ಮೇ ತಿಂಗಳಲ್ಲಿ ತೆರೆಗೆ ಬರ್ತಿದೆ 'ಖಾಸಗಿ ಪುಟಗಳು': ಯೂಟ್ಯೂಬ್‌ನಲ್ಲಿ 'ಅರೆಘಳಿಗೆ' ಹಾಡಿನ ದಿಬ್ಬಣ

ಎಸ್‌ವಿಎಂ ಮೋಶನ್‌ ಪಿಕ್ಚರ್ ಬ್ಯಾನರ್‌ನಲ್ಲಿ ಮಂಜು ವಿ. ರಾಜ್‌, ವೀಣಾ ವಿ. ರಾಜ್‌, ಮಂಜುನಾಥ್‌ ಡಿ. ಎಸ್‌ ನಿರ್ಮಾಣ ಮಾಡಿರುವ ಖಾಸಗಿ ಪುಟಗಳು ಸಿನಿಮಾ ತೆರೆಗೆ ಬರೋದಿಕ್ಕೆ ಸಜ್ಜಾಗಿದೆ. ಒಂದೊಂದೇ ಹಾಡುಗಳನ್ನು ರಿಲೀಸ್ ಮಾಡಿ  ಪ್ರಮೋಷನ್ ಮಾಡುತ್ತಿರುವ ಚಿತ್ರತಂಡ ಮೇ ತಿಂಗಳಲ್ಲಿ ಸಿನಿಮಾವನ್ನು ಬಿಗ್ ಸ್ಕ್ರೀನ್‌ಗೆ ತರುವ ಯೋಜನೆ ಹಾಕಿಕೊಂಡಿದೆ‌.  

Written by - YASHODHA POOJARI | Last Updated : Apr 8, 2022, 03:07 PM IST
  • ಮೇ ತಿಂಗಳಲ್ಲಿ ತೆರೆಮೇಲೆ ಬರಲಿದೆ 'ಖಾಸಗಿ ಪುಟಗಳು' ಸಿನಿಮಾ
  • ಯೂಟ್ಯೂಬ್‌ನಲ್ಲಿ 'ಅರೆಘಳಿಗೆ' ಹಾಡು ರಿಲೀಸ್‌
  • ಸಖತ್ ಸೌಂಡ್ ಮಾಡುತ್ತಿರುವ 'ಪರಂವಃ ಮ್ಯೂಸಿಕ್'ನಲ್ಲಿ ಮೂಡಿಬಂದ ಹಾಡು
ಮೇ ತಿಂಗಳಲ್ಲಿ ತೆರೆಗೆ ಬರ್ತಿದೆ 'ಖಾಸಗಿ ಪುಟಗಳು': ಯೂಟ್ಯೂಬ್‌ನಲ್ಲಿ 'ಅರೆಘಳಿಗೆ' ಹಾಡಿನ ದಿಬ್ಬಣ title=
Areghalige Nee song

ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ʼಖಾಸಗಿ ಪುಟಗಳುʼಸಿನಿಮಾದ ಮತ್ತೊಂದು ಮನಮೋಹಕ ಗಾನ ಲಹರಿ ಬಿಡುಗಡೆಯಾಗಿದೆ‌. ಅರೆಘಳಿಗೆ ಎಂಬ ಸಾಹಿತ್ಯದಿಂದ ಶುರುವಾಗುವ ಹಾಡಿಗೆ ಕೆ.ಕಲ್ಯಾಣ್ ಸಾಹಿತ್ಯ ಬರೆದಿದ್ದು, ವಾಸುಕಿ ವೈಭವ್  ಅದ್ಭುತ ಮ್ಯೂಸಿಕ್ ನೀಡಿದ್ದು,  ರಘುರಾಮ್ ಹಾಗೂ  ಸುನಿಧಿ ಕಂಠದಾನ ಮಾಡಿದ್ದಾರೆ. ಇಬ್ಬರು ಮುದ್ದಾದ ಜೋಡಿಯ ನಡುವಿನ ರೊಮ್ಯಾಂಟಿಕ್ ಗೀತೆ ಇದಾಗಿದ್ದು, 'ಪರಂವಃ ಮ್ಯೂಸಿಕ್' ನಲ್ಲಿ ಹಾಡು ಸಖತ್ ಸೌಂಡ್ ಮಾಡ್ತಿದೆ. ಈ ಮೊದಲು ತ್ರಿಲೋಕ್ ತ್ರಿವಿಕ್ರಮ ಬರೆದ ಮೊದಲ ಹಾಡು 'ಮುದ್ದು ಮುದ್ದಾಗಿ' ಎಲ್ಲರ ಮನಸೂರೆಗೊಳಿಸಿತ್ತು.

ಇದನ್ನು ಓದಿ: KGF-2 ಮುಂಗಡ ಬುಕ್ಕಿಂಗ್‌ನಿಂದ ಎಷ್ಟು ಕೋಟಿ ಕಲೆಕ್ಷನ್ ಮಾಡಿದೆ ಗೊತ್ತಾ?

ಮೇ ತಿಂಗಳಲ್ಲಿ ತೆರೆಗೆ ಬರಲಿದೆ ಸಿನಿಮಾ: ಎಸ್‌ವಿಎಂ ಮೋಶನ್‌ ಪಿಕ್ಚರ್ ಬ್ಯಾನರ್‌ನಲ್ಲಿ ಮಂಜು ವಿ. ರಾಜ್‌, ವೀಣಾ ವಿ. ರಾಜ್‌, ಮಂಜುನಾಥ್‌ ಡಿ. ಎಸ್‌ ನಿರ್ಮಾಣ ಮಾಡಿರುವ ಖಾಸಗಿ ಪುಟಗಳು ಸಿನಿಮಾ ತೆರೆಗೆ ಬರೋದಿಕ್ಕೆ ಸಜ್ಜಾಗಿದೆ. ಒಂದೊಂದೇ ಹಾಡುಗಳನ್ನು ರಿಲೀಸ್ ಮಾಡಿ  ಪ್ರಮೋಷನ್ ಮಾಡುತ್ತಿರುವ ಚಿತ್ರತಂಡ ಮೇ ತಿಂಗಳಲ್ಲಿ ಸಿನಿಮಾವನ್ನು ಬಿಗ್ ಸ್ಕ್ರೀನ್‌ಗೆ ತರುವ ಯೋಜನೆ ಹಾಕಿಕೊಂಡಿದೆ‌.

ಇದನ್ನು ಓದಿ: ಬಾಂಡ್ ರವಿ' ಸಾಥ್ ಕೊಟ್ಟ ಪೊಗರು ಪೋರ-ಯಂಗ್ ಟೈಗರ್... ಪ್ರಮೋದ್ ಬೆನ್ನು ತಟ್ಟಿದ ಧ್ರುವ-ವಿನೋದ್

ಯುವ ನಿರ್ದೇಶಕ ಸಂತೋಷ್‌ ಶ್ರೀಕಂಠಪ್ಪ ಆಕ್ಷನ್ ಕಟ್ ಹೇಳಿರುವ ಖಾಸಗಿ ಪುಟಗಳು ಸಿನಿಮಾದಲ್ಲಿ ನವ ಪ್ರತಿಭೆಗಳಾದ ವಿಶ್ವ ಮತ್ತು ಶ್ವೇತಾ ಡಿಸೋಜಾ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ. ಉಳಿದಂತೆ ಚೇತನ್‌ ದುರ್ಗಾ, ನಂದಕುಮಾರ್‌, ಶ್ರೀಧರ್ , ನಿರೀಕ್ಷಾ ಶೆಟ್ಟಿ, ಪ್ರಶಾಂತ್ ನಟನ, ಮೈಸೂರು ದಿನೇಶ್‌ ಮುಂತಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ವಿಶ್ವಜಿತ್‌ ರಾವ್‌ ಛಾಯಾಗ್ರಹಣ, ಆಶಿಕ್‌ ಕುಸುಗೊಳಿ ಸಂಕಲನವಿದೆ. ಚಿತ್ರದ ಹಾಡುಗಳಿಗೆ ವಾಸುಕಿ ವೈಭವ್‌ ಸಂಗೀತವಿದ್ದು,ಕೆ. ಕಲ್ಯಾಣ್‌, ಪ್ರಮೋದ್‌ ಮರವಂತೆ, ತ್ರಿಲೋಕ್ ತ್ರಿವಿಕ್ರಮ ಸಾಹಿತ್ಯವಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News