ಬಿಗ್‌ ಬಾಸ್‌ ಸೀಸನ್‌ 9 ಆರಂಭಕ್ಕೆ ಡೇಟ್‌ ಫಿಕ್ಸ್‌ : ಒಂಟಿಮನೆಯಲ್ಲಿ ವಾಸ ಮಾಡೋರು ಇವ್ರೆ ನೋಡಿ..!

ಓಟಿಟಿಯಲ್ಲಿ ಬಿಗ್ ಬಾಸ್‌ ಬಂದ್ರೂ ಟಿವಿಯಲ್ಲಿ ಯಾವಾಗಪ್ಪಾ ಬರುತ್ತೇ ಅಂತ ಕಾಯ್ತಾ ಕುಂತಿದ್ದ ಪ್ರೇಕ್ಷಕ ಮಹಾಶಯರಿಗೆ ಒಂದು ಗುಡ್‌ ನ್ಯೂಸ್‌ ಕಾದಿದ್ದು, ಇದೆ ಸೆಪ್ಟೆಂಬರ್‌ 24ಕ್ಕೆ ಬಿಗ್‌ ಬಾಸ್‌ 9 ಗ್ರ್ಯಾಂಡ್‌ ಪ್ರೀಮಿಯರ್‌ ಶುರುವಾಗಲಿದೆ.

Written by - Krishna N K | Last Updated : Sep 15, 2022, 03:17 PM IST
  • ಸೆಪ್ಟೆಂಬರ್ 24ಕ್ಕೆ ಬಿಸ್ ಬಾಸ್ 9 ಗ್ರ್ಯಾಂಡ್ ಪ್ರೀಮಿಯರ್
  • ಬಿಸ್ ಬಾಸ್ 9 ಹೊಸ ಪ್ರೋಮೋ ಬಿಡುಗಡೆ
  • ಪ್ರೋಮೋದಲ್ಲಿ ಖಡಕ್ ಲುಕ್‍ನಲ್ಲಿ ಕಾಣಿಸಿಕೊಂಡ ಕಿಚ್ಚ ಸುದೀಪ್
ಬಿಗ್‌ ಬಾಸ್‌ ಸೀಸನ್‌ 9 ಆರಂಭಕ್ಕೆ ಡೇಟ್‌ ಫಿಕ್ಸ್‌ : ಒಂಟಿಮನೆಯಲ್ಲಿ ವಾಸ ಮಾಡೋರು ಇವ್ರೆ ನೋಡಿ..! title=

ಬೆಂಗಳೂರು : ಓಟಿಟಿಯಲ್ಲಿ ಬಿಗ್ ಬಾಸ್‌ ಬಂದ್ರೂ ಟಿವಿಯಲ್ಲಿ ಯಾವಾಗಪ್ಪಾ ಬರುತ್ತೇ ಅಂತ ಕಾಯ್ತಾ ಕುಂತಿದ್ದ ಪ್ರೇಕ್ಷಕ ಮಹಾಶಯರಿಗೆ ಒಂದು ಗುಡ್‌ ನ್ಯೂಸ್‌ ಕಾದಿದ್ದು, ಇದೆ ಸೆಪ್ಟೆಂಬರ್‌ 24ಕ್ಕೆ ಬಿಗ್‌ ಬಾಸ್‌ 9 ಗ್ರ್ಯಾಂಡ್‌ ಪ್ರೀಮಿಯರ್‌ ಶುರುವಾಗಲಿದೆ.

ಹೌದು.. ಬಿಗ್ ಬಾಸ್ ಕನ್ನಡ ಶೋಗೆ ಕಾಯ್ತಾ ಇದ್ದ ಅಭಿಮಾನಿಗಳ ಕಾತರಕ್ಕೆ ತೆರೆ ಬಿದ್ದಿದೆ. ಸೆಪ್ಟೆಂಬರ್ 24ಕ್ಕೆ ಬಿಗ್‌ ಬಾಸ್ 9 ಗ್ರ್ಯಾಂಡ್ ಪ್ರೀಮಿಯರ್ ಇದೆ. ಈಗಾಗಲೇ ಹೊಸ ಪ್ರೋಮೋ ಬಿಡುಗಡೆಯಾಗಿದ್ದು ಕುತೂಹಲ ಹೆಚ್ಚಿಸಿದೆ. ಪ್ರೋಮೋದಲ್ಲಿ ಖಡಕ್ ಲುಕ್‍ನಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದಾರೆ. ಪ್ರತಿದಿನ ರಾತ್ರಿ 9.30ಕ್ಕೆ  ಖಾಸಗಿ ವಾಹಿನಿಯಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ.

ಇದನ್ನೂ ಓದಿ: ಆ ಬೆತ್ತಲೆ ಫೋಟೋ ನಂದಲ್ಲʼ : ವಿಚಾರಣೆ ವೇಳೆ ರಣವೀರ್‌ ಸಿಂಗ್‌ ಶಾಕಿಂಗ್‌ ಹೇಳಿಕೆ

ಕಿಚ್ಚ ಸುದೀಪ್ ನೇತೃತ್ವದಲ್ಲಿ ಬಿಗ್ ಬಾಸ್ ಸೀಸನ್ 9 ಶುರುವಾಗಲಿದ್ದು, ಓಟಿಟಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್‌ ಬಾಸ್‌ ಮಿನಿ ಸೀಸನ್‍ನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಖ್ಯಾತಿ ಪಡೆದ ಕೆಲ ಸೆಲೆಬ್ರಿಟಿಗಳು ಸೀಸನ್‌ 9ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಾಹಿನಿಯ ಹೊಸ ಪ್ರೋಮೋದಲ್ಲಿ ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ, ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರ್ಗಿ, ನಾಗಿಣಿ ಸೀರಿಯಲ್ ಖ್ಯಾತಿಯ ದೀಪಿಕಾ ದಾಸ್, ಅನುಪಮಾ ಗೌಡ ಕಾಣಿಸಿಕೊಂಡಿದ್ದು ಇವ್ರು ಬಿಗ್ ಬಾಸ್ ಮನೆ ಸೇರ್ತಾರಾ ಎಂದು ಅನುಮಾನ ಹುಟ್ಟಿಸುತ್ತಿದೆ. ಆದ್ರೆ ಬಿಗ್‌ ಬಾಸ್‌ ಸಸ್ಪೆನ್ಸ್ ಮೆಂಟೈನ್‌ ಮಾಡ್ತೀದ್ದು ಯಾರೆಲ್ಲ ಬಿಗ್‌ ಬಾಸ್‌ ಮನೆಯಲ್ಲಿ ವಾಸ ಮಾಡ್ತಾರೆ ಅಂತ ಕಾಯ್ದು ನೋಡಬೇಕಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News