Daniel Balaji Eye Donation: ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಖಳನಟನಾಗಿ ಖ್ಯಾತಿ ಪಡೆದ ಡ್ಯಾನಿಯಲ್ ಬಾಲಾಜಿ ನಿನ್ನೆ ಮಾರ್ಚ್ 29 ರಂದು ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ತಮಿಳು ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರುವ ನಟ, ಕನ್ನಡದ 'ಕಿರಾತಕ' ಸಿನಿಮಾ ಕನ್ನಡಿಗರಿಗೆ ಪರಚಯವಾಗಿ ಬಳಿಕ 'ಶಿವಾಜಿನಗರ' ಸೇರಿದಂತೆ ಇನ್ನೂ ಹಲವು ಚಿತ್ರಗಳ ಮೂಲಕ ಗಮನ ಸೆಳೆದಿದ್ದರು.
ಡ್ಯಾನಿಯಲ್ ಬಾಲಾಜಿ ಅಗಲಿಕೆಯ ಆಘಾತದಿಂದ ಸಿನಿಪ್ರಿಯರು ಹೊರಬಂದಿಲ್ಲ. ಈ ನಟ ಸಾವಿನಲ್ಲೂ ಕೂಡ ಸಾರ್ಥಕತೆ ಮೆರೆದಿದ್ದಾರೆ. ನಟ ಡ್ಯಾನಿಯಲ್ ಬಾಲಾಜಿ ತಮ್ಮ ಕಣ್ಣುಗಳನ್ನು ದಾನ ಮಾಡಿ ಸಾವಿನ ಬಳಿಕ ಕತ್ತಲೆಯಲ್ಲಿ ಇರುವವರ ಬದುಕನ್ನು ಬೆಳಕಾಗಿಸಿದ್ದಾರೆ. ಅಭಿಮಾನಿಗಳು ಈ ನಟನ ಸಾವಿನ ಸುದ್ದಿಯ ನಂತರ, ಈ ವಿಶೇಷ ವಿಚಾರವನ್ನು ಕೇಳಿ ಮತ್ತಷ್ಟು ಭಾವುಕರಾಗಿದ್ದಾರೆ.
ಇದನ್ನೂ ಓದಿ: Daniel Balaji: ಯಶ್ ಅಭಿನಯದ 'ಕಿರಾತಕ' ಸಿನಿಮಾದ ವಿಲನ್ ಡೇನಿಯಲ್ ಬಾಲಾಜಿ ನಿಧನ!
ನಟ ಡ್ಯಾನಿಯಲ್ ಬಾಲಾಜಿ ತೆರೆಯ ಮೇಲೆ ಮಾತ್ರವೇ ವಿಲನ್ ಎಂಬುದನ್ನು ಸಾಬೀತು ಪಡಿಸಿ ಹೋಗಿದ್ದಾರೆ. ತಮ್ಮ ಅಗಲಿಕೆಯ ಬಳಿಕ ಕೆಲವರ ಬಾಳಲ್ಲಿಬೆಳಕು ಚೆಲ್ಲಿದ್ದಾರೆ. ಈ ವಿಷಯನ್ನು ತಿಳಿಯುತ್ತಿದ್ದಂತೆ ಫ್ಯಾನ್ಸ್ ಭಾವುಕರಾಗುವುದರ ಜೊತೆಗೆ ಈ ನಟನ ಒಳ್ಳೆಯ ಗುಣಕ್ಕೆ ಸೋಶಿಯಲ್ ಮಿಡಿಯಾದಲ್ಲಿ ಮೆಚ್ಚುಗೆಯನ್ನು ಕೂಡ ನೀಡಿದ್ದಾರೆ. ಈ ನಟನ ಸಾವಿನ ಸುದ್ದಿ ಗೊತ್ತಾಗುತ್ತಿದ್ದಂತೆ ಅಂತಮ ದರ್ಶನ ಪಡೆದು, ಇವರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.
ಇತ್ತೀಚೆಗೆ ಖಳನಟ ಡ್ಯಾನಿಯಲ್ ಬಾಲಾಜಿ ಆಧ್ಯಾತ್ಮದ ಕಡೆಗೆ ಹೆಚ್ಚು ಒಲವು ಬೆಳೆಸಿಕೊಂಡಿದ್ದರು. ಆದರಿಂದ ಈ ನಟ ದೇವಸ್ಥಾನವನ್ನು ಕೋಡ ಕಟ್ಟಿಸದ್ದರು. ಇದಕ್ಕೆ ಸ್ಯಾಂಡಲ್‌ವುಡ್ ನಟ ಯಶ್ ಕೂಡ ಸಹಾಯ ಮಾಡಿದ್ದರು. ಈ ನಟನ ಅಂತ್ಯಕ್ರಿಯೆ ಮಾರ್ಚ್ 30 ರಂದು ತಿರುವನ್ಮಿಯೂರಿನ ನಿವಾಸದಲ್ಲಿ ನಡೆಯಲಿದೆ. ಹಾಗೆ ಡ್ಯಾನಿಯಲ್ ಬಾಲಾಜಿಯ ನಿಧನಕ್ಕೆ ತಮಿಳು ಚಿತ್ರರಂಗದ ಗಣ್ಯರು ಕಂಬನಿ ಮಿಡಿಯುತ್ತಿದ್ದಾರೆ. ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.