Bigg Boss Season 9 : 100 ದಿನಕ್ಕೆ 6 ಚಡ್ಡಿ ಮಾತ್ರ, ನನಗೆ ಟೆಂಪರ್‌ ಇಶ್ಯೂ ಇದೆ...!

18 ಕಂಟೆಸ್ಟೆಂಟ್ಸ್‌ಗಳ ಪೈಕಿ 9 ಜನ ಬಿಗ್‌ ಹೌಸ್‌ ಒಳಗೆ ಹೋಗಲು ಸಿದ್ಧರಾಗಿದ್ದಾರೆ. ಸಖತ್‌ ಡ್ಯಾನ್ಸ್‌, ಹಾಸ್ಯ, ಮಾತಿನ ಜೊತೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟಿರುವ ಸ್ಪರ್ಧಿಗಳು ತಮ್ಮ ವ್ಯಕ್ತಿತ್ವದ ಬಗ್ಗೆ ಹೇಳಿರುವ ವಿಡಿಯೋದ ಪ್ರೋಮೋ ಬಿಡುಗಡೆಯಾಗಿದ್ದರು, ಸಖತ್‌ ಇಂಟ್ರೆಸ್ಟಿಂಗ್‌ ಆಗಿದೆ.

Written by - Krishna N K | Last Updated : Sep 24, 2022, 07:06 PM IST
  • 18 ಕಂಟೆಸ್ಟೆಂಟ್ಸ್‌ಗಳ ಪೈಕಿ 9 ಜನ ಬಿಗ್‌ ಹೌಸ್‌ ಒಳಗೆ ಹೋಗಲು ಸಿದ್ಧರಾಗಿದ್ದಾರೆ.
  • ಸಖತ್‌ ಡ್ಯಾನ್ಸ್‌, ಹಾಸ್ಯ, ಮಾತಿನ ಜೊತೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟಿರುವ ಸ್ಪರ್ಧಿಗಳು
  • ಟೆಂಪರ್‌ ಇರಲಿ ಏನೇ ಇರಲಿ ಬಿಗ್‌ ಬಾಸ್‌ ಮುಂದೆ ಎಲ್ಲರೂ ಬೊಂಬೆ ಎಂದ ಕಿಚ್ಚ
Bigg Boss Season 9 : 100 ದಿನಕ್ಕೆ 6 ಚಡ್ಡಿ ಮಾತ್ರ, ನನಗೆ ಟೆಂಪರ್‌ ಇಶ್ಯೂ ಇದೆ...! title=

Bigg Boss kannada Season 9: 18 ಕಂಟೆಸ್ಟೆಂಟ್ಸ್‌ಗಳ ಪೈಕಿ 9 ಜನ ಬಿಗ್‌ ಹೌಸ್‌ ಒಳಗೆ ಹೋಗಲು ಸಿದ್ಧರಾಗಿದ್ದಾರೆ. ಸಖತ್‌ ಡ್ಯಾನ್ಸ್‌, ಹಾಸ್ಯ, ಮಾತಿನ ಜೊತೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟಿರುವ ಸ್ಪರ್ಧಿಗಳು ತಮ್ಮ ವ್ಯಕ್ತಿತ್ವದ ಬಗ್ಗೆ ಹೇಳಿರುವ ವಿಡಿಯೋದ ಪ್ರೋಮೋ ಬಿಡುಗಡೆಯಾಗಿದ್ದರು, ಸಖತ್‌ ಇಂಟ್ರೆಸ್ಟಿಂಗ್‌ ಆಗಿದೆ.

ದೊಡ್ಮನೆಯಲ್ಲಿ ಒಂಭತ್ತು ಜನ ಪ್ರವೀಣರ ಜೊತೆಗೆ 9 ಜನ ನವೀನರು ಸೇರಿಕೊಳ್ಳಲಿದ್ದಾರೆ. ಪ್ರಾರಂಭದಲ್ಲಿಯೇ ತಮ್ಮ ವ್ಯಕ್ತಿತ್ವ ಮತ್ತು ವೈಶಿಷ್ಟ ಕುರಿತು ಮಾತನಾಡಿದ್ದಾರೆ. ಕೆಲವರಿಗೆ ಸಿಕ್ಕಾಪಟ್ಟೆ ಟೆಂಪರ್ ಇಶ್ಯೂ ಇದೆಯಂತೆ, ಒಳಗೆ ಹೋಗಿ ಹಣೆ ಬರಹಕ್ಕೆ ಹೊಣೆಯಾರು..? ಎಂದು ಸುದೀಪ್‌ ಅವರು ಹೇಳಿರುವ ಮಾತು ಪ್ರೋಮೋದಲ್ಲಿದೆ. ವಿಡಿಯೋದ ಕೊನೆಯಲ್ಲಿ ಟೆಂಪರ್‌ ಇರಲಿ ಏನೇ ಇರಲಿ ಬಿಗ್‌ ಬಾಸ್‌ ಮುಂದೆ ಎಲ್ಲರೂ ಬೊಂಬೆ ಎನ್ನುವ ಕಿವಿಮಾತನ್ನು ಕಿಚ್ಚ ಹೇಳಿದ್ದಾರೆ.

ಇದನ್ನೂ ಓದಿ: 5G in India: ಈ ತಿಂಗಳಿನಿಂದ ದೇಶದಲ್ಲಿ ಪ್ರಾರಂಭವಾಗಲಿದೆ 5G ಸೇವೆ: ಚಾಲನೆ ನೀಡಲಿದ್ದಾರೆ ಪ್ರಧಾನಿ 

ಸ್ಪರ್ಧಿಗಳ ಜೋಶ್‌ ನೋಡಿದ್ರೆ ಈ ಬಾರಿಯ ಸೀಸನ್‌ ಸಖತ್‌ ಇಂಟ್ರೆಸ್ಟಿಂಗ್‌ ಆಗಿ ಇರಲಿದೆ ಎನ್ನುವುದು ಗೊತ್ತಾಗುತ್ತದೆ. ಅಲ್ಲದೆ, ಕಂಟೆಸ್ಟರ್‌ ಒಬ್ಬರು ತಮಗೆ ಬಿಪಿ, ಶುಗರ್‌ ಏನೂ ಇಲ್ಲ ಎಂದಿರುವುದು ಹಾಸ್ಯವಾಗಿತ್ತು. ಅದಕ್ಕೆ ಸುದೀಪ್‌ ಅವರು, ನೀವು ಇದ್ರೆ ಉಳಿದವರಿಗೆ ಇವೇಲ್ಲ ಬರುತ್ತೆ ಬಿಡಿ ಎಂದು ಕಾಮಿಡಿ ಮಾಡಿದ್ದಾರೆ. ಪ್ರೋಮೋದಲ್ಲಿ ಚಡ್ಡಿಯ ಮ್ಯಾಟರ್‌ ಕೂಡ ಕೇಳಿಬಂತು. ಸ್ಪರ್ಧಿಯೊಬ್ಬರು, ತಮ್ಮ ಅಪ್ಪನಿಗೆ 100 ದಿನಕ್ಕೆ 100 ಚಡ್ಡಿ ಕೊಡಿಸುವಂತೆ ಕೇಳಿದ್ರೆ ಅವರ ತಂದೆ ಬರೀ 6 ಜಡ್ಡಿ ಕೊಡಿಸಿದ ವಿಚಾರ ಕೇಳಿ ಕಿಚ್ಚ ಬಾಸ್‌ ನಕ್ಕರು.

ಅಲ್ಲದೆ, ಐ ಥಿಂಕ್‌ ನಾನು ನಾನಾಗಿಯೇ ಇರ್ತೀನಿ ಎಂದ ಸ್ಪರ್ಧಿಯೊಬ್ಬರ ಮಾತಿಗೆ, ನಾನು ನಾನಾಗಿಯೇ ಇರ್ತೀನಿ ಇನ್ಯಾರು ನಾನಾಗ್ತಾರೆ ಎಂದು ಕಿಚ್ಚ ಟಾಂಗ್‌ ಕೊಟ್ಟಿದ್ದಾರೆ. ಸದ್ಯ ಗ್ರ್ಯಾಂಡ್‌ ಒಪನಿಂಗ್‌ ಪಡೆದಿರುವ ಬಿಗ್‌ ಬಾಸ್‌ ಸೀಸನ್‌ 9 ಪ್ರೀಮಿಯರ್‌ ಪ್ರಾರಂಭವಾಗಿದ್ದು, ಬಿಗ್‌ ಹೌಸ್‌ನಲ್ಲಿ ನಡೆಯುವ ಪ್ರಸಂಗಗಳನ್ನು ನೋಡಲು ಜನರು ಕುತೂಹಲದಿಂದ ಟಿವಿ ಮುಂದೆ ಕುಳಿತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News