ನಟಿ ಮೇಘಾ ಶೆಟ್ಟಿ ವಿರುದ್ಧ ದರ್ಶನ್‌ ಪತ್ನಿ ಗರಂ : ʼನಾನ್‌ಸೆನ್ಸ್ʼ ತಡೆದುಕೊಳ್ಳಲ್ಲ ಎಂದ ವಿಜಯಲಕ್ಷ್ಮಿ

ಇತ್ತೀಚಿಗೆ ನಟ ದರ್ಶನ್ ಅವರ 46ನೇ ಹುಟ್ಟು ಹಬ್ಬವನ್ನು ಅವರ ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸಿದ್ದಾರೆ. ಇಡೀ ರಾತ್ರಿ ದರ್ಶನ್ ಅವರು ಸಹ ಶಾಂತವಾಗಿ ನಿಂತು ತಮ್ಮ ಸೆಲೆಬ್ರೆಟಿಗಳನ್ನು ಭೇಟಿ ಮಾಡಿದರು. ಇದೀಗ ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮಿ ಅವರು ವಿಡಿಯೋ ಒಂದು ಹಂಚಿಕೊಳ್ಳುವ ಮೂಲಕ ನಟಿ ಮೆಘಾ ಶೆಟ್ಟಿಯವರಿಗೆ ಡೈರೆಕ್ಟ್‌ ಆಗಿ ವಾರ್ನಿಂಗ್‌ ನೀಡಿದ್ದಾರೆ. ಅಷ್ಟಕ್ಕೂ ವಿಜಯಲಕ್ಷ್ಮಿಯವರು ಈ ರೀತಿಯ ಗರಂ ಆಗಿದ್ದಾದ್ರೂ ಯಾಕೆ ಅಂತೀರಾ.. ಈ ಫುಲ್‌ ಸ್ಟೋರಿ ಓದಿ.

Written by - Krishna N K | Last Updated : Feb 19, 2023, 03:41 PM IST
  • ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮಿ ಅವರು ವಿಡಿಯೋ ಒಂದು ಹಂಚಿಕೊಳ್ಳುವ ಮೂಲಕ ನಟಿ ಮೇಘಾ ಶೆಟ್ಟಿಯವರಿಗೆ ಡೈರೆಕ್ಟ್‌ ಆಗಿ ವಾರ್ನಿಂಗ್‌ ನೀಡಿದ್ದಾರೆ.
  • ನಟಿ ಮೇಘಾ ಶೆಟ್ಟಿ, ಪವಿತ್ರಾ ಗೌಡ ಸೇರಿದಂತೆ ಅವರ ಸ್ನೇಹಿತರು ಸ್ಪೆಷಲ್ ಆಗಿ ದಚ್ಚು ಬರ್ತ್‌ ಡೇ ಸೆಲೆಬ್ರೆಟ್‌ ಮಾಡಿದರು.
  • ವಿಡಿಯೋ ವೈರಲ್‌ ಆಗುತ್ತಿದ್ದಂತೆ ಇಷ್ಟು ದಿನ ಶಾಂತವಾಗಿದ್ದ ವಿಜಯಲಕ್ಷಿಯವರು ಮೌನ ಮುರಿದಿದ್ದಾರೆ.
ನಟಿ ಮೇಘಾ ಶೆಟ್ಟಿ ವಿರುದ್ಧ ದರ್ಶನ್‌ ಪತ್ನಿ ಗರಂ : ʼನಾನ್‌ಸೆನ್ಸ್ʼ ತಡೆದುಕೊಳ್ಳಲ್ಲ ಎಂದ ವಿಜಯಲಕ್ಷ್ಮಿ title=

Vijayalakshmi Darshan : ಇತ್ತೀಚಿಗೆ ನಟ ದರ್ಶನ್ ಅವರ 46ನೇ ಹುಟ್ಟು ಹಬ್ಬವನ್ನು ಅವರ ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸಿದ್ದಾರೆ. ಇಡೀ ರಾತ್ರಿ ದರ್ಶನ್ ಅವರು ಸಹ ಶಾಂತವಾಗಿ ನಿಂತು ತಮ್ಮ ಸೆಲೆಬ್ರೆಟಿಗಳನ್ನು ಭೇಟಿ ಮಾಡಿದರು. ಇದೀಗ ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮಿ ಅವರು ವಿಡಿಯೋ ಒಂದು ಹಂಚಿಕೊಳ್ಳುವ ಮೂಲಕ ನಟಿ ಮೆಘಾ ಶೆಟ್ಟಿಯವರಿಗೆ ಡೈರೆಕ್ಟ್‌ ಆಗಿ ವಾರ್ನಿಂಗ್‌ ನೀಡಿದ್ದಾರೆ. ಅಷ್ಟಕ್ಕೂ ವಿಜಯಲಕ್ಷ್ಮಿಯವರು ಈ ರೀತಿಯ ಗರಂ ಆಗಿದ್ದಾದ್ರೂ ಯಾಕೆ ಅಂತೀರಾ.. ಈ ಫುಲ್‌ ಸ್ಟೋರಿ ಓದಿ.

ದರ್ಶನ್‌ ಅವರು ಸ್ಯಾಂಡಲ್‌ವುಡ್‌ನಲ್ಲಿ ಬಹು ದೊಡ್ಡ ಆತ್ಮೀಯ ಬಳಗ ಹೊಂದಿದ್ದಾರೆ. ಚಿತ್ರರಂಗದ ಗೆಳೆಯರೆಲ್ಲ ಅವರ ಮನೆಗೆ ಹೋಗಿ ವಿಶ್ ಮಾಡಿ ಬಂದಿದ್ದರು, ಕೆಕ್‌ ಕಟ್‌ ಮಾಡಿ ಸಂಭ್ರಮಿಸಿದ್ದರು. ಆದ್ರೆ, ನಟಿ ಮೇಘಾ ಶೆಟ್ಟಿ, ಪವಿತ್ರಾ ಗೌಡ ಸೇರಿದಂತೆ ಅವರ ಸ್ನೇಹಿತರು ಸ್ಪೆಷಲ್ ಆಗಿ ದಚ್ಚು ಬರ್ತ್‌ ಡೇ ಸೆಲೆಬ್ರೆಟ್‌ ಮಾಡಿದರು. ಈ ಕುರಿತು ವಿಡಿಯೋ ಒಂದನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಇದೀಗ ಇದೇ ವಿಡಿಯೋ ವಿಜಯಲಕ್ಷ್ಮೀ ಅವರ ಕೋಪಕ್ಕೆ ಮುಖ್ಯ ಕಾರಣವಾಗಿದೆ.

 
 
 
 

 
 
 
 
 
 
 
 
 
 
 

A post shared by Vijayalakshmi darshan (@viji.darshan)

ಇದನ್ನೂ ಓದಿ: Urvashi Rautela : ಕ್ರಿಕೆಟಿಗ ರಿಷಬ್ ಪಂತ್‌ಗೆ ವಿಶೇಷ ಸಂದೇಶ ಕಳುಹಿಸಿದ ಊರ್ವಶಿ ರೌಟೇಲಾ.!

ದಚ್ಚು ಬರ್ತ್‌ಡೇಯನ್ನು ಮೇಘಾ ಮತ್ತು ಪವಿತ್ರಾ ಹಾಗೂ ಸೋನಲ್‌ ಗ್ಯಾಂಗ್‌ ಅದ್ಧೂರಿಯಾಗಿ ಆಚರಣೆ ಮಾಡಿದೆ. ಪಾರ್ಟಿಯಲ್ಲಿ ದರ್ಶನ್‌ ಅವರಿಗೆ ಗ್ರ್ಯಾಂಡ್‌ ವೆಲ್‌ಕಮ್‌ ಮಾಡಲಾಗಿತ್ತು. ಡಿಜೆ ಮ್ಯೂಸಿಕ್‌ಗಳ ನಡುವೆ ಶೆಟ್ಟಿ ಆಂಡ್‌ ಗ್ಯಾಂಗ್‌ ದಾಸನಿಗೆ ಕೆಕ್‌ ತಿನ್ನಿಸಿ ಸಂಭ್ರಮಿಸಿದರು. ಅಲ್ಲದೆ, ಪಾರ್ಟಿಯ ವಿಡಿಯೋವನ್ನು ಮೇಘಾ ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದರು. ಅಲ್ಲದೆ ವಿಡಿಯೋಗೆ ಬೃಂದಾವನ ಸಿನಿಮಾದ ʼಹಾರ್ಟಲ್ಲಿರೋ ಹಾರ್ಮೋನಿಯಮ್‌ʼ ಹಾಡನ್ನು ಸೇರಿಸಿ ಹಂಚಿಕೊಂಡಿದ್ದರು.

ಮೇಘಾ ಶೆಟ್ಟಿ ದರ್ಶನ್‌ ಅವರ ಬಿಗ್‌ ಫ್ಯಾನ್‌ ಅಂತ ಗುರುತಿಸಿಕೊಂಡಿದ್ದಾರೆ. ಆಗಾಗ ದಚ್ಚು ಜೊತೆಗಿನ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿತುತ್ತಾರೆ. ಇನ್ನು ಕಳೆದ ಬಾರಿ ದರ್ಶನ್‌ ಅವರು ಸಫಾರಿಗೆ ಹೋಗಿದ್ದಾಗ ಅಲ್ಲಿಗೂ ಸಹ ಹೋಗಿ ಶೆಟ್ಟಿ ಆಂಡ್‌ ಗ್ಯಾಂಗ್‌ ಭೇಟಿ ಮಾಡಿ ಪಾರ್ಟಿ ಮಾಡಿದ್ದರು. ಅಂದಿನ ಫೋಟೋಗಳು ಸಖತ್‌ ವೈರಲ್‌ ಆಗಿದ್ದವು. ಇದೀಗ ಮೆಘಾ ಹಂಚಿಕೊಂಡಿರುವ ವಿಡಿಯೋ ಸಹ ವೈರಲ್‌ ಆಗಿದೆ.

ವಿಡಿಯೋ ವೈರಲ್‌ ಆಗುತ್ತಿದ್ದಂತೆ ಇಷ್ಟು ದಿನ ಶಾಂತವಾಗಿದ್ದ ವಿಜಯಲಕ್ಷಿಯವರು ಮೌನ ಮುರಿದಿದ್ದಾರೆ. ಅಲ್ಲದೆ, "ನನ್ನ ಕುಟುಂಬಕ್ಕೆ ಹಾನಿಯುಂಟು ಮಾಡುವ ವೀಡಿಯೊಗಳು, ಚಿತ್ರಗಳು ಮತ್ತು ಇತರ ವಿಷಯಗಳನ್ನು ಪೋಸ್ಟ್ ಮಾಡುವ ಮತ್ತು ರಿಪೋಸ್ಟ್ ಮಾಡುತ್ತಿರುವ ಜನರು ಮತ್ತು ಅಭಿಮಾನಿಗಳಿಗೆ ತಕ್ಷಣವೇ ಅದನ್ನು  ನಿಲ್ಲಿಸವಂತೆ ಪ್ರಾಮಾಣಿಕವಾಗಿ ವಿನಂತಿ ಮಾಡಿಕೊಳ್ಳುತ್ತೇನೆ. ಒಬ್ಬ ಮಹಿಳೆಯಾಗಿ ಈ ರೀತಿಯ ವೀಡಿಯೊವನ್ನು ಪೋಸ್ಟ್ ಮಾಡುವ ಮೊದಲು ಎರಡು ಬಾರಿ ಯೋಚಿಸಬೇಕಾಗಿತ್ತು. ಏಕೆಂದರೆ, ಇದು ನನಗೆ ಮತ್ತು ನನ್ನ ಮಗನಿಗೆ ಅಪಾರ ನೋವನ್ನು ಉಂಟುಮಾಡಿದೆ. ಇದು ನಿಮ್ಮ ವ್ಯಕ್ತಿತ್ವ ಮತ್ತು ನೈತಿಕತೆಯನ್ನು ತೋರುತ್ತದೆ.
ಗಮನಿಸಿ, ನಾನು ಮೌನವಾಗಿದ್ದೇನೆ ಎಂದ್ರೆ ನಾನ್‌ಸೆನ್ಸ್‌ ತೆಡೆದುಕೊಳ್ಳುತ್ತೇನೆ ಎಂದಲ್ಲ.." ಎಂದು ಶೀರ್ಷಿಕೆ ಬರೆದು ನೇರವಾಗಿ ಮೆಘಾ ಶೆಟ್ಟಿಯವರಿಗೆ ಟ್ಯಾಗ್‌ ಮಾಡಿ ವಾರ್ನಿಂಗ್‌ ನೀಡಿದ್ದಾರೆ.
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News