ಸಾನಿಯಾ - ಶೋಯೆಬ್ ವಿಚ್ಛೇದನ ವಿಚಾರದಲ್ಲಿ ಬಿಗ್‌ ಟ್ವಿಸ್ಟ್!?

Sania Mirza - Shoaib Malik : ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ಅವರ ಮದುವೆಯ ವಿಚಾರ ಸದ್ಯ ಹೆಚ್ಚು ಚರ್ಚೆಯ ವಿಷಯವಾಗಿದೆ. ಆದರೆ ಇದೀಗ ಹೊಸ ಟಿವಿ ಕಾರ್ಯಕ್ರಮವನ್ನು ಹೋಸ್ಟ್ ಮಾಡಲು ಸಾನಿಯಾ ಮತ್ತು ಶೋಯೆಬ್ ಒಟ್ಟಿಗೆ ಕೆಲಸ ಮಾಡಲು ಸಿದ್ಧರಾಗಿದ್ದಾರೆ ಎಂಬ ವಿಚಾರ ಇದೀಗ ಹರಿದಾಡುತ್ತಿದೆ.   

Written by - Chetana Devarmani | Last Updated : Nov 13, 2022, 09:05 PM IST
  • ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್
  • ಸಾನಿಯಾ - ಶೋಯೆಬ್ ವಿಚ್ಛೇದನ ವಿಚಾರ
  • ಸಾನಿಯಾ - ಶೋಯೆಬ್ ವಿಚ್ಛೇದನ ವಿಚಾರದಲ್ಲಿ ಬಿಗ್‌ ಟ್ವಿಸ್ಟ್
ಸಾನಿಯಾ - ಶೋಯೆಬ್ ವಿಚ್ಛೇದನ ವಿಚಾರದಲ್ಲಿ ಬಿಗ್‌ ಟ್ವಿಸ್ಟ್!? title=
ಸಾನಿಯಾ ಮಿರ್ಜಾ

Sania Mirza - Shoaib Malik : ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ಅವರ ಮದುವೆಯ ವಿಚಾರ ಸದ್ಯ ಹೆಚ್ಚು ಚರ್ಚೆಯ ವಿಷಯವಾಗಿದೆ. ಈ ಸ್ಟಾರ್‌ ಜೋಡಿ ವಿಚ್ಛೇದನವನ್ನು ಪಡೆಯಲು ನಿರ್ಧರಿಸಿದೆ ಎಂಬ ವದಂತಿಗಳು ಹರಿದಾಡುತ್ತಿವೆ. ಹೊಸ ಟಿವಿ ಕಾರ್ಯಕ್ರಮವನ್ನು ಹೋಸ್ಟ್ ಮಾಡಲು ಸಾನಿಯಾ ಮತ್ತು ಶೋಯೆಬ್ ಒಟ್ಟಿಗೆ ಕೆಲಸ ಮಾಡಲು ಸಿದ್ಧರಾಗಿದ್ದಾರೆ ಎಂಬ ವಿಚಾರ ಇದೀಗ ಹರಿದಾಡುತ್ತಿದೆ. ವಿಚ್ಛೇದನದ ವದಂತಿಗಳ ಮಧ್ಯೆ ಹೊರಬಿದ್ದಿರುವ ಈ ಸುದ್ದಿ ಎಲ್ಲರಲ್ಲೂ ಗೊಂದಲಕ್ಕೆ ಕಾರಣವಾಗಿದೆ. 

ಇದನ್ನೂ ಓದಿ: ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಭಜ್ಜಿ..!

ಹಲವಾರು ಮೂಲಗಳ ಪ್ರಕಾರ, ದಂಪತಿಗಳು ವಿಚ್ಛೇದನ ಪಡೆದಿದ್ದಾರೆ. ಆದರೆ ಇತ್ತ ಮತ್ತೆ ಕೆಲವು ವರದಿಗಳ ಪ್ರಕಾರ, ದಂಪತಿಗಳು 'ದಿ ಮಿರ್ಜಾ ಮಲಿಕ್ ಶೋ' ಎಂಬ ಕಾರ್ಯಕ್ರಮವನ್ನು ಆಯೋಜಿಸಲಿದ್ದಾರೆ. ‘ದಿ ಮಿರ್ಜಾ ಮಲಿಕ್ ಶೋ’ ಉರ್ದುಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. ಇದು ಪಾಕಿಸ್ತಾನದ ಮೊದಲ ಉರ್ದು ಒಟಿಟಿ ಪ್ಲಾಟ್‌ಫಾರ್ಮ್ ಆಗಲಿದೆ.

thebridge.in ಪ್ರಕಾರ, ಈ ಚಾಟ್ ಶೋ ಒಂದು ಗಂಟೆಯ ಸಂಚಿಕೆಗಳನ್ನು ಹೊಂದಿರುತ್ತದೆ. ಇಲ್ಲಿ ಫನ್‌ ಜೊತೆ ಒಂದಷ್ಟು ಮಾತಿಕತೆ ಸಹ ಇರುತ್ತದೆ. ಮಾಹಿತಿಯ ಪ್ರಕಾರ, ಶೋಯೆಬ್ ಮತ್ತು ಸಾನಿಯಾ ನಡೆಸಿಕೊಡಲಿರುವ ಈ ಶೋ ಭಾರತದ ಅತ್ಯಂತ ಜನಪ್ರಿಯ ಕಾಮಿಡಿ ಶೋಗಳಲ್ಲಿ ಒಂದಾದ ಕಪಿಲ್ ಶರ್ಮಾ ಶೋಗೆ ಸಮಾನವಾದ ಕಂಟೆಂಟ್‌ ಅನ್ನು ಹೊಂದಿರುತ್ತದಂತೆ. ಆದರೆ ಇದೊಂದು ಕಂಪ್ಲೀಂಟ್‌ ಫ್ಯಾಮಿಲಿ ಶೋ ಆಗಲಿದೆ. 

ಇದನ್ನೂ ಓದಿ: 2016 ರ ವಿಶ್ವಕಪ್ ವಿಲನ್ ನಿಂದ 2019, 2022 ರ ವಿಶ್ವಕಪ್ ನ ಹೀರೋ ಆಗಿದ್ದು ಹೇಗೆ?

ವರದಿಗಳ ಪ್ರಕಾರ, ಇತ್ತೀಚಿನ ಫೋಟೋಶೂಟ್ ಸಮಯದಲ್ಲಿ ಶೋಯೆಬ್ ಮಲಿಕ್ ಮತ್ತು ಪಾಕಿಸ್ತಾನಿ ಮಾಡೆಲ್ ಆಯೇಶಾ ಒಮರ್ ಅವರ ನಿಕಟತೆಯು ಶೋಯೆಬ್ ಮತ್ತು ಸಾನಿಯಾ ಮಲಿಕ್ ಅವರ ಸಂಬಂಧದಲ್ಲಿ ಬಿರುಕು ಮೂಡಲು ಕಾರಣವಾಗಿದೆ. 

ಸಾನಿಯಾ ಮತ್ತು ಶೋಯೆಬ್ ಬೇರೆ ಬೇರೆಯಾಗಿ ವಾಸಿಸುತ್ತಿದ್ದಾರೆ ಎಂದು ವರದಿಯಾಗಿದೆಯಾದರೂ, ಅವರು ತಮ್ಮ ಮಗ ಇಜಾನ್ ಮಿರ್ಜಾ ಮಲಿಕ್‌ಗೆ ಸಹ-ಪೋಷಕರಾಗಲಿದ್ದಾರೆ. ಶೋಯೆಬ್ ಮತ್ತು ಸಾನಿಯಾ ಏಪ್ರಿಲ್ 2010 ರಲ್ಲಿ ಹೈದರಾಬಾದ್‌ನಲ್ಲಿ ವಿವಾಹವಾದರು ಮತ್ತು ಅವರು 2018 ರಲ್ಲಿ ಇಜಾನ್ ಎಂಬ ಮಗನನ್ನು ಸ್ವಾಗತಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News