ದರ್ಶನ್‌ನ ಕೆಣಕಬಾರದು...ಒಂದು ವೇಳೆ ಕೆಣಕಿದರೆ ಫೈಯರ್‌ ಫಿಕ್ಸ್‌-ರವಿಚಂದ್ರನ್‌

Ravichandran on Darshan : ನೇರ ನಡೆ, ನುಡಿಯಿಂದಲೇ ಕನ್ನಡ ಸಿನಿರಂಗದಲ್ಲಿ ಗುರುತಿಸಿಕೊಂಡಿರುವ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ತಮ್ಮ ಗತ್ತನ್ನು ಯಾವತ್ತು ಬಿಟ್ಟುಕೊಟ್ಟಿಲ್ಲ. ಇದೀಗ ದರ್ಶನ್ ಬಗ್ಗೆ ಕ್ರೇಜಿಸ್ಟಾರ್ ರವಿಚಂದ್ರನ್ ಮಾತನಾಡಿರುವ ಮಾತುಗಳು ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ.   

Written by - Savita M B | Last Updated : Aug 20, 2023, 06:39 PM IST
  • ದರ್ಶನ್‌ ಅವರದು ಯಾವ ರೀತಿಯ ವ್ಯಕ್ತಿತ್ವ ಎಂಬುದು ಎಲ್ಲರಿಗೂ ಗೊತ್ತು
  • ಇದೀಗ ದರ್ಶನ್‌ ಬಗ್ಗೆ ರವಿಚಂದ್ರನ್‌ ಆಡಿರುವ ಮಾತುಗಳು ಸದ್ಯ ಸಖತ್‌ ವೈರಲ್‌ ಆಗುತ್ತಿವೆ.
  • ದರ್ಶನ್‌ನ ಕೆಣಕಬಾರದು. ಕೆಣಕಿದರೆ ಫೈಯರ್ ಆಗುತ್ತದೆ ಎಂದಿದ್ದಾರೆ
ದರ್ಶನ್‌ನ ಕೆಣಕಬಾರದು...ಒಂದು ವೇಳೆ ಕೆಣಕಿದರೆ ಫೈಯರ್‌ ಫಿಕ್ಸ್‌-ರವಿಚಂದ್ರನ್‌  title=

Challenging star Darshan : ದರ್ಶನ್‌ ಅವರದು ಯಾವ ರೀತಿಯ ವ್ಯಕ್ತಿತ್ವ ಎಂಬುದು ಎಲ್ಲರಿಗೂ ಗೊತ್ತು. ಸಾಕಷ್ಟು ಭಾರೀ ತಮ್ಮ ನೇರ ನುಡಿಯಿಂದಲೇ ಒಡೆಯ ವಿವಾದಗಳನ್ನು ತಮ್ಮ ತಲೆ ಮೇಲೆ ಎಳೆದುಕೊಂಡ ನಿದರ್ಶನಗಳು ಇವೆ. ಆದರೆ ಡಿಬಾಸ್‌ ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳದೇ ಮುನ್ನುಗ್ಗುತ್ತಿದ್ದಾರೆ.

ಇನ್ನು ಇದೀಗ ದರ್ಶನ್‌ ಬಗ್ಗೆ ರವಿಚಂದ್ರನ್‌  ಆಡಿರುವ ಮಾತುಗಳು ಸದ್ಯ ಸಖತ್‌ ವೈರಲ್‌ ಆಗುತ್ತಿವೆ. ಭರ್ಜರಿ ಬ್ಯಾಚುಲರ್ಸ್‌ ಶೋನಲ್ಲಿ ತೀರ್ಪುಗಾರರಾಗಿ ರವಿಚಂದ್ರನ್‌ ಕಾರ್ಯನಿರ್ವಹಿಸುತ್ತಿದ್ದಾರೆ. ಒಂದು ಸಂಚಿಕೆಯಲ್ಲಿ ಜ್ಯೂನಿಯರ್‌ ದರ್ಶನ್‌ ಎಂದೇ ಗುರುತಿಸಿಕೊಂಡಿರುವ ಅವಿನಾಶ್‌ ಶೋಗೆ ಸ್ಪೇಷಲ್‌ ಎಂಟ್ರಿ ಕೊಟ್ಟಿದ್ದರು. 

ಇದನ್ನೂ ಓದಿ-Casting Couch: ರಣವೀರ್ ಸಿಂಗ್‌ನಿಂದ ಆಯುಷ್ಮಾನ್‌ವರೆಗೆ ಈ ನಟರು ಕಾಸ್ಟಿಂಗ್ ಕೌಚ್‌ನ ಕಪಿಮುಷ್ಠಿಗೆ ಸಿಲುಕಿದವರು!

ಅವಿನಾಶ್‌ ಅವರ ಆಗಮನಕ್ಕೆ ಇಡೀ ಭರ್ಜರಿ ಬ್ಯಾಚುಲರ್ಸ್‌ ತಂಡವೇ ಬೆರಗಾಗಿತ್ತು. ಅದೇ ವೇಳೇ ದರ್ಶನ್‌ ವ್ಯಕ್ತಿತ್ವದ ಬಗ್ಗೆ ಮಾತನಾಡಿದ ರವಿಚಂದ್ರನ್‌ ಅವರು "ದರ್ಶನ್‌ ಹೇಗೆ ಅಂದ್ರೆ ತುಂಬಾ ವಿನಯವುಳ್ಳ ವ್ಯಕ್ತಿ...ಸುಮ್ಮನಿದ್ದರೆ ಅವನ ಪಾಡಿಗೆ ಅವನಿರುತ್ತಾನೆ... ಆದರೆ ಅವನನ್ನು ಕೆನಕಬಾರದು ಕೆನಕಿದರೆ ಅವನಷ್ಟು ಕೆಟ್ಟವರೆ ಯಾರುಇಲ್ಲ. "ದರ್ಶನ್‌ನ ಕೆಣಕಬಾರದು. ಕೆಣಕಿದರೆ ಫೈಯರ್ ಆಗುತ್ತದೆ" ಅಷ್ಟೇ. ಇದು ನಾನು ಅವನನ್ನು ಅರ್ಥ ಮಾಡಿಕೊಂಡಿರುವುದು."ಎಂದಿದ್ದಾರೆ. 

ಅಲ್ಲದೇ "ದರ್ಶನ್‌ ಜೊತೆಗೆ ನಾನು 2 ಸಿನಿಮಾಗಳಲ್ಲಿ ನಟಿಸಿದ್ದೇನೆ. ನಾನು ಯಾವಾಗಲೂ ಹೇಳುತ್ತಾ ಇರ್ತಿನಿ ನೀನು ಯಾವಾಗಲೂ ದುರ್ಯೋಧನ, ರಾವಣ ರೀತಿಯ ಪೌರಾಣಿಕ ಪಾತ್ರಗಳನ್ನೇ ಮಾಡು ಅಂತ ಏಕೆಕಂದರೆ  ಅಂತಹ ಪರ್ಸನಾಲಿಟಿ ಬೇಕು ಅಂದ್ರೆ ದರ್ಶನ್ ಮಾತ್ರ" ಎಂದು ಹೇಳಿದ್ದಾರೆ. 

ಇದನ್ನೂ ಓದಿ-ಡಾಲಿ ಹುಟ್ಟುಹಬ್ಬಕ್ಕೆ ಸಿಡಿಪಿ ರಿಲೀಸ್‌ ಮಾಡಲಿದ್ದಾರೆ ಆ ಸ್ಪೆಷಲ್‌ ಗೆಸ್ಟ್‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News