Salman Khan: ಡ್ರಗ್ ಪ್ರಕರಣದಲ್ಲಿ ಆರ್ಯನ್ ಬಂಧನ, ಶಾರುಖ್ ಭೇಟಿಗಾಗಿ ಮನ್ನತ್ ತಲುಪಿದ ಸಲ್ಮಾನ್ ಖಾನ್

Shah Rukh Khan's son Aryan Khan arrest: ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ನನ್ನು ಬಂಧಿಸಿರುವ NCB 1 ದಿನದ ಕಸ್ಟಡಿಗೆ ನ್ಯಾಯಾಲಯದಿಂದ ಅನುಮೋದನೆ ಪಡೆದಿದೆ. ಶಾರುಖ್ ಖಾನ್ ಕೂಡ ತನ್ನ ಮಗನನ್ನು ಉಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.  

Written by - Yashaswini V | Last Updated : Oct 4, 2021, 07:06 AM IST
  • ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್ ಬಂಧನ
  • ಶಾರುಖ್ ಅವರನ್ನು ಭೇಟಿ ಮಾಡಲು ಮನ್ನತ್ ತಲುಪಿದ ಸಲ್ಮಾನ್
  • ಆರ್ಯನ್ ಜಾಮೀನು ಅರ್ಜಿಯ ವಿಚಾರಣೆ ಸೋಮವಾರ ನಡೆಯಲಿದೆ
Salman Khan: ಡ್ರಗ್ ಪ್ರಕರಣದಲ್ಲಿ ಆರ್ಯನ್ ಬಂಧನ, ಶಾರುಖ್ ಭೇಟಿಗಾಗಿ ಮನ್ನತ್ ತಲುಪಿದ ಸಲ್ಮಾನ್ ಖಾನ್ title=
Salman meet Shahrukh

ಮುಂಬೈ:  Shah Rukh Khan's son Aryan Khan arrest- ಡ್ರಗ್ಸ್ ಪ್ರಕರಣದಲ್ಲಿ (Drugs Case) ಬಾಲಿವುಡ್ ನಟ ಶಾರುಖ್ ಖಾನ್ (Shahrukh Khan) ಪುತ್ರ ಆರ್ಯನ್ ಖಾನ್ (Aryan Khan) ಸಂಕಷ್ಟ ಹೆಚ್ಚಾಗಿದೆ. ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಆರ್ಯನ್ ನನ್ನು ಬಂಧಿಸಿ 1 ದಿನ ಕಸ್ಟಡಿಗೆ ತೆಗೆದುಕೊಂಡಿದೆ. ಈ ಕಷ್ಟದ ಸಮಯದಲ್ಲಿ ನಟ ಸಲ್ಮಾನ್ ಖಾನ್ (Salman Khan) ಅವರು  ಶಾರುಖ್ ಖಾನ್ ಅವರನ್ನು ಭೇಟಿಯಾಗಲು ಅವರ ನಿವಾಸ ಮನ್ನತ್ ಗೆ ತಲುಪಿದರು. 

ಸಲ್ಮಾನ್ ಖಾನ್ ಅವರು ಶಾರುಖ್ ಖಾನ್ ಮನೆಗೆ ಭೇಟಿ ನೀಡಿದ ವಿಡಿಯೋ:

 
 
 
 

 
 
 
 
 
 
 
 
 
 
 

A post shared by Bollywood Pap (@bollywoodpap)

ಮನ್ನತ್ ಹೊರಗೆ ಕಾಣಿಸಿಕೊಂಡ ಸಲ್ಮಾನ್ ಖಾನ್:
ಶಾರುಖ್ ಖಾನ್ ನಿವಾಸ ಮನ್ನತ್ ಹೊರಗೆ ಸಲ್ಮಾನ್ ಖಾನ್ (Salman Khan) ಕಾರಿನಲ್ಲಿ ಹೊರಡುತ್ತಿರುವ ಕೆಲವು ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದೆ. ತಡರಾತ್ರಿ ನಡೆದ ಈ ಸಭೆಗೆ ಸಂಬಂಧಿಸಿದಂತೆ ಅಭಿಮಾನಿಗಳ ಮನಸ್ಸಿನಲ್ಲಿ ಹಲವು ಪ್ರಶ್ನೆಗಳು ಉದ್ಭವಿಸಿವೆ. ಸಂಕಷ್ಟದ ಸಮಯದಲ್ಲಿ ಸಲ್ಮಾನ್ ಖಾನ್ ತನ್ನ ಸ್ನೇಹಿತ ಶಾರುಖ್ ಖಾನ್ ಮತ್ತು ಆತನ ಕುಟುಂಬದ ಧೈರ್ಯವನ್ನು ಹೆಚ್ಚಿಸಲು ಬಂದಿದ್ದಾರೆ ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ (Social Media) ಪ್ರತಿಕ್ರಿಯಿಸುತ್ತಿದ್ದಾರೆ. 

ಇದನ್ನೂ ಓದಿ- ಅಕ್ಟೋಬರ್ 4 ವರೆಗೆ ಶಾರುಖ್ ಖಾನ್ ಪುತ್ರ ಆರ್ಯನ್ NCB ಕಸ್ಟಡಿಗೆ

ಶಾರುಖ್ ಸಲ್ಮಾನ್ (Sharukh Salman) ಜೋಡಿ ತೆರೆಯ ಮೇಲೆ ಸಾಕಷ್ಟು ಪ್ರೀತಿ-ಅಭಿಮಾನವನ್ನು ಪಡೆದಿದೆ. ಬಾಲಿವುಡ್ ಚಿತ್ರರಂಗದಲ್ಲಿ ಒಂದು ವೇಳೆ ಸಂತೋಷದ ಸಮಯದಲ್ಲಿ ಸಲ್ಮಾನ್ ಖಾನ್ ಜೊತೆಗಿರುತ್ತಾರೋ ಇಲ್ಲವೋ? ಆದರೆ ಯಾರೇ ಆದರೂ ಸಂಕಷ್ಟದಲ್ಲಿರುವ ಸಮಯದಲ್ಲಿ ಸಲ್ಲು ಭಾಯ್ ಖಂಡಿತ ಅವರ ಜೊತೆಗಿರುತ್ತಾರೆ ಎಂಬ ಮಾತಿದೆ. ಅದರಂತೆ ತನ್ನ ಆಪ್ತ ಗೆಳೆಯ ಶಾರುಖ್ ಖಾನ್  (Sharukh Khan) ಅವರ ಈ ಸಂಕಷ್ಟದ ಸಮಯದಲ್ಲಿ ಸಲ್ಮಾನ್ ಖಾನ್ ಅವರನ್ನು ಭೇಟಿ ಆಗಿ ಧೈರ್ಯ ತುಂಬಿದ್ದಾರೆ. ಆದಾಗ್ಯೂ, ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ನಡುವಿನ ಮಾತುಕತೆ ಬಗ್ಗೆ ಯಾವುದೇ ಹೇಳಿಕೆಯನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.

ಇದನ್ನೂ ಓದಿ- Sharukh Khan Old Viral Statement:'ನನ್ನ ಮಗ ಡ್ರಗ್ಸ್ ಸೇವಿಸಬೇಕು, ಹುಡುಗಿಯರ ಹಿಂದೆ ಬೀಳಬೇಕು', ವೈರಲ್ ಆದ ಶಾರುಕ್ ಹಳೆ ಹೇಳಿಕೆ

ಸೋಮವಾರ ಜಾಮೀನು ಪಡೆಯುವ ನಿರೀಕ್ಷೆ:
ಭಾನುವಾರ ಮುಂಬೈನ ಫೋರ್ಟ್ ಕೋರ್ಟ್‌ನಲ್ಲಿ ಆರ್ಯನ್ ಹಾಜರಾದಾಗ, ಎನ್‌ಸಿಬಿ ಮಾದಕವಸ್ತು ಮಾರಾಟಗಾರರೊಂದಿಗೆ ಅವರ ವಾಟ್ಸಾಪ್ ಚಾಟ್‌ಗಳನ್ನು ತೋರಿಸಿದೆ ಮತ್ತು ಇದರ ಆಧಾರದ ಮೇಲೆ ಆರೋಪಿಯನ್ನು 2 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಕೋರಿದರು. ಆದರೆ ನ್ಯಾಯಾಲಯದಲ್ಲಿ, ಆರ್ಯನ್ ವಕೀಲ ಸತೀಶ್ ಮನ್ಶಿಂಡೆ ಆರ್ಯನ್ ಫೋನಿನಲ್ಲಿ ಯಾವುದೇ ಚಾಟ್ ಕಂಡುಬಂದಿಲ್ಲ ಎಂದು ವಾದಿಸಿದರು. ವಾದ-ವಿವಾದಗಳನ್ನು ಆಲಿಸಿದ ನ್ಯಾಯಾಲವು ಆರ್ಯನ್ ಖಾನ್ ಅವರನ್ನು ಒಂದು ದಿನದ ಪೊಲೀಸ್ ಕಸ್ಟಡಿಗೆ ಅನುಮತಿ ನೀಡಿತು. ಆರ್ಯನ್ ಜಾಮೀನು ಅರ್ಜಿಯ ವಿಚಾರಣೆ ಸೋಮವಾರ ಸುಮಾರು 2:30 ಕ್ಕೆ ನಡೆಯಲಿದ್ದು ಶಾರುಖ್ ಖಾನ್ ಪುತ್ರನಿಗೆ ಇಂದು ಜಾಮೀನು ಸಿಗುತ್ತದೆಯೋ ಅಥವಾ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News