BBK 9: ಟಾಸ್ಕ್‌ಗೂ ಸೈ, ಮನರಂಜನೆಯಲ್ಲೂ ಮೇಲುಗೈ.. ‘ಬಿಗ್ ಬಾಸ್’ ಗೆಲ್ತಾರಾ ದೀಪಿಕಾ ದಾಸ್?

BBK 9 Finale : ಬಿಗ್ ಬಾಸ್ ಕನ್ನಡ ಸೀಸನ್ 9 ರಲ್ಲಿ ದೀಪಿಕಾ ದಾಸ್ ಅವರ ಪ್ರವೇಶವು ಬಹು ನಿರೀಕ್ಷಿತವಾಗಿತ್ತು ಏಕೆಂದರೆ ನಟಿ ಪ್ರೋಮೋದಲ್ಲಿಯೂ ಕಾಣಿಸಿಕೊಂಡಿದ್ದರು. ಬಿಗ್ ಬಾಸ್ ಕನ್ನಡ 9 ರ ಸೀಸನ್ ಪ್ರೀಮಿಯರ್ ಸಮಯದಲ್ಲಿ ನಟಿ ಹಿರಿಯ ಸ್ಪರ್ಧಿಗಳಲ್ಲಿ ಒಬ್ಬರಾಗಿ ರಿಯಾಲಿಟಿ ಶೋಗೆ ಪ್ರವೇಶಿಸಿದರು. 

Written by - Chetana Devarmani | Last Updated : Dec 30, 2022, 05:26 PM IST
  • ಬಿಗ್ ಬಾಸ್ ಕನ್ನಡ ಸೀಸನ್ 9 ಗ್ರ್ಯಾಂಡ್‌ ಫಿನಾಲೆ
  • ವೈಲ್ಡ್ ಕಾರ್ಡ್ ಎಂಟ್ರಿಯಿಂದ ಫಿನಾಲೆವರೆಗೆ
  • ದೀಪಿಕಾ ದಾಸ್ ಜರ್ನಿ ಹೀಗಿತ್ತು
BBK 9: ಟಾಸ್ಕ್‌ಗೂ ಸೈ, ಮನರಂಜನೆಯಲ್ಲೂ ಮೇಲುಗೈ.. ‘ಬಿಗ್ ಬಾಸ್’ ಗೆಲ್ತಾರಾ ದೀಪಿಕಾ ದಾಸ್? title=
ದೀಪಿಕಾ ದಾಸ್

Deepika Das : ಹಿರಿಯ ಸ್ಪರ್ಧಿಯಾಗಿ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದ ಕನ್ನಡ ನಟಿ ದೀಪಿಕಾ ದಾಸ್ ಬಿಗ್ ಬಾಸ್ ಕನ್ನಡ ಸೀಸನ್ 9 ರ ಫೈನಲಿಸ್ಟ್ ಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ. ದೀಪಿಕಾ ಬಿಗ್ ಬಾಸ್ ಕನ್ನಡ ಸೀಸನ್ 7 ರ ಫೈನಲಿಸ್ಟ್ ಕೂಡ ಆಗಿದ್ದರು. ಎರಡನೇ ಬಾರಿಗೆ ಬಿಗ್ ಬಾಸ್ ಮನೆಯೊಳಗೆ ದೀಪಿಕಾ ಇದ್ದರು. ಬಿಗ್ ಬಾಸ್ ಮನೆಯೊಳಗೆ ನಟಿಯ ಪ್ರಯಾಣದ ಕ್ವಿಕ್‌ ಸ್ನೀಕ್ ಪೀಕ್ ಇಲ್ಲಿದೆ.  

ಬಿಗ್ ಬಾಸ್ ಕನ್ನಡ ಸೀಸನ್ 9 ರಲ್ಲಿ ದೀಪಿಕಾ ದಾಸ್ ಅವರ ಪ್ರವೇಶವು ಬಹು ನಿರೀಕ್ಷಿತವಾಗಿತ್ತು ಏಕೆಂದರೆ ನಟಿ ಪ್ರೋಮೋದಲ್ಲಿಯೂ ಕಾಣಿಸಿಕೊಂಡಿದ್ದರು. ಬಿಗ್ ಬಾಸ್ ಕನ್ನಡ 9 ರ ಸೀಸನ್ ಪ್ರೀಮಿಯರ್ ಸಮಯದಲ್ಲಿ ನಟಿ ಹಿರಿಯ ಸ್ಪರ್ಧಿಗಳಲ್ಲಿ ಒಬ್ಬರಾಗಿ ರಿಯಾಲಿಟಿ ಶೋಗೆ ಪ್ರವೇಶಿಸಿದರು. ಎರಡನೇ ಬಾರಿಗೆ ಬಿಗ್ ಬಾಸ್ ಮನೆಯೊಳಗೆ ದೀಪಿಕಾ ಅವರ ಪ್ರಯಾಣವು ಅಸಾಧಾರಣವಾಗಿದೆ. ಪ್ರತಿ ಕೆಲಸ ಮತ್ತು ಚಟುವಟಿಕೆಯ ಸಮಯದಲ್ಲಿ ದೀಪಿಕಾ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ತಮ್ಮ ಸ್ಪರ್ಧಾತ್ಮಕ ಮನೋಭಾವಕ್ಕಾಗಿ ಬಿಗ್ ಬಾಸ್ ಮನೆಯ ಹೊರಗೆ ಅಗಾಧ ಖ್ಯಾತಿಯನ್ನು ಹೊಂದಿದ್ದಾರೆ. ಅಗತ್ಯವಿದ್ದಾಗ ನಿಲುವು ತೆಗೆದುಕೊಳ್ಳುವ ಅವರ ಗುಣವೇ ಪ್ಲಸ್‌ ಪಾಯಿಂಟ್‌ ಆಗಿದೆ.

ಇದನ್ನೂ ಓದಿ : BBK9 : ರೂಪೇಶ್‌ ಶೆಟ್ಟಿ ಗೆಲ್ಬೇಕು ಅಂತ ಕಣ್ಣೀರಿಟ್ಟ ಆರ್ಯವರ್ಧನ್‌ ಗುರೂಜಿ..!

ಸೀಸನ್‌ನ ಮೂರನೇ ವಾರದಲ್ಲಿ ನಟಿ ಬಿಗ್ ಬಾಸ್ ಕನ್ನಡ 9 ರ ಮೊದಲ ಮಹಿಳಾ ಕ್ಯಾಪ್ಟನ್‌ ಆದರು. ಕ್ಯಾಪ್ಟನ್‌ ಆದ ಮೊದಲ ಮಹಿಳಾ ಸ್ಪರ್ಧಿ ಎಂಬ ಕೀರ್ತಿ ಪಡೆದರು. ಆದರೆ, ದೀಪಿಕಾ ಅವರ ಕ್ಯಾಪ್ಟನ್ಸಿ ಕೇಕ್‌ವಾಕ್ ಆಗಿರಲಿಲ್ಲ. ತನ್ನ ಸಹ-ಸ್ಪರ್ಧಿಗಳು ಮತ್ತು ಕಾರ್ಯಗಳಿಗೆ ಸಂಬಂಧಿಸಿದ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಅವರು ಬಹಳಷ್ಟು ಅಡೆತಡೆಗಳನ್ನು ಎದುರಿಸಬೇಕಾಗಿತ್ತು.

ಆ ಬಳಿಕ ಸುಮಾರು ಐವತ್ತೈದು ದಿನಗಳ ನಂತರ ದೀಪಿಕಾ ಅವರ ಬಿಗ್ ಬಾಸ್ ಪ್ರಯಾಣವು ಕೊನೆಗೊಂಡಿತು. ಆದರೆ ಮರುದಿನ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮತ್ತೆ ಮನೆಗೆ ಪ್ರವೇಶಿಸಿದರು. ರಿಯಾಲಿಟಿ ಶೋನಿಂದ ಅವರು ಮಧ್ಯದಲ್ಲಿ ಎಲಿಮಿನೇಟ್‌ ಆದರು. ಆ ಬಳಿಕ ದೀಪಿಕಾ 'ವೈಲ್ಡ್ ಕಾರ್ಡ್' ಸ್ಪರ್ಧಿಯಾಗಿ ಅಚ್ಚರಿಯ ಮರು-ಪ್ರವೇಶವನ್ನು ಮಾಡಿದರು. ವಲ್ಡ್‌ ಕಾರ್ಡ್‌ ಎಂಟ್ರಿ ಮೂಲಕ ಮತ್ತೆ ಮನೆಗೆ ಬಂದ ದೀಪಿಕಾ ತಮ್ಮ ಆಟದ ವರಸೆಯನ್ನೇ ಬದಲಿಸಿದರು. ಮೊದಲು ಅಷ್ಟಾಗಿ ಯಾರೊಂದಿಗೂ ಬರೆಯದೇ ಇರುತ್ತಿದ್ದ ದೀಪಿಕಾ, ನಂತರ ಎಲ್ಲರೊಂದಿಗೆ ಫ್ರೆಂಡ್ಲಿಯಾಗಿರುಲು ಶುರು ಮಾಡಿದರು.

ಇದನ್ನೂ ಓದಿ : BBK 9 : ಯಾರಾಗಬಹುದು ಬಿಗ್ ಬಾಸ್ ಕನ್ನಡ ಸೀಸನ್ 9 ವಿನ್ನರ್‌!?

ಹಿರಿಯ ಸ್ಪರ್ಧಿ ದೀಪಿಕಾ ದಾಸ್ ಇತ್ತೀಚಿನ ಸಂಚಿಕೆಗಳಲ್ಲಿ ಹೊಚ್ಚ ಹೊಸ ಅವತಾರದೊಂದಿಗೆ ಅಚ್ಚರಿಗೊಳಿಸಿದರು. ಅರುಣ್ ಸಾಗರ್ ಅವರೊಂದಿಗೆ ಉತ್ತರ ಕರ್ನಾಟಕದ ನಿಷ್ಕಪಟ ಯುವತಿಯ ವೇಷ ಧರಿಸಿ ಮಿನಿ ಮಿನಿ ಮೀನಾಕ್ಷಿ ಪಾತ್ರದ ಮೂಲಕ ಎಲ್ಲರನ್ನೂ ರಂಜಿಸಿದರು. ಅಲ್ಲದೇ ಇದೇ ಸೀಸನ್‌ನಲ್ಲಿ ಸತತ ಎರಡು ಬಾರಿ 'ಕಿಚ್ಚನ ಚಪ್ಪಾಳೆ' ಗಳಿಸಿದ ಅಪರೂಪದ ಸ್ಪರ್ಧಿಗಳಲ್ಲಿ ದೀಪಿಕಾ ದಾಸ್ ಒಬ್ಬರು. ಬಿಗ್ ಬಾಸ್ ಮನೆಯೊಳಗೆ ದೀಪಿಕಾ ಅವರ ಅಭಿನಯ ಮತ್ತು ಲವಲವಿಕೆಗಾಗಿ ನಿರೂಪಕ ಕಿಚ್ಚ ಸುದೀಪ್ ಅವರನ್ನು ಶ್ಲಾಘಿಸಿದರು. ಇದೀಗ ಮತ್ತೊಮ್ಮೆ ದೀಪಿಕಾ ದಾಸ್‌ ಟಾಪ್‌ 5 ಫೈನಲಿಸ್ಟ್‌ಗಳಲ್ಲಿ ಒಬ್ಬರಾಗಿದ್ದಾರೆ. ಸ್ಟೈಲ್, ಗ್ಲಾಮರ್, ಕ್ಲಾಸ್ ಆಗಿರುವ ದೀಪಿಕಾ ದಾಸ್‌ ಬಿಗ್ ಬಾಸ್ ಜರ್ನಿಯಲ್ಲಿ ದೀಪಿಕಾ ದಾಸ್‌ ವಿನ್ನರ್ ಆಗುತ್ತಾರಾ ಎಂಬುದು ಕಾದುನೋಡಬೇಕಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News