“ನಾನು ವಿದಾಯ ಹೇಳುತ್ತಿದ್ದೇನೆ” ಎನ್ನುತ್ತಾ ಕಣ್ಣೀರಿಟ್ಟ ಅಮಿತಾಬ್! ಐಶ್-ಅಭಿ ಡಿವೋರ್ಸ್ ಸುದ್ದಿ ಬೆನ್ನಲ್ಲೇ ಹೀಗಂದಿದ್ದೇಕೆ ಬಚ್ಚನ್?

Amitabh Bachchan KBC retirement: ಕೌನ್ ಬನೇಗಾ ಕರೋಡ್ಪತಿಯ ಪ್ರತಿಯೊಂದು ಸಂಚಿಕೆಯನ್ನು ಹೇಗೆ ವಿಶೇಷವಾಗಿಸಬೇಕೆಂದು ಅಮಿತಾಬ್ ಬಚ್ಚನ್ ಪ್ಲಾನ್ ಮಾಡಿಕೊಳ್ಳುತ್ತಿದ್ದರಂತೆ. 

Written by - Bhavishya Shetty | Last Updated : Dec 31, 2023, 11:20 PM IST
    • ಸೋನಿ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಕೌನ್ ಬನೇಗಾ ಕರೋಡ್‌ಪತಿ
    • ಆಗಸ್ಟ್ 14, 2023 ರಂದು ಪ್ರಾರಂಭವಾದ ಕೌನ್ ಬನೇಗಾ ಕರೋಡ್ಪತಿ ಸೀಸನ್ 15
    • ಕೊನೆಯ ಬಾರಿಗೆ ವಿದಾಯ ಹೇಳುತ್ತಿದ್ದೇನೆ” ಎಂದ ಅಮಿತಾಬ್
“ನಾನು ವಿದಾಯ ಹೇಳುತ್ತಿದ್ದೇನೆ” ಎನ್ನುತ್ತಾ ಕಣ್ಣೀರಿಟ್ಟ ಅಮಿತಾಬ್! ಐಶ್-ಅಭಿ ಡಿವೋರ್ಸ್ ಸುದ್ದಿ ಬೆನ್ನಲ್ಲೇ ಹೀಗಂದಿದ್ದೇಕೆ ಬಚ್ಚನ್? title=
Amitabh Bachchan KBC retirement

Amitabh Bachchan KBC retirement: ಸೋನಿ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಕೌನ್ ಬನೇಗಾ ಕರೋಡ್‌ಪತಿ ಹಲವಾರು ವರ್ಷಗಳಿಂದ ಪ್ರೇಕ್ಷಕರ ನೆಚ್ಚಿನ ಕಾರ್ಯಕ್ರಮವಾಗಿ ಉಳಿದಿದೆ. ಪ್ರತಿ ವರ್ಷ ಪ್ರೇಕ್ಷಕರು ಹೊಸ ಸೀಸನ್‌’ಗಾಗಿ ಕಾತರದಿಂದ ಕಾಯುತ್ತಾರೆ. ಕಳೆದ 23 ವರ್ಷಗಳಲ್ಲಿ, ಒಂದು ಸೀಸನ್ ಹೊರತುಪಡಿಸಿ ಮಿಕ್ಕೆಲ್ಲಾ ಸೀಸನ್‌’ಗಳನ್ನು ಅಮಿತಾಬ್ ಹೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: 2024ರ ವಿಶ್ವಕಪ್’ಗೆ ತಂಡ ಪ್ರಕಟಿಸಿದ ಕೋಚ್: ಈ ನಾಲ್ವರು ಹೊಸ ಮುಖಗಳಿಗೆ ಮಣೆ ಹಾಕಿದ ಆಯ್ಕೆ ಸಮಿತಿ

ಕೌನ್ ಬನೇಗಾ ಕರೋಡ್ಪತಿಯ ಪ್ರತಿಯೊಂದು ಸಂಚಿಕೆಯನ್ನು ಹೇಗೆ ವಿಶೇಷವಾಗಿಸಬೇಕೆಂದು ಅಮಿತಾಬ್ ಬಚ್ಚನ್ ಪ್ಲಾನ್ ಮಾಡಿಕೊಳ್ಳುತ್ತಿದ್ದರಂತೆ. ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಳ್ಳುತ್ತಾ, ಸ್ಪರ್ಧಿಗಳೊಂದಿಗೆ ತಮಾಷೆ ಮಾಡುತ್ತಾ, ಹೀಗೆ ಕಾರ್ಯಕ್ರಮದ ಟಿಆರ್‌’ಪಿಯನ್ನು ಮೇಲಕ್ಕೆ ಕೊಂಡೊಯ್ಯುವಲ್ಲಿ ಬಿಗ್ ಬಿ ದೊಡ್ಡ ಪಾತ್ರ ವಹಿಸಿದ್ದರು.

ಇದನ್ನೂ ಓದಿ: ಇದೇ ಒಂದು ಕಾರಣಕ್ಕೆ ಬಿಗ್ ಬಾಸ್ ಮನೆಯಲ್ಲಿ ನಾನ್ ವೆಜ್ ತಿನ್ನಲ್ವಂತೆ ಸಂಗೀತಾ! ಕಿಚ್ಚನ ಮುಂದೆ ಸತ್ಯ ಹೇಳಿದ ನಟಿ

ಆಗಸ್ಟ್ 14, 2023 ರಂದು ಪ್ರಾರಂಭವಾದ ಕೌನ್ ಬನೇಗಾ ಕರೋಡ್ಪತಿ ಸೀಸನ್ 15, ನಾಲ್ಕು ತಿಂಗಳ ನಂತರ ಅಂದರೆ ಡಿಸೆಂಬರ್ 29, 2023 ರಂದು ಅಂತಿಮ ಹಂತವನ್ನು ತಲುಪಿದೆ. ಅಂತಿಮ ಹಂತದ ಪ್ರೋಮೋ ಹೊರಬಿದ್ದಿದ್ದು, ಇದರಲ್ಲಿ ಅಮಿತಾಬ್ ಬಚ್ಚನ್ ಭಾವುಕರಾಗಿ, “ಕೊನೆಯ ಬಾರಿಗೆ ವಿದಾಯ ಹೇಳುತ್ತಿದ್ದೇನೆ” ಎಂದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News