Arbaaz Shura Marriage: 56 ನೇ ವಯಸ್ಸಿನಲ್ಲಿ ಎರಡನೇ ಮದುವೆಯಾದ ಸಲ್ಮಾನ್ ಖಾನ್ ಸಹೋದರ!

Arbaaz Khan: ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಸಹೋದರ ಹಾಗೂ ಖ್ಯಾತ ನಟಿ ಮಲೈಕಾ ಅರೋರಾ ಅವರ ಮಾಜಿ ಪತಿ ಅರ್ಬಾಜ್ ಖಾನ್ ಮತ್ತೊಮ್ಮೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು.. ತಮ್ಮ ಗೆಳತಿ ಶುರಾ ಖಾನ್ ಅವರೊಂದಿಗೆ ಎರಡನೇ ಮದುವೆಯಾಗಿದ್ದಾರೆ..

Written by - Savita M B | Last Updated : Dec 25, 2023, 12:52 PM IST
  • ಅರ್ಭಾಜ್ ಖಾನ್ ಈ ಹಿಂದೆ ಬೋಲ್ಡ್ ಬ್ಯೂಟಿ ಮಲೈಕಾ ಅರೋರಾ ಅವರನ್ನು ಮದುವೆಯಾಗಿದ್ದರು
  • ಸುಮಾರು 19 ವರ್ಷಗಳ ದಾಂಪತ್ಯ ಜೀವನಕ್ಕೆ ಮಗನನ್ನು ಪಡೆದು ವಿಚ್ಛೇದನ ಪಡೆದು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು...
  • ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಸಹೋದರ ಅರ್ಬಾಜ್ ಖಾನ್
Arbaaz Shura Marriage: 56 ನೇ ವಯಸ್ಸಿನಲ್ಲಿ ಎರಡನೇ ಮದುವೆಯಾದ ಸಲ್ಮಾನ್ ಖಾನ್ ಸಹೋದರ!   title=

Salman Khan Brother: ಅರ್ಭಾಜ್ ಖಾನ್ ಈ ಹಿಂದೆ ಬೋಲ್ಡ್ ಬ್ಯೂಟಿ ಮಲೈಕಾ ಅರೋರಾ ಅವರನ್ನು ಮದುವೆಯಾಗಿದ್ದರು ಎಂಬುದು ಗೊತ್ತೇ ಇದೆ. ಸುಮಾರು 19 ವರ್ಷಗಳ ದಾಂಪತ್ಯ ಜೀವನಕ್ಕೆ ಮಗನನ್ನು ಪಡೆದು ವಿಚ್ಛೇದನ ಪಡೆದು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು... 

 ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಸಹೋದರ ಅರ್ಬಾಜ್ ಖಾನ್... ನಟ ಮತ್ತು ಚಲನಚಿತ್ರ ನಿರ್ಮಾಪಕರಾಗಿ ಹೆಸರುವಾಸಿಯಾಗಿದ್ದಾರೆ.. ಇವರು ನಿನ್ನೆ (ಸೆಪ್ಟೆಂಬರ್ 24) ತಮ್ಮ ಗೆಳತಿ ಶುರಾ ಖಾನ್ ಅವರನ್ನು ವಿವಾಹವಾಗಿದ್ದಾರೆ... ಸದ್ಯ ಅವರು ತಮ್ಮ ಮದುವೆಯ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.. ಕೆಲವು ಸೆಲೆಬ್ರಿಟಿಗಳು ಮತ್ತು ಕುಟುಂಬದ ಸ್ನೇಹಿತರು ಮಾತ್ರ ಮದುವೆಗೆ ಹಾಜರಾಗಿದ್ದರೆ, ಹಲವರು... ಅರ್ಬಾಜ್ ಮತ್ತು ಶುರಾ ಖಾನ್ ಅವರನ್ನು ಸೋಷಿಯಲ್‌ ಮಿಡಿಯಾದಲ್ಲಿಯೇ ಅಭಿನಂದಿಸಿದ್ದಾರೆ.

ಇದನ್ನೂ ಓದಿ-ಹೊಸ ವ್ಯವಹಾರದಲ್ಲಿ ರಾಮ್ ಚರಣ್...ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ ಗೆ ಗ್ಲೋಬಲ್ ಸ್ಟಾರ್ ಎಂಟ್ರಿ!

ಇನ್ನು ಅರ್ಬಾಜ್‌ ಪತ್ನಿ ಶೂರಾ ಖಾನ್ ಜೆನಿಲಿಯಾ ಮತ್ತು ರವೀನಾ ಟಂಡನ್ ಅವರಂತಹ ಅನೇಕ ಬಾಲಿವುಡ್‌ ಸೆಲೆಬ್ರಿಟಿಗಳಿಗೆ ಮೇಕಪ್ ಕಲಾವಿದರಾಗಿ ಕೆಲಸ ಮಾಡಿದ್ದಾರೆ. ಅರ್ಭಾಜ್ ಮತ್ತು ಶುರಾ ಅವರ ವಿವಾಹ ಸಮಾರಂಭದಲ್ಲಿ ಸಹೋದರರಾದ ಸಲ್ಮಾನ್ ಮತ್ತು ಸೊಹೈಲ್ ಭಾಗವಹಿಸಿದ್ದರು. ಇದೀಗ ಇವರೆಲ್ಲ ಮದುವೆ ಸಮಾರಂಭದಲ್ಲಿ ಮಿಂಚುತ್ತಿರುವ ದೃಶ್ಯಗಳು ವೈರಲ್ ಆಗುತ್ತಿವೆ...

ಆದರೆ ಇದೀಗ ಅರ್ಭಾಜ್ ಖಾನ್ ಮದುವೆಯ ನಂತರ ನೆಟ್ಟಿಗರು ಮಲೈಕಾ ಬಗ್ಗೆ ಚರ್ಚಿಸುತ್ತಿದ್ದಾರೆ. ಆದರೆ ಅರ್ಭಾಜ್ ಜೊತೆಗಿನ ವಿಚ್ಚೇಧನದ ಬಳಿಕ ನಟಿ ಮಲೈಕಾ ತನಗಿಂತ ಚಿಕ್ಕವನಾದ ಅರ್ಜುನ್ ಕಪೂರ್ ಜೊತೆ ವಾಸಿಸುವುದರ ಜೊತೆಗೆ ಆಗ್ಗಾಗ್ಗೆ ಡೇಟಿಂಗ್‌ ವಿಚಾರವಾಗಿ ಸುದ್ದಿಯಾಗುತ್ತಿರುತ್ತಾರೆ..

ಇದನ್ನೂ ಓದಿ-ಸಲಾರ್‌ ಸುಂದರಿ ಶ್ರೀಯಾ ರೆಡ್ಡಿ ತಂದೆ ಯಾರು ಗೊತ್ತಾ? ಆ ಭಾರತೀಯ ಕ್ರಿಕೆಟಿಗನ ಮಗಳು ಈ ಶಿವಗಾಮಿ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News