KBC 16 : ಕೋಟ್ಯಾಧಿಪತಿಗಳಾಗಲು KBC ಶೋನಲ್ಲಿ ಭಾಗವಹಿಸಬೇಕೇ..? ಹಾಗಿದ್ರೆ ತಕ್ಷಣ ಹೀಗೆ ಮಾಡಿ..

Kaun Banega Crorepati 16 start date : ಕೌನ್ ಬನೇಗಾ ಕರೋಡ್ಪತಿ ಶೋ ಅತೀ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಮಿಲಿಯನೇರ್ ಆಗಲು ಬಯಸುವ ಬುದ್ದಿವಂತಿಗೆ ಇದು ಸುವರ್ಣ ಅವಕಾಶ. ಕೌನ್ ಬನೇಗಾ ಕರೋಡ್ಪತಿ ಶೋನ ತಯಾರಕರು KBC ಯ ಹೊಸ ಸೀಸನ್ ಅನ್ನು ಘೋಷಿಸಿದ್ದಾರೆ. ಈ ಬಾರಿಯೂ ಈ ರಸಪ್ರಶ್ನೆ ಆಧಾರಿತ ರಿಯಾಲಿಟಿ ಶೋವನ್ನು ಅಮಿತಾಬ್ ಬಚ್ಚನ್ ನಡೆಸಿಕೊಡಲಿದ್ದಾರೆ.

Written by - Krishna N K | Last Updated : Apr 18, 2024, 09:14 PM IST
    • ಕೌನ್ ಬನೇಗಾ ಕರೋಡ್ಪತಿ ಶೋ ಅತೀ ಶೀಘ್ರದಲ್ಲೇ ಪ್ರಾರಂಭ
    • ಮಿಲಿಯನೇರ್ ಆಗಲು ಬಯಸುವ ಬುದ್ದಿವಂತಿಗೆ ಇದು ಸುವರ್ಣ ಅವಕಾಶ.
    • ಇದು ಕೌನ್ ಬನೇಗಾ ಕರೋಡ್ಪತಿಯ 16 ನೇ ಸೀಸನ್ ಆಗಿರುತ್ತದೆ.
KBC 16 : ಕೋಟ್ಯಾಧಿಪತಿಗಳಾಗಲು KBC ಶೋನಲ್ಲಿ ಭಾಗವಹಿಸಬೇಕೇ..? ಹಾಗಿದ್ರೆ ತಕ್ಷಣ ಹೀಗೆ ಮಾಡಿ.. title=

Amitabh Bachchan KBC : ಅತೀ ಶೀಘ್ರದಲ್ಲೇ ಕೌನ್ ಬನೇಗಾ ಕರೋಡ್ಪತಿ ಶೋ ಮತ್ತೊಮ್ಮೆ ಪ್ರಾರಂಭವಾಗಲಿದ್ದು, KBC ತಂಡ ಹೊಸ ಸೀಸನ್ ಅನ್ನು ಘೋಷಿಸಿದೆ. ಈ ಜನಪ್ರಿಯ ಕಾರ್ಯಕ್ರಮವನ್ನು ದಿಗ್ಗಜ ನಟ ಅಮಿತಾಬ್ ಬಚ್ಚನ್ ಅವರು ನಡೆಸಿಕೊಡಲಿದ್ದಾರೆ. ಇದು ಕೌನ್ ಬನೇಗಾ ಕರೋಡ್ಪತಿಯ 16 ನೇ ಸೀಸನ್ (Kaun Banega Crorepati Season 16 ) ಆಗಿರುತ್ತದೆ. 

ಹೌದು.. ಈ ಕುರಿತು ಕಾರ್ಯಕ್ರಮದ ನಿರ್ಮಾಪಕರು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಳ್ಳುವ ಮೂಲಕ KBC ಯ ಹೊಸ ಸೀಸನ್ ಅನ್ನು ಘೋಷಿಸಿದ್ದಾರೆ. ಈ ವೀಡಿಯೊ 15 ನೇ ಸೀಸನ್‌ನ ಕೊನೆಯ ಸಂಚಿಕೆಯ ಕ್ಲಿಪ್ ಅನ್ನು ತೋರಿಸುತ್ತದೆ. ಅಲ್ಲದೆ, KBC ಯ 16 ನೇ ಸೀಸನ್‌ಗಾಗಿ ನೋಂದಣಿಗಳು ಯಾವಾಗ ಪ್ರಾರಂಭವಾಗುತ್ತವೆ ಎಂಬುದನ್ನು ಸಹ ತಿಳಿಸುತ್ತದೆ.

ಇದನ್ನೂ ಓದಿ:ಡಿಂಪಲ್ ಕ್ವೀನ್ ರಚಿತಾ ರಾಮ್‌ ತಂಗಿ ಯಾರ್‌ ಗೊತ್ತೆ..! ಈಕೆ ತಮಿಳು ಸಿನಿ ರಂಗದ ಟಾಪ್‌ ಹಿರೋಯಿನ್‌

ಈ ವೀಡಿಯೊದ ಶೀರ್ಷಿಕೆಯಲ್ಲಿ, ಜನರು ಈ ಬಾರಿಯ ಕಾರ್ಯಕ್ರಮವನ್ನು ತುಂಬಾ ಇಷ್ಟಪಡುತ್ತಾರೆ ಎಂದು ಬರೆಯಲಾಗಿದೆ. ಮತ್ತೊಮ್ಮೆ ಕೌನ್ ಬನೇಗಾ ಕರೋಡ್ಪತಿ ಶೋ ಪ್ರಸಾರವಾಗಲಿದೆ. ಕೌನ್ ಬನೇಗಾ ಕರೋಡ್‌ಪತಿ ಸೀಸನ್ 16 ನೋಂದಣಿ ಏಪ್ರಿಲ್ 26 ರಂದು ರಾತ್ರಿ 9:00 ಗಂಟೆಗೆ ಪ್ರಾರಂಭವಾಗುತ್ತದೆ. 

ಕೆಬಿಸಿಯ (KBC 16) ಹೊಸ ಸೀಸನ್ ಆರಂಭವಾಗಲಿದೆ ಎಂಬ ಘೋಷಣೆಯೊಂದಿಗೆ ಜನರೂ ಉತ್ಸುಕರಾಗಿದ್ದಾರೆ, ಸಾಮಾಜಿಕ ಜಾಲತಾಣಗಳಲ್ಲಿ ಕೆಬಿಸಿ ಬಗ್ಗೆ ಕಾಮೆಂಟ್ ಮಾಡುವ ಮೂಲಕ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಕೆಲವು ಬಳಕೆದಾರರು ಶೋ ಅನ್ನು ಮತ್ತೆ ಪ್ರಾರಂಭಿಸುತ್ತಿರುವುದಕ್ಕೆ ನಿರ್ಮಾಪಕರಿಗೆ ಧನ್ಯವಾದ ಹೇಳುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News