ಆಲಿಯಾ-ರಣಬೀರ್‌ ಮದುವೆಗೆ ಮಾಜಿ ಪ್ರೇಯಸಿ ದೀಪಿಕಾ ಕೊಟ್ಟ ಗಿಫ್ಟ್‌ ಏನು ಗೊತ್ತಾ?

ರಣ್‌ಬೀರ್‌ ಕಪೂರ್‌ ಅವರ ಮಾಜಿ ಪ್ರೇಯಸಿ, ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಮತ್ತು ನಟ  ರಣವೀರ್‌ ಸಿಂಗ್‌ ಮದುವೆಗೆ ಆಗಮಿಸಿದ್ದು, ದುಬಾರಿ ಗಿಫ್ಟ್‌ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ. 

Written by - Bhavishya Shetty | Last Updated : Apr 19, 2022, 11:36 AM IST
  • ಏ.15ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆಲಿಯಾ-ರಣಬೀರ್‌
  • ಮದುವೆಗೆ ದುಬಾರಿ ಗಿಫ್ಟ್‌ ಕೊಟ್ಟ ಮಾಜಿ ಪ್ರೇಯಸಿ ದೀಪಿಕಾ
  • ಬಾಲಿವುಡ್‌ನ ಗಣ್ಯಾತಿಗಣ್ಯರು ಭಾಗಿ
ಆಲಿಯಾ-ರಣಬೀರ್‌ ಮದುವೆಗೆ ಮಾಜಿ ಪ್ರೇಯಸಿ ದೀಪಿಕಾ ಕೊಟ್ಟ ಗಿಫ್ಟ್‌ ಏನು ಗೊತ್ತಾ?  title=
Ranbir Alia Wedding

ಮುಂಬೈ: ಬಾಲಿವುಡ್‌ನ ಕ್ಯೂಟ್‌ ಜೋಡಿ ಆಲಿಯಾ ಭಟ್‌ ಮತ್ತು ರಣಬೀರ್‌ ಕಪೂರ್‌ ಇತ್ತೀಚೆಗೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಸುದ್ದಿ, ಆಲಿಯಾ ಮತ್ತು ರಣಬೀರ್‌ ಕಪೂರ್‌ ಫ್ಯಾನ್ಸ್‌ಗೆ ಸಿಹಿ ಸುದ್ದಿ ನೀಡಿತ್ತು. ಇನ್ನು ಇವರ ಮದುವೆ ಸಮಾರಂಭಕ್ಕೆ ಅನೇಕ ಸೆಲೆಬ್ರಿಟಿಗಳು ಆಗಮಿಸಿ ಶುಭಹಾರೈಸಿದ್ದರು.

ಇದನ್ನು ಓದಿ: ನಿಖಿಲ್ ಸಿದ್ಧಾರ್ಥ್ ಪ್ಯಾನ್ ಇಂಡಿಯಾ ಸಿನಿಮಾ ಅನೌನ್ಸ್..!

ರಣ್‌ಬೀರ್‌ ಕಪೂರ್‌ ಅವರ ಮಾಜಿ ಪ್ರೇಯಸಿ, ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಮತ್ತು ನಟ  ರಣವೀರ್‌ ಸಿಂಗ್‌ ಮದುವೆಗೆ ಆಗಮಿಸಿದ್ದು, ದುಬಾರಿ ಗಿಫ್ಟ್‌ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ. 15 ಲಕ್ಷ ರೂ. ಮೌಲ್ಯದ ಎರಡು ವಾಚ್‌ಗಳನ್ನು ದೀಪಿಕಾ ನೀಡಿದರೆ,  80 ಲಕ್ಷ ರೂ. ಮೌಲ್ಯದ ಬೈಕ್‌ ಅನ್ನು ರಣವೀರ್‌ ಸಿಂಗ್‌ ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲದೆ, ಕರೀನಾ ಕಪೂರ್‌ ಮತ್ತು ಪ್ರಿಯಾಂಕಾ ಚೋಪ್ರಾ ಅವರು ಆಲಿಯಾಗೆ ಡೈಮಂಡ್‌ ನೆಕ್ಲೇಸ್‌ನ್ನು ಗಿಫ್ಟ್‌ ಆಗಿ ನೀಡಿದ್ದಾರಂತೆ. 

ಬಾಲಿವುಡ್‌ನ ಗಲ್ಲಿ ಗಲ್ಲಿಯಲ್ಲೂ ಆಲಿಯಾ ಮತ್ತು ರಣಬೀರ್ ಕಪೂರ್ ಮದುವೆ ಮಾತು ಜೋರಾಗಿ ಹಬ್ಬಿತ್ತು. ಯಾವಾಗ ಈ ಜೋಡಿ ಮದುವೆ ಆಗುತ್ತೆ ಅಂತಾ ತಲೆ ಕೆಡಿಸಿಕೊಂಡಿದ್ದ ಅಭಿಮಾನಿಗಳಿಗೆ ಇವರ ಮದುವೆ ಸಿಹಿ ಸುದ್ದಿಯನ್ನು ನೀಡಿತ್ತು. ಏ.13ರಂದು ಆಲಿಯಾ ಮತ್ತು ರಣಬೀರ್ ಕಪೂರ್ ಮದುವೆಯ ಮೆಹಂದಿ ಶಾಸ್ತ್ರ ನಡೆದಿದೆ. ಏಪ್ರಿಲ್‌ 14ರಂದು ಹಳದಿ ಹಾಗೂ ಸಂಗೀತ್‌ ಕಾರ್ಯಕ್ರಮ, ಬಳಿಕ  ಏ.15ರಂದು ಅದ್ಧೂರಿಯಾಗಿ ಮದುವೆ ನಡೆದಿದೆ. ಇನ್ನು ಏ.16ರಂದು ಸಂಜೆ ಔತಣಕೂಟ ಏರ್ಪಡಿಸಲಾಗಿದ್ದು, ಬಾಲಿವುಡ್‌ನ ಗಣ್ಯಾತಿಗಣ್ಯರು ಆಗಮಿಸಿದ್ದರು. 

ನವಜೋಡಿಯ ʼಬ್ರಹ್ಮಾಸ್ತ್ರʼ: 
ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಒಟ್ಟಾಗಿ ‘ಬ್ರಹ್ಮಾಸ್ತ್ರ’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಸೆಟ್‌ನಲ್ಲಿ ಇಬ್ಬರಿಗೂ ಪ್ರೀತಿ ಮೂಡಿದೆ ಎನ್ನಲಾಗಿತ್ತು. ಬಳಿಕ ಇಬ್ಬರೂ ತಮ್ಮ ಪ್ರೀತಿಯ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದರು. ಇಬ್ಬರೂ ಮದುವೆ ಆಗೋದು ಪಕ್ಕಾ ಆಗಿತ್ತು. ಆದರೆ ಮದುವೆ ದಿನಾಂಕ ಮಾತ್ರ ಫೈನಲ್‌ ಆಗಿರಲಿಲ್ಲ. ಇದೀಗ ವಿವಾಹವಾಗಿರುವ ಜೋಡಿಗಳು ಜಾಲಿಮೂಡ್‌ನಲ್ಲಿದ್ದಾರೆ. 

​ಇದನ್ನು ಓದಿ: The Kashmir Files:ಅತೀ ಶೀಘ್ರದಲ್ಲೇ OTT ಅಲ್ಲಿ ದಿ ಕಾಶ್ಮೀರ ಫೈಲ್ಸ್‌ ರಿಲೀಸ್‌!

ಅದ್ದೂರಿಯಾಗಿ ನಡೆದ ಆಲಿಯಾ ರಣ್‌ಬೀರ್‌ ಮದುವೆ ಸಮಾರಂಭದಲ್ಲಿ ಎರಡೂ ಕುಟುಂಬಗಳ ಆಪ್ತರು ಮತ್ತು ಸ್ನೇಹಿತರಷ್ಟೇ ಭಾಗವಹಿಸಿದ್ದರು. ನೀತು ಕಪೂರ್, ಕರೀನಾ ಕಪೂರ್, ಮಹೇಶ್ ಭಟ್, ಸೋನಿ ರಜ್ದಾನ್, ಕರಿಷ್ಮಾ ಕಪೂರ್, ಕರಣ್ ಜೋಹರ್, ಅಯಾನ್ ಮುಖರ್ಜಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News