BBK10: ಬಿಗ್‌ಬಾಸ್ ಮನೆಯೊಳಗೆ ಹಾರರ್ ಸರ್ಪೈಸ್!

Bigg Boss Surprise: ಬಿಗ್‌ಬಾಸ್ ಮನೆಯ ಸದಸ್ಯರಿಗೆ ಬಿಗ್‌ಬಾಸ್ ಒಂದು ಹಾರರ್ ಸರ್ಪೈಸ್ ನೀಡಿದ್ದಾರೆ. ಆ ಸರ್ಪೈಸ್ ಹೇಗಿದೆ ಎಂಬುದು ಬಿಡುಗಡೆ ಮಾಡಿರುವ ಇಂದಿನ ಪ್ರೋಮೊದಲ್ಲಿ ಜಾಹೀರಾಗಿದೆ.   

Written by - Savita M B | Last Updated : Jan 16, 2024, 11:23 AM IST
  • ಬಿಗ್‌ಬಾಸ್ ಮನೆಯ ಸದಸ್ಯರಿಗೆ ಬಿಗ್‌ಬಾಸ್ ಒಂದು ಹಾರರ್ ಸರ್ಪೈಸ್ ನೀಡಿದ್ದಾರೆ.
  • ಉಳಿದವರು ಭಯದಿಂದ ಕಿರುಚಿದ್ದಾರೆ. ಯಾಕೆಂದರೆ ಆ ಬಾಕ್ಸ್ ಒಳಗಿರುವುದು ಒಂದು ತಲೆ.
  • ಇದೇನು ಬಿಗ್‌ಬಾಸ್ ಮನೆಯೊಳಗೆ ಕ್ರೈಂ ಸೀನ್ ಎಂದು ಕಣ್ಣುಜ್ಜಿಕೊಂಡು ನೋಡಿದರೆ ತಲೆ ಅಲುಗಾಡುತ್ತಿದೆ.
BBK10: ಬಿಗ್‌ಬಾಸ್ ಮನೆಯೊಳಗೆ ಹಾರರ್ ಸರ್ಪೈಸ್! title=

Bigg Boss Kannada: ‘ನಿಮಗಾಗಿ ಒಂದು ಸರ್ಪೈಸ್ ಕಾದಿದೆ. ಗಾರ್ಡನ್ ಏರಿಯಾಗೆ ಹೋಗಿ’ ಎಂದು ಬಿಗ್‌ಬಾಸ್ ಮನೆಯ ಸದಸ್ಯರಿಗೆ ಆದೇಶಿಸಿದ್ದಾರೆ. ಅಲ್ಲಿ ಒಂದು ಟೇಬಲ್ ಮೇಲೆ ಬಲೂನ್, ಕೇಕ್ ಜೊತೆಗೆ ಎರಡು ಬಾಕ್ಸ್‌ಗಳನ್ನು ಇರಿಸಲಾಗಿದೆ. ತುಕಾಲಿ ಸಂತೋಷ್ ಅವರು ಒಂದು ಬಾಕ್ಸ್ ಅನ್ನು ಎತ್ತಿದ್ದೇ ಬೆಚ್ಚಿ ಹಿಂದಕ್ಕೆ ಜಿಗಿದಿದ್ದಾರೆ. ಉಳಿದವರು ಭಯದಿಂದ ಕಿರುಚಿದ್ದಾರೆ. ಯಾಕೆಂದರೆ ಆ ಬಾಕ್ಸ್ ಒಳಗಿರುವುದು ಒಂದು ತಲೆ. 

ಇದೇನು ಬಿಗ್‌ಬಾಸ್ ಮನೆಯೊಳಗೆ ಕ್ರೈಂ ಸೀನ್ ಎಂದು ಕಣ್ಣುಜ್ಜಿಕೊಂಡು ನೋಡಿದರೆ ತಲೆ ಅಲುಗಾಡುತ್ತಿದೆ. ಕಣ್ಣುಗಳು ತೆರೆಯುತ್ತಿವೆ. ಮುಖದಲ್ಲಿ ನಗುವಿದೆ. ಅದು ಮತ್ಯಾರೂ ಅಲ್ಲ, ಬಿಗ್‌ಬಾಸ್ ಹಳೆಯ ಸ್ಪರ್ಧಿ ಇಶಾನಿ! ಟೇಬಲ್ ಕೆಳಗೆ ಅವಿತಿಟ್ಟುಕೊಂಡು ಬರೀ ತಲೆಯನ್ನಷ್ಟೇ ಟೆಬಲ್ ನಿಂದ ಹೊರಗೆ ಹಾಕಿ ಸಖತ್ ಶಾಕ್ ಕೊಟ್ಟಿದ್ದಾರೆ ತನಿಶಾ.

ಇದನ್ನೂ ಓದಿ-ಸಂಕ್ರಾಂತಿ ಬಳಿಕ ಕಿಚ್ಚನ ಫ್ಯಾನ್ಸ್‌ಗೆ ಸಿಹಿ ಸುದ್ದಿ: ಬೆಳ್ಳಂಬೆಳಿಗ್ಗೆ ‘ಮ್ಯಾಕ್ಸ್ ಅಪ್ಡೇಟ್!

ಅವರ ಜೊತೆಗೆ ರಕ್ಷಿತ್, ಸ್ನೇಹಿತ್ ಮತ್ತು ನೀತು ಕೂಡ ಬಿಗ್‌ಬಾಸ್ ಮನೆಯೊಳಗೆ ರೀ ಎಂಟ್ರಿ ಕೊಟ್ಟಿದ್ದಾರೆ. ಎಲ್ಲ ಸ್ಪರ್ಧಿಗಳ ಜೊತೆಗೂ ಮಾತಾಡುತ್ತ ಅವರಿಗೆ ಕಿವಿಮಾತು ಹೇಳುತ್ತಿದ್ದಾರೆ. ನೀತು, ಪ್ರತಾಪ್‌ಗೆ ‘ನಿನಗೆ ಸಪೋರ್ಟ್ ಅಂತ ನಿಂತಿದ್ದೇ ಸಂಗೀತಾ. ಅದೇ ಬ್ರೇಕ್ ಆಗಿಬಿಟ್ಟರೆ ಏನುಕಥೆ?’ ಎಂದು ಪ್ರಶ್ನಿಸಿದ್ದಾರೆ. 

ಇದನ್ನೂ ಓದಿ-Rashmika Mandanna: ಸಂಕ್ರಾಂತಿಗೆ ಆರು ಭಾಷೆಯಲ್ಲಿ ವಿಶಸ್‌ ತಿಳಿಸಿದ ನ್ಯಾಶ್‌ನಲ್‌ ಕ್ರಶ್!

ನಮ್ರತಾ, ‘ನಾನು ಮನೆಯೊಳಗೆ ಕಾರ್ತಿಕ್ ಜೊತೆಗೆ ನಡೆದುಕೊಳ್ಳುತ್ತಿರುವುದನ್ನು ನೋಡಿ ಸ್ನೇಹಿತ್ ಉರ್ಕೊಂಡಿದಾರಾ?’ ಎಂದು ಕೇಳುತ್ತಿದ್ದ ಹಾಗೆಯೇ ಸ್ನೇಹಿತ್, ಕಿಚನ್‌ನಲ್ಲಿ ಪ್ರತ್ಯಕ್ಷರಾಗಿ, ‘ಹಲೋ ನಮ್ರತಾ’ ಎಂದು ನಮ್ರತಾಗೆ ನಮಸ್ತೆ ಹೇಳಿದ್ದಾರೆ.

ಒಟ್ಟಾರೆ ಹಳೆ ಸ್ಪರ್ಧಿಗಳ ಎಂಟ್ರಿ ಮನೆಯೊಳಗೆ ಸಖತ್ ವೈಬ್ರೇಷನ್ ಕ್ರಿಯೇಟ್ ಮಾಡಿದೆ.ಇದರಿಂದ ಯಾರಿಗೆ ಅನುಕೂಲ, ಯಾರಿಗೆ ಅನಾನುಕೂಲ ಎಂಬುದು ಈ ವಾರಾಂತ್ಯದ ಹೊತ್ತಿಗೆ ತಿಳಿಯಲಿದೆ.
ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು ಮತ್ತು ಎಪಿಸೋಡ್‌ಗಳನ್ನು JioCinemaದಲ್ಲಿ ಉಚಿತವಾಗಿ ನೋಡಿ.
ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ ವೀಕ್ಷಿಸಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News