"ಅವರು ನನ್ನೊಂದಿಗೆ ರೊಮ್ಯಾಂಟಿಕ್ ಅಲ್ಲ ಆದರೆ ಬೇರೆಯವರೊಂದಿಗೆ.." ಅಮಿತಾಬ್ ಬಚ್ಚನ್ ಬಗ್ಗೆ ಪತ್ನಿ ಜಯಾ ಬಚ್ಚನ್ ಹೇಳಿದ್ದೇನು ಗೊತ್ತಾ?

Amitabh Bachchan Wife Jaya Bachcha: ಬಾಲಿವುಡ್‌ ಸ್ಟಾರ್‌ ನಟ ಅಮಿತಾಬ್‌ ಬಚ್ಚನ್‌ ಇತ್ತೀಚೆಗೆ ವೈಯಕ್ತಿಕ ವಿಚಾರವಾಗಿ ಹೆಚ್ಚು ಸುದ್ದಿಯಲ್ಲಿದ್ದಾರೆ.. ಅದೇ ರೀತಿ ಇದೀಗ ಅವರ ಪತ್ನಿ ಜಯಾ ಬಚ್ಚನ್ ಅಮಿತಾಬ್‌ ಕುರಿತು ಶಾಕಿಂಗ್‌ ಕಾಮೆಂಟ್‌ವೊಂದನ್ನು ಮಾಡಿದ್ದಾರೆ.. 

Written by - Savita M B | Last Updated : Apr 2, 2024, 02:56 PM IST
  • ಪತ್ನಿ ಜಯಾ ಬಚ್ಚನ್ ತಮ್ಮ ಪತಿ ಅಮಿತಾಬ್ ಬಚ್ಚನ್ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ.
  • ಅಮಿತಾಬ್ ಬಚ್ಚನ್ ಅವರ ಪತ್ನಿ ಜಯಾ ಬಚ್ಚನ್ ಒಬ್ಬ ಶ್ರೇಷ್ಠ ನಟಿ ಮಾತ್ರವಲ್ಲದೆ ಉತ್ತಮ ರಾಜಕಾರಣಿ ಕೂಡ.
"ಅವರು ನನ್ನೊಂದಿಗೆ ರೊಮ್ಯಾಂಟಿಕ್ ಅಲ್ಲ ಆದರೆ ಬೇರೆಯವರೊಂದಿಗೆ.." ಅಮಿತಾಬ್ ಬಚ್ಚನ್ ಬಗ್ಗೆ ಪತ್ನಿ ಜಯಾ ಬಚ್ಚನ್ ಹೇಳಿದ್ದೇನು ಗೊತ್ತಾ?  title=

Jaya Bachcha: ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಆಗಾಗ್ಗೆ ತಮ್ಮ ಪತ್ನಿ ಜಯಾ ಬಚ್ಚನ್ ಅವರನ್ನು ಹೊಗಳುವುದನ್ನು ಕಾಣಬಹುದು. ಪತ್ನಿಯನ್ನು ಪ್ರೀತಿಸುತ್ತೇನೆ ಆದರೆ ಆಕೆಗೆ ಹೆದರುತ್ತೇನೆ ಎಂದು ಬಿಗ್ ಬಿ ಕ್ಯಾಮೆರಾ ಮುಂದೆ ಹಲವು ಬಾರಿ ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ ಪತ್ನಿ ಜಯಾ ಬಚ್ಚನ್ ತಮ್ಮ ಪತಿ ಅಮಿತಾಬ್ ಬಚ್ಚನ್ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ.

 ಅಮಿತಾಬ್ ಬಚ್ಚನ್ ಅವರ ಪತ್ನಿ ಜಯಾ ಬಚ್ಚನ್ ಒಬ್ಬ ಶ್ರೇಷ್ಠ ನಟಿ ಮಾತ್ರವಲ್ಲದೆ ಉತ್ತಮ ರಾಜಕಾರಣಿ ಕೂಡ.. ಆದರೆ ಸಂದರ್ಶನದಲ್ಲಿ ಜಯಾ ಬಚ್ಚನ್ ತಮ್ಮ ಪತಿ ಅಮಿತಾಬ್ ಬಚ್ಚನ್ ಬಗ್ಗೆ ಮುಕ್ತವಾಗಿ ಮಾತನಾಡಿ ತಮ್ಮ ಮದುವೆ ಮತ್ತು ಪ್ರಣಯದ ಬಗ್ಗೆ ಹಲವು ರಹಸ್ಯಗಳನ್ನು ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ-Pushpa 2: ಇಂದಿನಿಂದ ಅಲ್ಲು ಅರ್ಜುನ್‌ ಪುಷ್ಪ 2 ಜಾತ್ರೆಯ ಸಡಗರ! ಹೊಸ ಅಪ್‌ಡೇಟ್‌ ಏನು?

 ಈ ಸಂದರ್ಶನದಲ್ಲಿ ಅಮಿತಾಬ್ ಬಚ್ಚನ್ ಪತ್ನಿಯಾಗಿ ಜಯಾ ಬಚ್ಚನ್‌ಗೆ 10 ರಲ್ಲಿ 7 ಅಂಕಗಳನ್ನು ನೀಡಿದರೆ, ಜಯಾ ಬಚ್ಚನ್ ಪತಿಯಾಗಿ ಬಿಗ್‌ಬಿಗೆ 10 ರಲ್ಲಿ 5 ಅಂಕಗಳನ್ನು ನೀಡಿದರು. ತಮ್ಮ ಪತಿ ಅಮಿತಾಬ್ ಬಚ್ಚನ್ ಅವರಲ್ಲಿ ಸಾಕಷ್ಟು ನ್ಯೂನತೆಗಳಿವೆ ಎಂದು ಜಯಾ ಬಚ್ಚನ್ ಹೇಳಿದ್ದರು. ಅವರು ಸಮಯಕ್ಕೆ ಸರಿಯಾಗಿ ಯಾವುದೇ ಕೆಲಸಗಳನ್ನು ಮಾಡುವುದಿಲ್ಲ ಮತ್ತು ಶಿಸ್ತು ಕೂಡ ಇಲ್ಲ ಎಂದಿದ್ದರು..

ಇದನ್ನೂ ಓದಿ-Prabhas: ಟಾಲಿವುಡ್‌ ಯಂಗ್‌ ರೆಬಲ್‌ ಸ್ಟಾರ್‌ಗೆ ಬಂದ ಮದುವೆ ಪ್ರಪೋಸಲ್‌ಗಳು ಎಷ್ಟು ಗೊತ್ತೇ?

 ಡೈನಿಂಗ್ ಟೇಬಲ್ ಮೇಲೆ ಊಟವನ್ನು ಇಟ್ಟ ನಂತರವೂ ಬಿಗ್ ಬಿ ಸಮಯಕ್ಕೆ ಸರಿಯಾಗಿ ತಿನ್ನಲು ಬರುವುದಿಲ್ಲ.. ಬಿಸಿಯಾದಾಗ ಆಹಾರವು ರುಚಿಯಾಗಿರುತ್ತದೆ.. ಆದರೆ ಅವರು ತಣ್ಣಗಾದ ನಂತರ ಬರುತ್ತಾರೆ.. ಇದು ಒಳ್ಳೆಯ ಅಭ್ಯಾಸವೇ ಅಲ್ಲ ಎಂದಿದ್ದರು.. ಅಲ್ಲದೇ ಅಮಿತಾಬ್‌ ಆದ್ಯತಾ ಪಟ್ಟಿಯಲ್ಲಿ ನನ್ನ ಹೆಸರು ಕೊನೆಯ ಸ್ಥಾನದಲ್ಲಿದೆ.. ಅವರು ತನ್ನ ಹೆತ್ತವರಿಗೆ ಮೊದಲ ಆಧ್ಯತೆ,, ನಂತರ ವೃತ್ತಿ ಮತ್ತು ನಾನು. ಎಂದು ಹೇಳಿಕೊಂಡಿದ್ದರು.. 

ಅದೇ ಸಂದರ್ಶನದಲ್ಲಿ ಜಯಾ ಬಚ್ಚನ್‌ "ಅವರು ನನ್ನೊಂದಿಗೆ ರೊಮ್ಯಾಂಟಿಕ್ ಅಲ್ಲ... ತುಂಬಾ ನಾಚಿಕೆ ಸ್ವಭಾವದವರು. ಅವರು ತಮ್ಮ ಪ್ರೀತಿಯನ್ನು ಎಂದಿಗೂ ವ್ಯಕ್ತಪಡಿಸಿಲ್ಲ.. ಎಂದು ಪತಿ ಅಮಿತಾಬ್‌ ಸ್ವಭಾವದ ಬಗ್ಗೆ ಮಾತನಾಡಿದ್ದಾರೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News