Akshay Kumar ಪಂಕಜ್ ತ್ರಿಪಾಠಿ ಅಭಿನಯದ ಓ ಮೈ ಗಾಡ್ 2 ಚಿತ್ರ ಬಿಡುಗಡೆಗೆ ಸೆನ್ಸಾರ್ ತಡೆ!

OMG 2: ಅಕ್ಷಯ್ ಕುಮಾರ್ ಮತ್ತು ಪಂಕಜ್ ತ್ರಿಪಾಠಿ ಅಭಿನಯದ OMG 2 ಚಿತ್ರ ಬಿಡುಗಡೆಗೆ ಸಂಬಂಧಿಸಿದಂತೆ ಒಂದು ಮಹತ್ವದ ಮಾಹಿತಿ ಪ್ರಕಟಗೊಂಡಿದೆ. ವಾಸ್ತವದಲ್ಲಿ ಸೆನ್ಸಾರ್ ಮಂಡಳಿ ಚಿತ್ರ ಬಿಡುಗದೆಗಾಗಿ ಸರ್ಟಿಫಿಕೇಟ್ ನೀಡಲು ನಿರಾಕರಿಸಿದೆ ಎನ್ನಲಾಗಿದೆ. ಕಾರಣ ಏನು ತಿಳಿದುಕೊಳ್ಳೋಣ ಬನ್ನಿ.  

Written by - Nitin Tabib | Last Updated : Jul 12, 2023, 09:49 PM IST
  • ಚಿತ್ರದಲ್ಲಿ ಅಕ್ಷಯ್ ಶಿವನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉದ್ದನೆಯ ಜಟಾ, ಹಣೆಯ ಮೇಲೆ ಭಸ್ಮ ಲೇಪಿಸಿಕೊಂಡ ಅವರ ಲುಕ್ ಅನೇಕ ವೀಕ್ಷಕರಿಂದ ಪ್ರಶಂಸೆಗೆ ಪಾತ್ರವಾಗಿದೆ.
  • ಅಕ್ಷಯ್ ಕುಮಾರ್ ಮತ್ತು ಪಂಕಜ್ ತ್ರಿಪಾಠಿ ಅಭಿನಯದ ಈ ಚಿತ್ರವು ಆಗಸ್ಟ್ 11, 2023 ರಂದು ಬಿಡುಗಡೆಯಾಗಲಿದೆ.
  • ಕೊನೆಯ ಭಾಗದಲ್ಲಿ, ಅಕ್ಷಯ್ ಕುಮಾರ್ ಮತ್ತು ಪರೇಶ್ ರಾವಲ್ ಅವರ ಡ್ಯುಯೆಟ್ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಪಡೆದಿತ್ತು.
Akshay Kumar ಪಂಕಜ್ ತ್ರಿಪಾಠಿ ಅಭಿನಯದ  ಓ ಮೈ ಗಾಡ್ 2 ಚಿತ್ರ ಬಿಡುಗಡೆಗೆ ಸೆನ್ಸಾರ್ ತಡೆ! title=

OMG 2: ದೇವರು ಮತ್ತು ಭಕ್ತನ ನಡುವಿನ ವಿಶೇಷ ಬಾಂಧವ್ಯವನ್ನು ತೋರಿಸುವ 'ಓ ಮೈ ಗಾಡ್' ಚಿತ್ರದ ಎರಡನೇ ಅವತರಿಣಿಕೆಯಾಗಿರುವ OMG 2 ಮೇಲೆ ಸೆನ್ಸಾರ್ ಮಂಡಳಿಯ ಕಣ್ಣುಗಳು ಓರೆಯಾಗಿವೆ. ಅಕ್ಷಯ್ ಕುಮಾರ್, ಪಂಕಜ್ ತ್ರಿಪಾಠಿ ಮತ್ತು ಯಾಮಿ ಗೌತಮ್ ರಂತಹ ದಿಗ್ಗಜರು ತಾರಾಗಣದಲ್ಲಿರುವ  ಈ ಚಿತ್ರದ ಬಗ್ಗೆ ಮಹತ್ವದ ಸುದ್ದಿ ಪ್ರಕಟಗೊಂಡಿದೆ. ವರದಿಗಳ ಪ್ರಕಾರ, ಈ ಚಿತ್ರದ ಬಿಡುಗಡೆಗೆ ಸೆನ್ಸಾರ್ ಮಂಡಳಿ ಪ್ರಮಾಣಪತ್ರ ನೀಡಲು ನಿರಾಕರಿಸಿದೆ. ಸದ್ಯ ಚಿತ್ರವನ್ನು ವಿಮರ್ಶಾ ಸಮಿತಿಗೆ ಕಳುಹಿಸಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ-ಶ್ರೀಸಾಮಾನ್ಯರಿಗೆ ಮತ್ತೊಂದು ಶಾಕಿಂಗ್ ಸುದ್ದಿ! ಮತ್ತೆ ಹೆಚ್ಚಾಯ್ತು ಚಿಲ್ಲರೆ ಹಣದುಬ್ಬರ

OMG-2 ಚಲನಚಿತ್ರವನ್ನು ಪರಿಶೀಲನಾ ಸಮಿತಿಗೆ ಕಳುಹಿಸಲಾಗಿದೆ
ಇತ್ತೀಚೆಗಷ್ಟೇ ಚಿತ್ರ ನಿರ್ಮಾಪಕರು ಈ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಅಕ್ಷಯ್ ಕುಮಾರ್ ಶಿವ ಹಾಗೂ ಪಂಕಜ್ ತ್ರಿಪಾಠಿ ಪರಮ ಶಿವಭಕ್ತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಟೀಸರ್ ನೋಡಿದರೆ ಹಿಂದಿನ ಭಾಗದಂತೆ ಈ ಬಾರಿಯೂ ಕೂಡ ದೇವರು ಮತ್ತು ಮನುಷ್ಯರ ನಡುವಿನ ಸಂಬಂಧದ ಸುತ್ತ ಕುತೂಹಲಕಾರಿ ಕಥೆಯನ್ನು ಹೆಣೆಯಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಇದನ್ನು ನೋಡಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ. ಸಿನಿಮಾದ ಟೀಸರ್ ಅಭಿಮಾನಿಗಳಲ್ಲಿ ಸಿನಿಮಾ ನೋಡುವ ಆಸಕ್ತಿಯನ್ನು ಇನ್ನಷ್ಟು ಹೆಚ್ಚಿಸಿದೆ.

ಇದನ್ನೂ ಓದಿ-ಟೊಮೆಟೊ ದರಕ್ಕೆ ಸಂಬಂಧಿಸಿದಂತೆ ಇಲ್ಲಿದೆ ಒಂದು ಸಂತಸದ ಸುದ್ದಿ!
 
ಶಿವನ ಪಾತ್ರದಲ್ಲಿ ಅಕ್ಷಯ್ ಕುಮಾರ್ ಕಾಣಿಸಿಕೊಳ್ಳಲಿದ್ದಾರೆ
ಚಿತ್ರದಲ್ಲಿ ಅಕ್ಷಯ್ ಶಿವನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉದ್ದನೆಯ ಜಟಾ, ಹಣೆಯ ಮೇಲೆ ಭಸ್ಮ ಲೇಪಿಸಿಕೊಂಡ ಅವರ ಲುಕ್ ಅನೇಕ ವೀಕ್ಷಕರಿಂದ ಪ್ರಶಂಸೆಗೆ ಪಾತ್ರವಾಗಿದೆ. ಅಕ್ಷಯ್ ಕುಮಾರ್ ಮತ್ತು ಪಂಕಜ್ ತ್ರಿಪಾಠಿ ಅಭಿನಯದ ಈ ಚಿತ್ರವು ಆಗಸ್ಟ್ 11, 2023 ರಂದು ಬಿಡುಗಡೆಯಾಗಲಿದೆ. ಕೊನೆಯ ಭಾಗದಲ್ಲಿ, ಅಕ್ಷಯ್ ಕುಮಾರ್ ಮತ್ತು ಪರೇಶ್ ರಾವಲ್ ಅವರ ಡ್ಯುಯೆಟ್ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಪಡೆದಿತ್ತು. ಮೊದಲ ಭಾಗದ ಬಗ್ಗೆಯೂ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರಾದರೂ ಕೂಡ ಚಿತ್ರವು ಬಾಕ್ಸ್ ಆಫೀಸ್ ನಲ್ಲಿ ಸೂಪರ್ ಹಿಟ್ ಎಂದು ಸಾಬೇಟೆತಾಗಿತ್ತು. ಇದೀಗ ಅದರ ಎರಡನೇ ಭಾಗದ ಬಿಡುಗಡೆಯ ಕುರಿತು ಎದುರಾಗಿರುವ ಬಿಕ್ಕಟ್ಟಿನ ಬಳಿಕ, ನಿರ್ಮಾಪಕರ ಮುಂದಿನ ಹೆಜ್ಜೆ ಏನು ಎಂದು ಎಲ್ಲರೂ ಕುತೂಹಲದಿಂದ ನೋಡುತ್ತಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News