Bhagyalakshmi Kannada Serial : ಎಲ್ಲರ ಮನಗೆದ್ದ ಧಾರವಾಹಿಗಳ ಸಾಲಿಗೆ ಸೇರುವ ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲಿ ಸದ್ಯ ಲಕ್ಷ್ಮೀ ಮದುವೆಯ ಸಂಭ್ರಮ ಜೋರಾಗಿದೆ. ಟಿವಿ ಇತಿಹಾಸದಲ್ಲಿಯೇ ಕಲರ್ಸ್ ಕನ್ನಡ ಹೊಸ ಸಾಹಸಕ್ಕೆ ಕೈ ಹಾಕಿದೆ. ಭಾರತೀಯ ಧಾರಾವಾಹಿಗಳ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಇಂತಹದ್ದೊಂದು ಪ್ರಯತ್ನ ನಡೆಯುತ್ತಿದೆ. ಒಂದೇ ಕತೆಯನ್ನು ಎರಡು ಧಾರಾವಾಹಿಗಳಾಗಿ ಹೇಳುವ ಹೊಸ ಪ್ರಯತ್ನ ಮಾಡಲಿದೆ ಕಲರ್ಸ್ ಕನ್ನಡ ವಾಹಿನಿ.
ಇದನ್ನೂ ಓದಿ : Satish Kaushik: ವಿವಾಹಿತನಿಂದ ಗರ್ಭಿಣಿಯಾಗಿದ್ದ ಸ್ಟಾರ್ ನಟಿ.. ಹೆದರಬೇಡ ನಾನು ಮದ್ವೆಯಾಗ್ತೀನಿ ಎಂದಿದ್ರಂತೆ!
ಭಾಗ್ಯಲಕ್ಷ್ಮೀ ಪ್ರಮುಖ ಘಟ್ಟ ತಲುಪಿರುವ ಹೊತ್ತಿನಲ್ಲಿ ನೋಡುಗರಿಗೆ ಬಿಗ್ ಟ್ವಿಸ್ಟ್ ಕಾದಿದೆ. ಒಂದೇ ಧಾರಾವಾಹಿಯನ್ನು ಎರಡು ಸೀರಿಯಲ್‌ಗಳಾಗಿ ಬೆಳೆಸಲು ನಿರ್ಧರಿಸಲಾಗಿದೆ. ಪ್ರತಿದಿ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಸೀರಿಯಲ್ ಜೊತೆಗೆ 7.30 ರಿಂದ ಲಕ್ಷ್ಮೀ ಬಾರಮ್ಮ ಎಂಬ ಹೊಸ ಧಾರಾವಾಹಿ ಶುರುವಾಗಲಿದೆ. ಒಂದೇ ಕತೆ ಎರಡು ಧಾರಾವಹಿಗಳಾಗಿ ಇದೇ ಸೋಮವಾರದಿಂದ ಪ್ರಸಾರವಾಗಲಿವೆ.
ಟಿ.ವಿ. ಇತಿಹಾಸದಲ್ಲೇ FIRST TIME! ಅಕ್ಕ-ತಂಗಿ ಕತೆ "ಅಕ್ಕ-ಪಕ್ಕ"
7 ಗಂಟೆಗೆ ಅಕ್ಕನ ಕತೆ "ಭಾಗ್ಯಲಕ್ಷ್ಮೀ" | 7.30ಕ್ಕೆ ತಂಗಿಯ ಕತೆ "ಲಕ್ಷ್ಮೀ ಬಾರಮ್ಮ" pic.twitter.com/8PyFd2Ob6q— Colors Kannada (@ColorsKannada) March 9, 2023
ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಅಕ್ಕ ಭಾಗ್ಯ ಕುರಿತಾದ ಕತೆ ಮುಂದುವರೆಯಲಿದೆ. ಇತ್ತ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಹೊಸದಾಗಿ ಮದುವೆಯಾಗಿರುವ ತಂಗಿ ಲಕ್ಷ್ಮಿಯ ಜೀವನಗಾಥೆ ಶುರುವಾಗಲಿದೆ. ಪದ್ಮಜಾ ರಾವ್, ಸುಷ್ಮಾ ರಾವ್, ಸುದರ್ಶನ್ ರಂಗರಾಜು ಮತ್ತು ಗೌತಮಿ ಗೌಡ ಭಾಗ್ಯಲಕ್ಷ್ಮೀ ಧಾರಾವಾಹಿಯನ್ನು ಮುನ್ನಡೆಸಲಿದ್ದಾರೆ. ಇತ್ತ ಹೊಸ ಸೀರಿಯಲ್‌ನಲ್ಲಿ ಶಮಂತ್, ಭೂಮಿಕಾ, ಸುಷ್ಮಾ ನಾಣಯ್ಯ, ತನ್ವಿರಾವ್ ಇರಲಿದ್ದಾರೆ. ವೀಕ್ಷಕರ ಪಾಲಿಗೆ ಪ್ರತಿದಿನ ಒಂದು ಗಂಟೆಯ ಡಬಲ್ ಮನರಂಜನೆ ಅಂತೂ ಪಕ್ಕಾ ಸಿಗಲಿದೆ.
ಇದನ್ನೂ ಓದಿ : Bollywood : ಮದ್ಯದ ಚಟ, ವೇಶ್ಯಾವಾಟಿಕೆ.. ಈ ಖ್ಯಾತ ನಟಿಯ ಶವ ಕೈಗಾಡಿಯಲ್ಲಿ ಸ್ಮಶಾನಕ್ಕೆ ಸಾಗಿಸಲಾಯ್ತು!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.