ಪಾಕಿಸ್ತಾನದಲ್ಲೂ ದರ್ಶನ್ ಹವಾ: ಉರ್ದುಗೆ ಡಬ್​ ಆಗಿ ರಿಲೀಸ್ ಆಯ್ತು ಡಿಬಾಸ್ ಫಿಲ್ಮ್..!

ಪಾಕಿಸ್ತಾನದಲ್ಲೂ ದರ್ಶನ್ ಸಿನಿಮಾ ಬಿಡುಗಡೆ ಆಗಿದೆಯಂತೆ!

Last Updated : Nov 18, 2020, 05:44 PM IST
  • ಪಾಕಿಸ್ತಾನದಲ್ಲೂ ದರ್ಶನ್ ಸಿನಿಮಾ ಬಿಡುಗಡೆ ಆಗಿದೆಯಂತೆ!
  • ದರ್ಶನ್ ಅಭಿನಯದ 'ಐರಾವತ' ಸಿನಿಮಾವು 'ಗ್ಯಾಂಗ್‌ಸ್ಟರ್' ಹೆಸರಿನಲ್ಲಿ ಉರ್ದು ಭಾಷೆಗೆ ಡಬ್ ಆಗಿ ಕರಾಚಿಯ ಚಿತ್ರಮಂದಿರದಲ್ಲಿ ಪ್ರದರ್ಶನ
  • ಚಿತ್ರದ ಸತ್ಯಾಸತ್ಯತೆಯ ಬಗ್ಗೆ ಪೂರ್ಣ ಮಾಹಿತಿ ಇಲ್ಲವಾದರೂ ಚಿತ್ರವು ಸಖತ್ ವೈರಲ್
ಪಾಕಿಸ್ತಾನದಲ್ಲೂ ದರ್ಶನ್ ಹವಾ: ಉರ್ದುಗೆ ಡಬ್​ ಆಗಿ ರಿಲೀಸ್ ಆಯ್ತು ಡಿಬಾಸ್ ಫಿಲ್ಮ್..! title=

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾಗಳು ಸಾಮಾನ್ಯವಾಗಿ ತೆಲುಗು, ತಮಿಳು, ಹಿಂದಿ ಭಾಷೆಗಳಿಗೆ ಡಬ್ ಆಗಿ ಬಿಡುಗಡೆ ಆಗುವುದನ್ನ ನೋಡಿದ್ದೇವೆ. ಆದ್ರೆ, ಹೊಸ ಸುದ್ದಿಯೆಂದರೆ ಪಾಕಿಸ್ತಾನದಲ್ಲೂ ದರ್ಶನ್ ಸಿನಿಮಾ ಬಿಡುಗಡೆ ಆಗಿದೆಯಂತೆ! ನಂಬುತ್ತಿರಾ? ಹಾಗಾದ್ರೆ ಈ ಸುದ್ದಿ ಓದಿ..

ಪಾಕಿಸ್ತಾನದ ಕರಾಚಿಯ ಚಿತ್ರಮಂದಿರವೊಂದರಲ್ಲಿ ಡಿ ಬಾಸ್ ದರ್ಶನ್(Darshan) ಸಿನಿಮಾ ಬಿಡುಗಡೆ ಆಗಿದೆ ಎಂಬ ಸುದ್ದಿಯು ಚಿತ್ರವೊಂದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ದರ್ಶನ್ ಅಭಿಮಾನಿಗಳು ಈ ಸುದ್ದಿಯನ್ನು ವೈರಲ್ ಮಾಡಿದ್ದಾರೆ.

ಕಂಗನಾ v/s IPS ಡಿ.ರೂಪಾ : ಇಬ್ಬರ ನಡುವೆ ಹೊತ್ತಿ ಉರಿತಿದೆ ಪಟಾಕಿ ಕಿಡಿ..!

ಡಿ ಬಾಸ್ ದರ್ಶನ್ ಅಭಿನಯದ 'ಐರಾವತ' ಸಿನಿಮಾವು 'ಗ್ಯಾಂಗ್‌ಸ್ಟರ್' ಹೆಸರಿನಲ್ಲಿ ಉರ್ದು ಭಾಷೆಗೆ ಡಬ್ ಆಗಿ ಕರಾಚಿಯ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿದೆ ಎಂಬ ಒಕ್ಕಣೆಯೊಂದಿಗೆ, ಮುಸ್ಲಿರಂತೆ ಕಾಣುವ ಕೆಲವು ಮಂದಿ ಇರುವ, ದರ್ಶನ್ ಅವರ ಐರಾವತ ಸಿನಿಮಾದ ಪೋಸ್ಟರ್ ಇರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Image

Viral Video: ಕಡಲು ತೀರದಲ್ಲಿ Transparent Dressನಲ್ಲಿ ಕಂಡು ಬಂದ Nora Fatehi

ಚಿತ್ರದ ಸತ್ಯಾಸತ್ಯತೆಯ ಬಗ್ಗೆ ಪೂರ್ಣ ಮಾಹಿತಿ ಇಲ್ಲವಾದರೂ ಚಿತ್ರವು ಸಖತ್ ವೈರಲ್ ಆಗಿದೆ. ದರ್ಶನ್ ಅಭಿಮಾನಿಗಳು ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದು, ದರ್ಶನ್ ಹೊರತಾಗಿ ಇನ್ನಾವ ಕನ್ನಡ ನಟರ ಸಿನಿಮಾಗಳೂ ಸಹ ಪಾಕಿಸ್ತಾನದಲ್ಲಿ ಪ್ರದರ್ಶನ ಕಂಡಿಲ್ಲ ಎನ್ನುತ್ತಿದ್ದಾರೆ.

ಭಜರಂಗಿ ಭಾಯಿಜಾನ್ ನ ಮುನ್ನಿ ಈಗ Trending ಆಗುತ್ತಿರುವುದೇಕೆ?

Trending News