Sandalwood: ಈಗ ಭಾರತದ ಮುಂಚೂಣಿಯಲ್ಲಿರುವ ಮ್ಯೂಸಿಕ್ ಡೈರೆಕ್ಟರ್, ಪದ್ಮಶ್ರೀ, ರಾಷ್ಟ್ರ ಪ್ರಶಸ್ತಿ ಹಾಗೂ ವಿಶ್ವದ ಅತ್ಯಂತ ಪ್ರಮುಖ ಪ್ರಶಸ್ತಿಯಾದ ಆಸ್ಕರ್ ವಿಜೇತ ಬಾಹುಬಲಿ ಹಾಗೂ ಆರ್.ಆರ್.ಆರ್ ಚಿತ್ರಗಳ ಸಂಗೀತ ಮಾಂತ್ರಿಕ ನಿರ್ದೇಶಕ ಎಮ್.ಎಮ್ ಕೀರವಾಣಿ ಅವರಿಂದ ಚಿತ್ರದಲ್ಲಿ ತಿರುವು ಪಡೆಯುವ ಅದ್ಭುತ ಗೀತೆಯೊಂದನ್ನು ಹಾಡಿಸಿ ಗೀತೆಯನ್ನು ಬಿಡುಗಡೆಗೆಗೊಳಿಸಿದೆ.
ಹೌದು ಭಾರತದ ಎಮ್.ಎಮ್ ಕೀರವಾಣಿಯವರು ಹಲವು ದಶಕಗಳ ನಂತರ "ರಂಗಸಮುದ್ರ" ಚಿತ್ರದ ಮೂಲಕ ಕನ್ನಡಕ್ಕೆ ಮರಳಿ ಗೀತೆಯೊಂದಕ್ಕೆ ದನಿಯಾಗಿರುವುದು ಚಿತ್ರತಂಡಕ್ಕೆ ಆತ್ಮವಿಶ್ವಾಸ ಹೆಚ್ಚಿಸಿದಂತಾಗಿದೆ. ಅರ್ಥಾತ್ ಬಾಹುಬಲಿ ಸಂಗೀತ ಮಾಂತ್ರಿಕನ ಬಲ ಸಿಕ್ಕಾಂತಾಗಿದೆ ಎನ್ನುವುದು ಈಗಾಗಲೆ ಗಾಂಧಿನಗರದಲ್ಲಿ ಪ್ರಸ್ತುತ ಪರಸ್ಪರ ಪಿಸುಮಾತಗುತ್ತಿರುವ ಸುದ್ದಿ.
ಇದನ್ನೂ ಓದಿ-ಸಲಾರ್ ನಲ್ಲಿ ನಟಿಸಬೇಕಿತ್ತು ಆಲಿಯಾ ಭಟ್.. ಆದರೆ ಕೊನೆಗೆ ಶ್ರುತಿ ಹಾಸನ್ ಸೆಲೆಕ್ಟ್ ಆಗಿದ್ದೇಗೆ?
ರಂಗಸಮುದ್ರ ಚಿತ್ರದ ನಿರ್ದೇಶಕ ರಾಜ್ ಕುಮಾರ್ ಅಸ್ಕಿ , ಸಾಹಿತಿ ವಾಗೀಶ್ ಚನ್ನಗಿರಿ ಹಾಗೂ ಸಂಗೀತ ನಿರ್ದೇಶಕ ದೇಸಿ ಮೋಹನ್ ರವರು ಈ ಒಂದು ಗೀತೆಗೆ ಎಮ್ ಎಮ್ ಕೀರಾವಣಿಯವರೆ ದನಿಯಾಗಬೇಕು ಎಂದು ಚಿತ್ರದ ನಿರ್ಮಾಪಕ ಹೊಯ್ಸಳ ಕೊಣನೂರು ಅವರ ಬಳಿ ಹೇಳಿಕೊಂಡಿದ್ದರಂತೆ. ಚಿತ್ರತಂಡದ ಆಸೆಯಂತೆ ನಿರ್ಮಾಪಕರು ಕೀರವಾಣಿ ಅವರನ್ನು ಸಂಪರ್ಕಿಸಿದಾಗ ಪ್ರೀತಿಯಿಂದ ಹೈದಾರಬಾದ್ ಗೆ ಆಹ್ವಾನಿಸಿದರು ಎಂದಿದ್ದಾರೆ.
ಸಾಂಗ್ ಅನ್ನು ಒಮ್ಮೆ ಕೇಳಿದ ನಂತರ, ನಾನು ಸೀನಿಯರ್ ಎಂಬುದನ್ನು ಬದಿಗಿಟ್ಟು , ಚಿತ್ರದ ಕಥೆ ಹೇಳಿ ಎಂದು ನಗುತ್ತ ಡೈರೆಕ್ಟರ್ ಗೆ ಹೇಳಿದ್ದಾರೆ ಕಥೆ ಕೇಳಿದ 5 ನಿಮಿಷಕ್ಕೆ ಹಾಡಲು ಒಪ್ಪಿದರು ಎನ್ನುತ್ತಾರೆ ನಿರ್ದೇಶಕ ರಾಜಕುಮಾರ್ ಅಸ್ಕಿ.. ಇನ್ನು ಹಾಡಲು ಸಿದ್ದರಾಗುವಾಗ ಗೀತೆಯನ್ನು ಕನ್ನಡದಲ್ಲೆ ಬರೆದುಕೊಂಡು, ಬಹಳ ಸುಮಧುರ ವಾಗಿ ಹಾಡಿ ಕನ್ನಡ ಭಾಷೆ ಮೇಲಿರುವ ಅಭಿಮಾನವನ್ನು ಸಾಬೀತುಪಡಿಸಿರುವುದು ಹೆಮ್ಮೆಯ ಸಂಗತಿ..
ಸರಿಸುಮಾರು ಅರ್ಧ ದಿನ ಚಿತ್ರತಂಡದೊಂದಿಗೆ ಮಾತನಾಡುತ್ತ ಕುಳಿತ ಎಮ್ ಎಮ್ ಕೀರವಾಣಿಯವರು, ಅವರ ಮತ್ತು ಕನ್ನಡ ನಂಟು ಹಾಗೂ ಬೆಂಗಳೂರಿನಲ್ಲಿ ಒಂದು ಚಿಕ್ಕ ರೂಮಿನಲ್ಲಿ ವಾಸ ಮಾಡುತ್ತಿದ್ದದ್ದು, ಚಾಮುಂಡೇಶ್ವರಿ ಸ್ಟುಡಿಯೋ ಇಂದ ತನ್ನ ಸಿನಿಪಯಣ ಶುರುವಾಗಿದ್ದು. ನನ್ನ ಆಪ್ತ ಸ್ನೇಹಿತ ದೊಡ್ಡಣ್ಣ ಎನ್ನುತ್ತಾ ಹಲವಾರು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಚಿತ್ರದ ಶೂಟಿಂಗ್ ಬಗ್ಗೆ ಮಾತನಾಡುತ್ತಾ ಅಪ್ಪುರವರು ನಟಿಸಬೇಕಿದ್ದ ಸಿನಿಮಾ ರಂಗಸಮುದ್ರ ಎಂದು ತಿಳಿದಾಗ ಭಾವುಕರಾಗಿ, ಅಪ್ಪು ಒಬ್ಬ ಅಜಾತಶತ್ರು ಈಗ ನಕ್ಷತ್ರವಾಗಿ ಮಿನುಗುತ್ತಿದ್ದಾರೆ, ಒಬ್ಬರು ಸತ್ತರೆ ಶತ್ರುಗು ಕೂಡ ಕಣ್ಣಿರು ಬರಬೇಕು ಅದರಂತೆಯೆ ಈ ಸಾಂಗ್ ನೋಡಿದ ಮೇಲೆ ಎಂತಹ ಕಲ್ಲು ಮನಸ್ಸು ಕೂಡ ಕರಗುತ್ತೆ ಎಂದಿದ್ದಾರೆ..
ಚಿತ್ರವನ್ನು ನಿರ್ಮಾಣ ಮಾಡಿದ ಹೊಯ್ಸಳರವರ ಹೆಗಲ ಮೇಲೆ ಕೈ ಹಾಕಿ ಆಭಯ ನೀಡುವುದರ ಜೊತೆಗೆ, ಕಥೆ ರಚಿಸಿದ ಡೈರೆಕ್ಟರ್ ರಾಜ್ ಕುಮಾರ್ ಅಸ್ಕಿ ಮತ್ತು ಅತ್ಯುತ್ತಮ ಸಾಹಿತ್ಯ ನೀಡಿರುವ ವಾಗೀಶ್ ಚನ್ನಗಿರಿ ಅವರ ಬೆನ್ನು ತಟ್ಟಿ ರಾಜಮೌಳಿಯೊಂದಿಗೆ ನಿಮ್ಮ ಸಿನಿಮಾ ನೋಡುತ್ತೇನೆ ಎಂದು, ಅತಿಥಿಗಳಿಗೆ ಅವರೇ ಎಲ್ಲಾ ರೀತಿಯಲ್ಲೂ ಸತ್ಕರಿಸಿ ಬೀಳ್ಕೊಟ್ಟರು ಎನ್ನುತ್ತಾರೆ ಚಿತ್ರತಂಡದವರು..
ಇದನ್ನೂ ಓದಿ-ಯಾವ ಹಿರೋಯಿನ್‌ಗಳಿಗೂ ಕಡಿಮೆ ಇಲ್ಲ.. ಹಿರಿಯ ನಟಿ ಮಾಧವಿ ಹೆಣ್ಣುಮಕ್ಕಳು ಇವರೇ
ರಂಗಸಮುದ್ರ ರಾಘವೇಂದ್ರ ರಾಜ್ ಕುಮಾರ್, ರಂಗಾಯಣ ರಘು, ಸಂಪತ್ ರಾಜ್,ದಿವಂಗತ ಮೋಹನ್ ಜುನೇಜಾ, ಮೂಗು ಸುರೇಶ್, ಗುರುರಾಜ್ ಹೊಸಕೋಟೆ,,ಉಗ್ರಂ ಮಂಜು,, ಕಾರ್ತಿಕ್ ರಾವ್, ದಿವ್ಯ ಗೌಡ,,ಮಹೇಂದ್ರ, ಸ್ಕಂದ ಅವರ ತಾರಾ ಬಳಗವನ್ನು ಹೊಂದಿದೆ..
ಚಿತ್ರದಲ್ಲಿರುವ ೪ ಗೀತೆಗಳಿಗೆ ಖ್ಯಾತ ಗಾಯಕರಾದ ಕೈಲಾಶ್ ಖೇರ್, ವಿಜಯ್ ಪ್ರಕಾಶ್, ಸಂಜಿತ್ ಹೆಗ್ಡೆ,ದೇಸಿ ಮೋಹನ್ ಅವರು ದನಿಯಾಗಿದ್ದರೆ, ಚಿತ್ರದಲ್ಲಿ ಎರಡು ಬಿಟ್ ಗಳಿಗೆ ನವೀನ್ ಸಜ್ಜು ರವರು ದನಿಯಾಗಿದ್ದಾರೆ. ರೆಟ್ರೋ ಕಥಾ ಹಂದರದ ಈ ಸಿನಿಮಾ, ಪ್ರೇಕ್ಷಕರ ಮನಸ್ಸನ್ನು ಗೆಲ್ಲಲು ಎಲ್ಲಾ ರೀತಿಯ ಸಿದ್ದತೆಯೊಂದಿಗೆ ಜನವರಿ 12ರಂದು ರಾಜ್ಯದಾದ್ಯಂತ ಬಿಡುಗಡೆಗೆ ಸಿದ್ದವಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.