Dhanush SIR trailer : ಧನುಷ್‌ ʼಸರ್‌ʼ ಟ್ರೈಲರ್‌ ರಿಲೀಸ್‌, ʼಇಳಯ ಸೂಪರ್‌ಸ್ಟಾರ್‌ʼ ಯಂಗ್‌ ಲುಕ್‌ ಸೂಪರ್‌..!

SIR Trailer : ನಟ ಧನುಷ್ ಮತ್ತು ಸಂಯುಕ್ತಾ ಮೆನನ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಸಿನಿಮಾ ʼಸರ್ʼ. ವೆಂಕಿ ಅಟ್ಲೂರಿ ನಿರ್ದೇಶನದ ಈ ಚಿತ್ರವನ್ನು ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಸೂರ್ಯದೇವರ ನಾಗವಂಶಿ ನಿರ್ಮಿಸಿದ್ದಾರೆ. ಚಿತ್ರ ಫೆಬ್ರವರಿ 17 ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ರಿಲೀಸ್‌ ಆಗಿರುವ ಸರ್‌ ಹಾಡುಗಳು ಯೂಟ್ಯೂಬ್ ನಲ್ಲಿ ಟ್ರೆಂಡ್ ಆಗಿವೆ. 

Written by - Krishna N K | Last Updated : Feb 8, 2023, 07:46 PM IST
  • ನಟ ಧನುಷ್ ಮುಂಬರುವ ಸರ್‌ ಚಿತ್ರದ ಟ್ರೈಲರ್‌ ರಿಲೀಸ್‌ ಆಗಿದೆ.
  • ಚಿತ್ರ ಫೆಬ್ರವರಿ 17 ರಂದು ಬಿಡುಗಡೆಯಾಗುತ್ತಿದೆ.
  • ಟ್ರೈಲರ್‌ನಲ್ಲಿ ಧನುಷ್ಯ ಯಂಗ್‌ ಲುಕ್‌ ಸೂಪರ್‌ ಆಗಿದೆ.
Dhanush SIR trailer : ಧನುಷ್‌ ʼಸರ್‌ʼ ಟ್ರೈಲರ್‌ ರಿಲೀಸ್‌, ʼಇಳಯ ಸೂಪರ್‌ಸ್ಟಾರ್‌ʼ ಯಂಗ್‌ ಲುಕ್‌ ಸೂಪರ್‌..! title=

SIR Official Trailer : ಇಳಯ ಸೂಪರ್‌ಸ್ಟಾರ್‌ ನಟ ಧನುಷ್ ಮತ್ತು ಸಂಯುಕ್ತಾ ಮೆನನ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಸಿನಿಮಾ ʼಸರ್ʼ. ವೆಂಕಿ ಅಟ್ಲೂರಿ ನಿರ್ದೇಶನದ ಈ ಚಿತ್ರವನ್ನು ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಸೂರ್ಯದೇವರ ನಾಗವಂಶಿ ನಿರ್ಮಿಸಿದ್ದಾರೆ. ಚಿತ್ರ ಫೆಬ್ರವರಿ 17 ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ರಿಲೀಸ್‌ ಆಗಿರುವ ಸರ್‌ ಹಾಡುಗಳು ಯೂಟ್ಯೂಬ್ ನಲ್ಲಿ ಟ್ರೆಂಡ್ ಆಗಿವೆ. 

ಸಧ್ಯ ಸರ್‌ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ತಮಿಳು ಮತ್ತು ತೆಲುಗು ಭಾಷೆಗಳಲ್ಲಿರುವ ಟ್ರೇಲರ್ ಎಲ್ಲರ ನಿರೀಕ್ಷೆಯನ್ನು ಹೆಚ್ಚಿಸಿದೆ. ಟ್ರೈಲರ್‌ನಲ್ಲಿ ಧನುಷ್ಯ ಯಂಗ್‌ ಲುಕ್‌ ಸೂಪರ್‌ ಆಗಿದೆ. ಇದೊಂದು ಶಿಕ್ಷಣ ಕುರಿತ ಕಥೆ ಹೊಂದಿರುವ ಸಿನಿಮಾ ಅಂತ ಟ್ರೇಲರ್‌ ನೋಡಿದ್ರೆ ತಿಳಿಯುತ್ತದೆ. ಅಲ್ಲದೆ, ಎಡ್ಯುಕೇಷನ್‌ ಕುರಿತ ಡೈಲಾಗ್ಸ್‌ ಸಖತ್ತಾಗಿವೆ. ಅದರಲ್ಲಿ, ʼಹಣ ಹೇಗಾದ್ರೂ ಸಂಪಾದಿಸಬಹುದು ಆದ್ರೆ, ಮರ್ಯಾದೆ, ಗೌರವನ್ನು ಶಿಕ್ಷಣ ಸಂಪಾದಿಸಿ ಕೊಡುತ್ತದೆʼ ಎನ್ನು ಸಂಭಾಷಣೆ ಅರ್ಥಗರ್ಭಿತವಾಗಿವೆ.

 

ಇದನ್ನೂ ಓದಿ:  ʼದಿ ಕಪಿಲ್‌ ಶರ್ಮಾ ಶೋʼನಲ್ಲಿ ನಟ ಗಣೇಶ್‌.. ಮತ್ತೆ ಆ್ಯಂಕರ್ ಆಗ್ತಾರಾ ಕಾಮಿಡಿ ಕಿಂಗ್‌..!

ಶಿಕ್ಷಣ ಕ್ಷೇತ್ರದಲ್ಲಿ ಹಣ, ರಾಜಕೀಯದ ಪ್ರಭಾವವನ್ನು ವೆಂಕಿ ಅಟ್ಲೂರಿ ತೋರಿಸಲು ಹೊರಟಿದ್ದಾರೆ. ಸಮುದ್ರಖನಿ ಅವರ ಡೈಲಾಗ್‌ಗಳು ತುಂಬಾ ಚನ್ನಾಗಿ ಮೂಡಿಬಂದಿದೆ. ಸರ್‌ ಆಗಿ ಧನುಷ್ಯ ಹಣ ಮತ್ತು ಶಿಕ್ಷಣದ ಮಹತ್ವವನ್ನು ಪ್ರೇಕ್ಷಕರಿಗೆ ಹೇಳಲು ಹೊರಟಿದ್ದಾರೆ. ಚಿತ್ರದಲ್ಲಿ ಧನುಷ್ ಸರ್ ತುಂಬಾ ನ್ಯಾಚುರಲ್ ಆಗಿ ಕಾಣಿಸಿಕೊಂಡಿದ್ದಾರೆ. ಸಂಯುಕ್ತಾ ಮೆನನ್ ಪಾತ್ರಕ್ಕೆ ಪ್ರಾಮುಖ್ಯತೆ ಇದೆಯಂತೆ. ಜಿವಿ ಪ್ರಕಾಶ್ ಸಂಗೀತ ನೀಡಿರುವ ಹಾಡುಗಳು ಚಿತ್ರದ ಹೈಲೈಟ್. ಇನ್ನು ಜಬರ್‌ದಸ್ತ್‌ ಖ್ಯಾತಿಯ ಹೈಪರ್ ಆದಿ ಕೂಡ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News