪ್ಪಳಿಸಲಿದ್ದು, ಡಿಸೆಂಬರ್ 1ಕ್ಕೆ ಜಬರ್ದಸ್ತ್ ಟ್ರೇಲರ್ ರಿಲೀಸ್ ಪ್ಲ್ಯಾನ್ ನಡೀತಿದೆ.
  • ಪ್ರಶಾಂತ್‌ ನೀಲ್‌ ಸಂದರ್ಶನವೊಂದರಲ್ಲಿ ಸಿನಿಮಾ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದು, ಅದರಲ್ಲೂ ಚಿತ್ರದ ಕಥೆಯ ಎಳೆಯ ಬಗ್ಗೆ ಸುಳಿವು ನೀಡಿದ್ದಾರೆ.
  • ನೀಲ್‌ ನಾನು ಬಾಂಧವ್ಯಗಳ ಬಗ್ಗೆ ಕಥೆ ಬರೆಯುತ್ತೇನೆ. ಸ್ನೇಹಿತ, ತಾಯಿ, ತಂದೆ ಹೀಗೆ ಬಾಂಧವ್ಯ ಕಥೆ ನನ್ನ ಸಿನಿಮಾದಲ್ಲಿ ಇರುತ್ತದೆ ಎಂದು ಹೇಳಿದ್ದಾರೆ.‌
ಸಲಾರ್‌ ಕಥೆಯ ಹಿಂಟ್‌ ರಿವಿಲ್‌:‌ ಉಗ್ರಂ ರೀಮೆಕ್‌ ಚರ್ಚೆಗೆ ಬ್ರೇಕ್‌ ಹಾಕಿದ ಪ್ರಶಾಂತ್‌ ನೀಲ್! title=

Prashanth Neel Revealed About Salaar: ಟಾಲಿವುಡ್‌ ರೆಬಲ್‌ ಸಾರ್‌ ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ಬಿಡುಗಡೆಗೆ ಇನ್ನೊಂದು ತಿಂಗಳು ಮಾತ್ರ ಬಾಕಿಯಿದ್ದು, ಈ ವಾರವೇ ಚಿತ್ರದ  ಟ್ರೇಲರ್ ಬರಲಿದೆ. ಹೊಂಬಾಳೆ ಸಂಸ್ಥೆ ಬಹುಕೋಟಿ ವೆಚ್ಚದಲ್ಲಿ ಸರಣಿ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಘಟಾನುಘಟಿ ಕಲಾವಿದರು, ತಂತ್ರಜ್ಞರ ತಂಡ ಕಟ್ಟಿಕೊಂಡು ಪ್ರಶಾಂತ್ ನೀಲ್ ಈ ಆಕ್ಷನ್ ಎಂಟರ್‌ಟೈನರ್ ಕಥೆ ಹೇಳಿದ್ದಾರೆ. ಬಹಳ ಹಿಂದೆ ಶುರುವಾಗಿದ್ದ 'ಸಲಾರ್' ಸಿನಿಮಾ ಅಂತೂ ಇಂತೂ ಡಿಸೆಂಬರ್ 22ಕ್ಕೆ ತೆರೆಗಪ್ಪಳಿಸಲಿದ್ದು, ಡಿಸೆಂಬರ್ 1ಕ್ಕೆ ಜಬರ್ದಸ್ತ್ ಟ್ರೇಲರ್ ರಿಲೀಸ್ ಪ್ಲ್ಯಾನ್ ನಡೀತಿದೆ. 

ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ 'ಸಲಾರ್' ಆರ್ಭಟ ನಡೆಯಲಿದ್ದು, ಚಿತ್ರಕಥೆ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಡದೇ ಸಿನಿತಂಡ ಜಾಣ್ಮೆ ಮೆರೆದಿದೆ. ಆದರೆ ಇದು ಕನ್ನಡದ 'ಉಗ್ರಂ' ರೀಮೆಕ್ ಅನ್ನೋ ಮಾತುಗಳು ಕೇಳಿಬರುತ್ತಲೇಯಿದ್ದು, 'ಉಗ್ರಂ' ಕಥೆಯನ್ನೇ ಕೊಂಚ ಬದಲಿಸಿ ಬಹಳ ದೊಡ್ಡದಾಗಿ 2 ಭಾಗಗಳಾಗಿ ಸಿನಿಮಾ ರಿಲೀಸ್ ಮಾಡಲಾಗುತ್ತಿದೆ. 'ಕೆಜಿಎಫ್' ಸರಣಿಗೆ ಕೆಲಸ ಮಾಡಿದ ಬಹುತೇಕ ತಂಡ ಈ ಚಿತ್ರಕ್ಕೂ ಕೆಲಸ ಮಾಡಿದ್ದು, ಇಷ್ಟುದಿನ 'ಸಲಾರ್' ಕಥೆ ಬಗ್ಗೆ ಮೌನವಾಗಿದ್ದ ಪ್ರಶಾಂತ್ ನೀಲ್ ಕೊನೆಗೂ ಮಾತನಾಡಿದ್ದಾರೆ. 

ಇದನ್ನೂ ಓದಿ: ಮತ್ತೆ ಪ್ರೇಮಕಥೆಯತ್ತ ದಿಯಾ ಹೀರೋ.. ಪೃಥ್ವಿ ಅಂಬಾರ್ ನಟನೆಯ ‘ಜೂನಿ’ ಸಿನಿಮಾದ ಫಸ್ಟ್ ಲುಕ್ ರಿಲೀಸ್

ಪ್ರಶಾಂತ್‌ ನೀಲ್‌ ಸಂದರ್ಶನವೊಂದರಲ್ಲಿ ಸಿನಿಮಾ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದು, ಅದರಲ್ಲೂ ಚಿತ್ರದ ಕಥೆಯ ಎಳೆಯ ಬಗ್ಗೆ ಸುಳಿವು ನೀಡಿದ್ದಾರೆ. 'ಸಲಾರ್' ಇಬ್ಬರು ಸ್ನೇಹಿತರ ಸಿನಿಮಾ ಎಂದು ಮಾಹಿತಿ ನೀಡಿ, "ಸಲಾರ್ ಇಬ್ಬರು ಸ್ನೇಹಿತರು ದೊಡ್ಡ ಶತ್ರುಗಳಾಗಿ ಬದಲಾಗುವ ಕಥೆ. ಸ್ನೇಹವೇ ಚಿತ್ರದ ಮುಖ್ಯವಾದ ಅಂಶ. ಇಬ್ಬರು ಆತ್ಮೀಯ ಸ್ನೇಹಿತರ ಜರ್ನಿಯನ್ನು ನಾವು ಎರಡು ಭಾಗಗಳಲ್ಲಿ ಹೇಳುತ್ತೇವೆ. ನಾವು ಸೃಷ್ಟಿಸಿರುವ 'ಸಲಾರ್' ಪ್ರಪಂಚದ ಝಲಕ್ ಅನ್ನು ಪ್ರೇಕ್ಷಕರಿಗೆ ಟ್ರೇಲರ್‌ನಲ್ಲಿ ತೋರಿಸಲಿದ್ದೇವೆ" ಎಂದಿದ್ದಾರೆ. 

ನೀಲ್‌ ಸಿನಿಮಾ ಬಗ್ಗೆ ಹಂಚಿಕೊಳ್ಳುತ್ತಾ "ನಾನು ಬಾಂಧವ್ಯಗಳ ಬಗ್ಗೆ ಕಥೆ ಬರೆಯುತ್ತೇನೆ. ಸ್ನೇಹಿತ, ತಾಯಿ, ತಂದೆ ಹೀಗೆ ಬಾಂಧವ್ಯ ಕಥೆ ನನ್ನ ಸಿನಿಮಾದಲ್ಲಿ ಇರುತ್ತದೆ. ಮೊದಲಿಗೆ ಬಾಂಧವ್ಯ ಬರೆದರೂ ಬಳಿಕ ಆಕ್ಷನ್ ಅದಕ್ಕೆ ಸೇರಿಕೊಳ್ಳುತ್ತದೆ. KGF ಸರಣಿ ಹಾಗೂ ಸಲಾರ್ ಎರಡೂ ಬೇರೆ ಬೇರೆ ಸಿನಿಮಾಗಳು. ಬೇರೆ ಬೇರೆ ಎಮೋಷನ್‌ನ ಬೇರೆ ಬೇರೆ ರೀತಿ ಹೇಳಲಾಗಿದೆ. ಪ್ರೇಕ್ಷಕರ ಮತ್ತೊಂದು KGF ನಿರೀಕ್ಷೆ ಮಾಡಬಾರದು. ಇದು ಬೇರೆಯದ್ದೇ ಪ್ರಪಂಚ. ಅದರದ್ದೇ ಆದ ಪಾತ್ರಗಳು, ಎಮೋಷನ್ ಈ ಚಿತ್ರದಲ್ಲಿ ಇರಲಿದೆ." ಎಂದು ಹೇಳಿದ್ದಾರೆ.

ಇದನ್ನೂ ಓದಿ: "ಡಂಕಿ ಜೊತೆ ಪೈಪೋಟಿ ಮಾಡುತ್ತಿರುವ ನಮಗೆ ಭಯವಿಲ್ಲ": ಪ್ರಶಾಂತ್‌ ನೀಲ್!

ನಿರ್ದೇಶಕ ಪ್ರಶಾಂತ್‌ ನೀಲ್‌ ಕೆಜಿಎಫ್‌ ಬಗ್ಗೆ ಕೊಂಚ ಮಾತನಾಡುತ್ತಾ, "ನಿಜ ಹೇಳಬೇಕು ಅಂದ್ರೆ ಕೆಜಿಎಫ್ ಎರಡು ಭಾಗವಾಗಿರಲಿಲ್ಲ, ಆದರೆ 'ಸಲಾರ್' ಭಾಗ. ಕಥೆಯು ತುಂಬಾ ದೊಡ್ಡದಾಗಿದೆ, ಈ ಕತೆಯನ್ನು 6 ಗಂಟೆಗಳ ಸಿನಿಮಾ ಮಾಡಬಹುದು. ಎರಡನೇ ಭಾಗಕ್ಕೆ ಸಾಕಷ್ಟು ವಿಷಯವಿದೆ ಮತ್ತು ಸಲಾರ್ ಭಾಗ-1 ಒಂದನ್ನು ವೀಕ್ಷಿಸಿದಾಗ ಪ್ರೇಕ್ಷಕರು ಸಹ ಅದೇ ರೀತಿ ಭಾವಿಸುತ್ತಾರೆ. ಇದೊಂದು ಶುದ್ಧ ಕಥೆ ಆಧಾರಿತ ಚಿತ್ರ. ವಾಸ್ತವವಾಗಿ, ನಾನು ಕೆಜಿಎಫ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸುವ ಮೊದಲೇ ನಾನು ಸಲಾರ್ ಬರೆದಿದ್ದೆ" ಎಂದು  ವಿವರಿಸಿದ್ದಾರೆ. ಪ್ರಶಾಂತ್ ನೀಲ್ ಇಷ್ಟೆಲ್ಲಾ ಹೇಳಿದರೂ 'ಸಲಾರ್' ರಿಲೀಸ್ ಆಗುವರೆಗೂ ಇದು 'ಉಗ್ರಂ' ರೀಮೆಕ್ ಹೌದೋ, ಅಲ್ಲವೋ ಎನ್ನುವ ಚರ್ಚೆ ನಿಲ್ಲುವುದಿಲ್ಲ. ಕೊನೆ ಪಕ್ಷ ಟ್ರೈಲರ್ ಆ ಅನುಮಾನ ಸುಳ್ಳಾಗಿಸುತ್ತಾ ಕಾದು ನೋಡಬೇಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News