Anushka shetty: ರಾಣಿ ಅಬ್ಬಕ್ಕ ಅವತಾರದಲ್ಲಿ ಕರಾವಳಿ ಸುಂದರಿ.. ಪೋಸ್ಟರ್ ವೈರಲ್

Anushka Shetty in Abbakka Avatar: ಕೊರೋನಾ ಹಾವಳಿಗೂ ಮುನ್ನ ಮಂಸೋರೆ ರಾಣಿ ಅಬ್ಬಕ್ಕ ಸಿನಿಮಾ ಘೋಷಣೆ ಮಾಡಲು ಸಿದ್ದರಾಗಿದ್ದರು. ಅಷ್ಟರಲ್ಲಿ ಲಾಕ್‌ಡೌನ್‌ ಆಗಿ ಅದು ಸಾಧ್ಯವಾಗಲಿಲ್ಲ. ಆದರೆ ಇದೀಗ ಅಬ್ಬಕ್ಕ ಅವತಾರದಲ್ಲಿ ಅನುಷ್ಕಾ ಶೆಟ್ಟಿ ಪೋಸ್ಟರ್ ರಿಲೀಸ್ ಆಗಿದೆ.

Written by - Savita M B | Last Updated : Sep 22, 2023, 03:19 PM IST
  • ಕರಾವಳಿ ಸುಂದರಿ ಅನುಷ್ಕಾ ಶೆಟ್ಟಿ ಟಾಲಿವುಡ್‌, ಕಾಲಿವುಡ್‌ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
  • ಕಡಲೂರ ಚೆಲುವೆ ಕನ್ನಡ ಸಿನಿಮಾಗಳಲ್ಲಿ ನಟಿಸಿಲ್ಲ ಎನ್ನುವುದು ಎಷ್ಟೋ ಅಭಿಮಾನಿಗಳ ಬೇಸರ.
  • ಈ ಹಿಂದೆ ಅನುಷ್ಕಾ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿಗಳು ಹರಿದಾಡಿದ್ದವು.
Anushka shetty: ರಾಣಿ ಅಬ್ಬಕ್ಕ ಅವತಾರದಲ್ಲಿ ಕರಾವಳಿ ಸುಂದರಿ.. ಪೋಸ್ಟರ್ ವೈರಲ್ title=

Anushka Shetty: ಕರಾವಳಿ ಸುಂದರಿ ಅನುಷ್ಕಾ ಶೆಟ್ಟಿ ಟಾಲಿವುಡ್‌, ಕಾಲಿವುಡ್‌ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಆದರೆ ಈ ಕಡಲೂರ ಚೆಲುವೆ ಕನ್ನಡ ಸಿನಿಮಾಗಳಲ್ಲಿ ನಟಿಸಿಲ್ಲ ಎನ್ನುವುದು ಎಷ್ಟೋ ಅಭಿಮಾನಿಗಳ ಬೇಸರ. 

ಇನ್ನು ತೆಲುಗಿನ ಸೂಪರ್‌ ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿಸಿದ ಅನುಷ್ಕಾ ಶೆಟ್ಟಿ ನಂತರ ಯಶಸ್ಸಿನ ಮೆಟ್ಟಿಲಲ್ಲೇ ನಿಂತಿದ್ದಾರೆ. ಸಾಕಷ್ಟು ಸೂಪರ್‌ ಹಿಟ್‌ ಸಿನಿಮಾಗಳನ್ನು ನೀಡಿ ಅಭಿಮಾನಿಗಳ ಮನಸ್ಸಲ್ಲಿ ಜಾಗ ಗಿಟ್ಟಿಸಿಕೊಂಡಿದ್ದಾರೆ. ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಸಾಕಷ್ಟು ಸ್ಟಾರ್‌ ಜೊತೆ ತೆರೆಹಂಚಿಕೊಂಡ ನಟಿ ರಾಜಮೌಳಿ ನಿರ್ದೇಶನದ 3 ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿರೋದು ವಿಶೇಷ. 

ಅನುಷ್ಕಾ ಶೆಟ್ಟಿ ಗ್ಲಾಮರ್‌ಗೂ ಸೈ ಆಕ್ಟಿಂಗ್‌ಗೂ ಸೈ ಎನ್ನುವ ನಟಿ. ಆದರೆ ಇತ್ತೀಚೆನ ದಿನಗಳಲ್ಲಿ ಇವರು ಅಷ್ಟಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಇನ್ನು ಸದ್ಯ ಇವರು 'ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್‌ ಸಿಕ್ಕಿದೆ. 

ಈ ಹಿಂದೆ ಅನುಷ್ಕಾ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿಗಳು ಹರಿದಾಡಿದ್ದವು. ಆದರೆ ಯಾವುದೂ ಸಾಧ್ಯವಾಗಲಿಲ್ಲ. ರಾಣಿ ಅಬ್ಬಕ್ಕ ಪಾತ್ರದಲ್ಲಿ ಕರಾವಳಿ ಸುಂದರಿ ಕಾಣಿಸಿಕೊಳ್ಳುತ್ತಾರೆ ಎನ್ನುವ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ತುಳುನಾಡಿನ ರಾಣಿ ಅಬ್ಬಕ್ಕ ಅವರ ಜೀವನದ ಕುರಿತು ಸಿನಿಮಾ ಮಾಡಲು ಸಾಕಷ್ಟು ಜನ ಪ್ರಯತ್ನಪಟ್ಟಿದ್ದಾರೆ ಅದರಲ್ಲಿ ನಿರ್ದೇಶಕ ಮಂಸೋರೆ ಕೂಡ ಒಬ್ಬರು. 

ಇದನ್ನೂ ಓದಿ-ಈ ಫೋಟೋದಲ್ಲಿ ಸ್ಟಾರ್‌ ನಟನ ಚಿತ್ರವಿದೆ..! ಯಾರೆಂದು ಗುರುತಿಸಬಲ್ಲಿರಾ..? ಕಾಮೆಂಟ್‌ ಮಾಡಿ
 
ಕೊರೋನಾ ಬರುವ ಮುನ್ನ  ಮಂಸೋರೆ ರಾಣಿ ಅಬ್ಬಕ್ಕ ಸಿನಿಮಾ ಮಾಡುವುದಾಗಿ ಘೋಷಣೆ ಮಾಡಲು ರೆಡಿಯಾಗಿದ್ದರು. ಆದರೆ ಅಷ್ಟರಲ್ಲಿ ಲಾಕ್‌ಡೌನ್‌ ಆಗಿದ್ದರಿಂದ ಅದು ಆಗಲಿಲ್ಲ. ಆ ಚಿತ್ರದಲ್ಲಿ ಖ್ಯಾತ ನಟಿ, ಕಡಲೂರ ಚೆಲುವೆ ನಟಿಸುತ್ತಾರೆ ಎನ್ನಲಾಗಿತ್ತು. ಆದರೆ ಇದೀಗ ಅಬ್ಬಕ್ಕ ಅವತಾರದಲ್ಲಿ ಅನುಷ್ಕಾ ಶೆಟ್ಟಿ ಪೋಸ್ಟರ್‌ ವೈರಲ್‌ ಆಗಿದ್ದು ಇದನ್ನು ನೋಡಿದ ನೆಟ್ಟಿಗರು ಕನ್‌ಫ್ಯೂಸ್ ಆಗಿದ್ದಾರೆ.
 
ಕನ್‌ಫ್ಯೂಸ್ ಆಗಬೇಡಿ...ಏಕೆಂದರೆ ಇದು ಮಂಸೋರೆ ನಿರ್ದೇಶನದ 'ರಾಣಿ ಅಬ್ಬಕ್ಕ' ಸಿನಿಮಾ ಪೋಸ್ಟರ್ ಅಲ್ಲ.  ಇದು ಅನುಷ್ಕಾ ಶೆಟ್ಟಿ  ಅಬ್ಬಕ್ಕ ಅವತಾರದಲ್ಲಿ ಹೇಗೆ ಕಾಣಬಹುದು ಎಂದು ಗ್ರಾಫಿಕ್ಸ್ ಡಿಸೈನರ್ ದೀಪೇಶ್ ಉಪ್ಪಾಲ ಡಿಸೈನ್‌ ಮಾಡಿರುವ AI ಆರ್ಟ್ ವರ್ಕ್.

ಸದ್ಯ ಈ ಪೋಸ್ಟರ್‌ ಅಭಿಮಾನಿಗಳ ಗಮನ ಸೆಳೆದಿದ್ದು, ಅನುಷ್ಕಾ ಶೆಟ್ಟಿ  ಕರಾವಳಿಯವರೇ ಆಗಿರುವುದರಿಂದ ಇಂತಹ ಪವರ್‌ಫುಲ್‌ ಪಾತ್ರಗಳು ಅವರಿಗೆ ಒಪ್ಪುತ್ತವೆ. ಹಾಗೆಯೇ ಇಂತಹ ಮಹಾನ್ ನಾಯಕಿಯ ಪಾತ್ರದಲ್ಲಿ ಸ್ವೀಟಿ ನಟಿಸಬೇಕು ಎನ್ನುವುದು ಎಷ್ಟೋ ಅಭಿಮಾನಿಗಳ ಆಸೆ.

ಇದನ್ನೂ ಓದಿ-ರಶ್ಮಿಕಾ ಎಕ್ಸ್​ ಬಾಯ್​​ ಫ್ರೆಂಡ್ ಟ್ಯಾಗ್... ರಕ್ಷಿತ್‌ ಶೆಟ್ಟಿ ಅಚ್ಚರಿಯ ಹೇಳಿಕೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

Trending News