ಬಿಗ್ ಬಾಸ್ ಪ್ರಾರಂಭಕ್ಕೆ ಎಲ್ಲಾ ರೆಡಿ..! ಸ್ಪರ್ಧಿಗಳೂ ಸಹ ಸಿದ್ಧ.. ಶೋ ಯಾವಾಗ ಶುರು ಗೊತ್ತೆ..?

Bigg Boss Season 8 : ಬಿಗ್ ಬಾಸ್ ಶೋ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಪ್ರೇಕ್ಷಕರು ಬಿಗ್ ಬಾಸ್ ಯಾವಾಗ ಪ್ರಾರಂಭವಾಗುತ್ತೆ..? ತಮ್ಮ ನೆಚ್ಚಿನ ಸ್ಟಾರ್‌ಗಳು ಯಾರಾದರೂ ಈ ಬಾರಿ ದೊಡ್ಮನೆ ಪ್ರವೇಶ ಮಾಡ್ತಾರಾ ಎನ್ನುವ ಕುತೂಹಲದಲ್ಲಿದ್ದಾರೆ.. ಇದೆಲ್ಲದಕ್ಕೂ ಇದೀಗ ತೆರೆ ಬಿದ್ದಿದೆ..

Written by - Krishna N K | Last Updated : Jul 4, 2024, 06:47 PM IST
    • ಕಿರುತೆರೆಯಲ್ಲಿ ಅತಿ ಹೆಚ್ಚು ಕ್ರೇಜ್ ಹೊಂದಿರುವ ರಿಯಾಲಿಟಿ ಶೋ ಬಿಗ್‌ಬಾಸ್‌
    • ಬಿಗ್ ಬಾಸ್ ಎಲ್ಲಾ ಭಾಷೆಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.
    • ಬಿಗ್‌ಬಾಸ್‌ ಸೀಸನ್ 8 (Bigg Boss season 8) ಶೀಘ್ರದಲ್ಲೇ ಪ್ರಾರಂಭವಾಗಲಿದೆ.
ಬಿಗ್ ಬಾಸ್ ಪ್ರಾರಂಭಕ್ಕೆ ಎಲ್ಲಾ ರೆಡಿ..! ಸ್ಪರ್ಧಿಗಳೂ ಸಹ ಸಿದ್ಧ.. ಶೋ ಯಾವಾಗ ಶುರು ಗೊತ್ತೆ..? title=
Bigg Boss season 8 telugu

Bigg Boss season 8 contestants : ಕಿರುತೆರೆಯಲ್ಲಿ ಅತಿ ಹೆಚ್ಚು ಕ್ರೇಜ್ ಹೊಂದಿರುವ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್. ಈ ಶೋ ಎಲ್ಲಾ ಭಾಷೆಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಈ ಕಾರ್ಯಕ್ರಮಕ್ಕೆ ವಿಶೇಷ ಅಭಿಮಾನಿಗಳಿದ್ದಾರೆ. 

ಸುಮಾರು ಮೂರು ತಿಂಗಳ ಕಾಲ ನಡೆಯುವ ಈ ರಿಯಾಲಿಟಿ ಶೋ ಬಗ್ಗೆ ಸದಾ ಒಂದಿಲ್ಲೊಂದು ಸುದ್ದಿ ಇದ್ದೇ ಇರುತ್ತದೆ. ದೊಡ್ಮನೆ ಪ್ರವೇಶಿಸುವ ಸ್ಪರ್ಧಿಗಳ ಬಗ್ಗೆ ತಿಳಿಯಲು ನೆಟಿಜನ್‌ಗಳು ತುಂಬಾ ಆಸಕ್ತಿ ಹೊಂದಿರುತ್ತಾರೆ. ಬಿಗ್ ಬಾಸ್ OTT ಸೀಸನ್ 3 ಪ್ರಸ್ತುತ ಹಿಂದಿಯಲ್ಲಿ ಚಾಲನೆಯಲ್ಲಿದ್ದರೆ, ಸೀಸನ್ 8 ತೆಲುಗಿನಲ್ಲಿ (Bigg Boss season 8) ಶೀಘ್ರದಲ್ಲೇ ಪ್ರಾರಂಭವಾಗಲಿದೆ.

ಇದನ್ನೂ ಓದಿ: ಖ್ಯಾತ ನಟಿಗೆ ನಿರ್ದೇಶಕ ಮತ್ತು ನಿರ್ಮಾಪಕರ ಜೊತೆ ʼಲೈಂಗಿಕ ಕ್ರಿಯೆʼ ಮಾಡುವಂತೆ ಕರೆ..! ಮುಂದೆನಾಯ್ತು..?

ಈ ಬಾರಿ ಈ ಶೋವನ್ನು ಸ್ವಲ್ಪ ಮುಂಚಿತವಾಗಿ ಪ್ರಾರಂಭಿಸಲು ನಿರ್ಮಾಪಕರು ಸಿದ್ಧತೆ ನಡೆಸಿದ್ದಾರೆ. ಇತ್ತೀಚಿನ ಮಾಹಿತಿ ಪ್ರಕಾರ, ಬಿಗ್ ಬಾಸ್ ಸೀಸನ್ 8 ಆಗಸ್ಟ್ 4 ರಂದು (Bigg Boss season 8 telugu)ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಈ ಬಾರಿ ಶೋಗೆ ಎಂಟ್ರಿ ಕೊಡುವ ಸ್ಪರ್ಧಿಗಳನ್ನೂ ಫಿಕ್ಸ್ ಮಾಡಲಾಗಿದೆಯಂತೆ.

ಕುಮಾರಿ ಆಂಟಿ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿರುವ ಬ್ಯಾರೆಲಕ್ಕ, ಅಮೃತಾ ಪ್ರಣೈ, ಯೂಟ್ಯೂಬರ್ ನೇತ್ರಾ ಮತ್ತು ಪ್ರೇರಕ ಭಾಷಣಕಾರ ವಂಶಿ ಬಿಗ್ ಬಾಸ್ ಮನೆಗೆ ಪ್ರವೇಶಿಸುವ ನಿರೀಕ್ಷೆಯಿದೆ. ಹಾಗೆಯೇ ಕಿರುತೆರೆಯಲ್ಲಿ ಧಾರಾವಾಹಿಗಳ ಮೂಲಕ ಫೇಮಸ್ ಆಗಿರುವ ನಟರೂ ಇರಲಿದ್ದಾರೆಯಂತೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News