Nora Fatehi: "ಆಡಿಷನ್‌ಗೆ ಕರೆದು ಆ ಡೈರೆಕ್ಟರ್‌..." ಕಹಿ ಘಟನೆ ಬಿಚ್ಚಿಟ್ಟ ನೋರಾ ಫತೇಹಿ

Nora Fatehi Struggle Days: ಬಾಲಿವುಡ್‌ ನಟಿ ನೋರಾ ಫತೇಹಿ ಪ್ರಕಾರ, ಅವರು ಭಾರತಕ್ಕೆ ಬಂದಾಗ ವಾಸ್ತವವನ್ನು ಎದುರಿಸಿಬೇಕಾಯಿತು. ಯಾರೋ ತನ್ನನ್ನು ಬಲವಾಗಿ ಹೊಡೆದಂತಹ ಕಹಿ ಅನುಭವವನ್ನು ಅವರು ಅನುಭವಿಸಿದರು.   

Written by - Chetana Devarmani | Last Updated : Jul 7, 2023, 12:02 PM IST
  • ಬಾಲಿವುಡ್‌ ನಟಿ ನೋರಾ ಫತೇಹಿ
  • "ಆಡಿಷನ್‌ಗೆ ಕರೆದು ಆ ಡೈರೆಕ್ಟರ್‌..."
  • ಕಹಿ ಘಟನೆ ಬಿಚ್ಚಿಟ್ಟ ನೋರಾ ಫತೇಹಿ
Nora Fatehi: "ಆಡಿಷನ್‌ಗೆ ಕರೆದು ಆ ಡೈರೆಕ್ಟರ್‌..." ಕಹಿ ಘಟನೆ ಬಿಚ್ಚಿಟ್ಟ ನೋರಾ ಫತೇಹಿ title=
Nora Fatehi

Nora Fatehi: ಬಾಲಿವುಡ್ ನ ಡ್ಯಾನ್ಸಿಂಗ್ ಕ್ವೀನ್ ನೋರಾ ಫತೇಹಿ ಇಂದು ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಅತ್ಯಂತ ಕಡಿಮೆ ಅವಧಿಯಲ್ಲಿ ನೋರಾ ಫತೇಹಿ ಇಂಡಸ್ಟ್ರಿಯಲ್ಲಿ ತನಗೊಂದು ಗೂಡನ್ನು ಕಟ್ಟಿಕೊಂಡಿದ್ದಾರೆ. ನೋರಾ ಫತೇಹಿ ಈ ಸ್ಥಾನ ತಲುಪಲು ಸಾಕಷ್ಟು ಹೋರಾಡಬೇಕಾಯಿತು. ಬೆದರಿಕೆ ಮತ್ತು ನಿರಾಕರಣೆಯನ್ನು ಎದುರಿಸಬೇಕಾಯಿತು. ಇಂದು ನಾವು ನೋರಾ ಫತೇಹಿ ಅವರ ಹೋರಾಟದ ದಿನಗಳು ಹೇಗಿದ್ದವು ಮತ್ತು ಅವರು ಯಾವ ರೀತಿಯ ತೊಂದರೆಗಳನ್ನು ಎದುರಿಸಬೇಕಾಯಿತು ಎಂದು ಹೇಳಲಿದ್ದೇವೆ. ನೋರಾ ಫತೇಹಿ ಸಂದರ್ಶನವೊಂದರಲ್ಲಿ ಅವರ ಹೋರಾಟದ ದಿನಗಳು ಹೇಗಿದ್ದವು ಎಂದು ಹೇಳಿದ್ದರು. 

ಇದನ್ನೂ ಓದಿ: Deepika Ranveer: ಗಂಡನ ಬರ್ತ್‌ ಡೇ ಗೆ ವಿಶ್‌ ಮಾಡದ ದೀಪಿಕಾ! ರಣವೀರ್‌ ಜೊತೆ ಡಿವೋರ್ಸ್‌ ವದಂತಿ ಸತ್ಯವೇ!?

ಕೆನಡಾದಿಂದ ಭಾರತಕ್ಕೆ ಬರುವಾಗ ಭಾರತ ತಲುಪಿದ ಕೂಡಲೇ ರೆಡ್ ಕಾರ್ಪೆಟ್ ಸ್ವಾಗತ ಸಿಗುತ್ತದೆ ಎಂದು ಅನಿಸಿತ್ತು ಎಂದು ನೋರಾ ಈ ಸಂದರ್ಶನದಲ್ಲಿ ಹೇಳಿದ್ದರು. ವಿಮಾನ ನಿಲ್ದಾಣದಲ್ಲಿ ತನ್ನನ್ನು ಕರೆದೊಯ್ಯಲು ಉದ್ದವಾದ ಲಿಮೋಸಿನ್ ಕಾರು ಬರುತ್ತದೆ, ಡ್ರೈವರ್ ತನಗಾಗಿ ಬಾಗಿಲು ತೆರೆಯುತ್ತಾನೆ ಎಂದು ತಾನು ಭಾವಿಸಿದ್ದೆ ಎಂದು ನೋರಾ ಸಂದರ್ಶನದಲ್ಲಿ ಹೇಳಿದ್ದರು. ಆದರೆ ನೋರಾ ಪ್ರಕಾರ, ಅವರು ಭಾರತಕ್ಕೆ ಬಂದ ತಕ್ಷಣ ವಾಸ್ತವವನ್ನು ಎದುರಿಸಿದರು. ಯಾರೋ ತನ್ನನ್ನು ಬಲವಾಗಿ ಹೊಡೆದಂತೆ ಭಾಸವಾಯಿತು. ಅವರ ಭ್ರಮೆ ಛಿದ್ರವಾಯಿತು. 

ಆರಂಭದ ದಿನಗಳಲ್ಲಿ ಅವರು ಎದುರಿಸಿದ ಕಹಿ ಘಟನೆ ಬಗ್ಗೆಯೂ ನೋರಾ ಫತೇಹಿ ಮಾತನಾಡಿದ್ದಾರೆ. ಆಡಿಷನ್‌ಗೆ ಕರೆದು ಹಿಂದಿಯಲ್ಲಿ ಡೈಲಾಗ್‌ಗಳನ್ನು ಹೇಳುವಂತೆ ಕೇಳಲಾಗಿತ್ತು ಎಂದು ನೋರಾ ಸಂದರ್ಶನದಲ್ಲಿ ಹೇಳಿದ್ದರು. ಹಿಂದಿ ಗೊತ್ತಿಲ್ಲದ ಕಾರಣ ಕಾಸ್ಟಿಂಗ್ ಡೈರೆಕ್ಟರ್ ಗೇಲಿ ಮಾಡುತ್ತಿದ್ದರು ಎಂದು ತಾವು ಅನುಭವಿಸಿದ ಅವಮಾನದ ಬಗ್ಗೆ ಮಾತನಾಡಿದ್ದಾರೆ. ಅಷ್ಟೇ ಅಲ್ಲ ಹೋರಾಟದ ದಿನಗಳಲ್ಲಿ ನೋರಾ ಸಾಕಷ್ಟು ನಿರಾಕರಣೆಗಳನ್ನು ಎದುರಿಸಬೇಕಾಯಿತು. ಆದರೆ ಕ್ರಮೇಣ ಸಮಯ ಬದಲಾಯಿತು, ನೋರಾ ತನ್ನ ನೃತ್ಯ ಪ್ರತಿಭೆಯ ಆಧಾರದ ಮೇಲೆ ಮನ್ನಣೆ ಪಡೆಯಲು ಪ್ರಾರಂಭಿಸಿದರು. ಇಂದು ಅವರು ಚಲನಚಿತ್ರೋದ್ಯಮದಲ್ಲಿ ತನ್ನದೇ ಆದ ಹೆಸರನ್ನು ಮಾಡಿದ್ದಾರೆ.

ಇದನ್ನೂ ಓದಿ: Bollywood Richest Villain: ಇವರೇ ನೋಡಿ ಅತ್ಯಂತ ಶ್ರೀಮಂತ ವಿಲನ್.. ಕೋಟ್ಯಾಧಿಪತಿಗಳು ಈ ಖಳನಾಯಕರು!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News