Alia Bhatt Fact Check: ಮತ್ತೆ ಗರ್ಭಿಣಿಯಾದ್ರಾ ಆಲಿಯಾ ಭಟ್‌? ಎರಡನೇ ಮಗುವಿನ ನಿರೀಕ್ಷೆಯಲ್ಲಿ ಸ್ಟಾರ್‌‌ ಕಪಲ್!

Alia Bhatt pregnant : ಬಾಲಿವುಡ್ ಕ್ಯೂಟ್‌ ಕಪಲ್‌ ರಣಬೀರ್‌ ಕಪೂರ್‌ ಮತ್ತು ಆಲಿಯಾ ಭಟ್‌ ಶೀಘ್ರದಲ್ಲೇ ಮತ್ತೊಂದು ಶುಭ ಸಮಾಚಾರವನ್ನು ಅಭಿಮಾನಿಗಳಿಗೆ ಹೇಳಲಿದ್ದಾರೆ. ಇದೀಗ ಆಲಿಯಾ ಮತ್ತೊಮ್ಮೆ ತಾಯಿಯಾಗುತ್ತಿದ್ದಾರೆ ಎಂಬ ವಿಚಾರ ಹರಿದಾಡುತ್ತಿದೆ. 

Written by - Chetana Devarmani | Last Updated : Jan 23, 2023, 11:51 AM IST
  • ಬಾಲಿವುಡ್ ಕ್ಯೂಟ್‌ ಕಪಲ್‌ ರಣಬೀರ್‌ ಕಪೂರ್‌ ಮತ್ತು ಆಲಿಯಾ ಭಟ್‌
  • ಮತ್ತೆ ಗರ್ಭಿಣಿಯಾದ್ರಾ ಆಲಿಯಾ?
  • ಎರಡನೇ ಮಗುವಿನ ನಿರೀಕ್ಷೆಯಲ್ಲಿ ಸ್ಟಾರ್‌‌ ಕಪಲ್!
Alia Bhatt Fact Check: ಮತ್ತೆ ಗರ್ಭಿಣಿಯಾದ್ರಾ ಆಲಿಯಾ ಭಟ್‌? ಎರಡನೇ ಮಗುವಿನ ನಿರೀಕ್ಷೆಯಲ್ಲಿ ಸ್ಟಾರ್‌‌ ಕಪಲ್!  title=
Alia Bhatt

Alia Bhatt pregnant : ಬಾಲಿವುಡ್ ಕ್ಯೂಟ್‌ ಕಪಲ್‌ ರಣಬೀರ್‌ ಕಪೂರ್‌ ಮತ್ತು ಆಲಿಯಾ ಭಟ್‌ ಶೀಘ್ರದಲ್ಲೇ ಮತ್ತೊಂದು ಶುಭ ಸಮಾಚಾರವನ್ನು ಅಭಿಮಾನಿಗಳಿಗೆ ಹೇಳಲಿದ್ದಾರೆ. ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಪ್ರೀತಿಸುತ್ತಿದ್ದ ರಣಬೀರ್‌ ಕಪೂರ್‌ ಮತ್ತು ಆಲಿಯಾ ಭಟ್‌ ಏಪ್ರಿಲ್ 14, 2022 ರಂದು ವಿವಾಹವಾದರು. ಇದೀಗ ಅವರಿಗೆ ಒಬ್ಬ ಮುದ್ದಾದ ಮಗಳಿದ್ದಾಳೆ. ಮದುವೆಗೆ ಮುಂಚಿತವಾಗಿ ಆಲಿಯಾ ಗರ್ಭಿಣಿಯಾಗಿದ್ದಾಳೆ ಎಂದು ವರದಿಯಾಗಿದೆ.

ಇದನ್ನೂ ಓದಿ : Lakshmana: ಕನ್ನಡದ ಖ್ಯಾತ ನಟ ಲಕ್ಷ್ಮಣ ವಿಧಿವಶ

ಆಲಿಯಾ ನವೆಂಬರ್ 6 ರಂದು ಮೊದಲ ಮಗುವಿಗೆ ಜನ್ಮ ನೀಡಿದರು. ಮದುವೆಯಾದ ಎರಡು ತಿಂಗಳ ನಂತರ ಆಲಿಯಾ ತಾನು ಗರ್ಭಿಣಿಯಾಗಿರುವ ವಿಚಾರ ತಿಳಿಸಿದರು. ಈ ಸಂತಸದ ಸುದ್ದಿಯನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಸೋನೋಗ್ರಫಿ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ತಿಳಿಸಿದರು. ಹಾಗೆ, ಏಪ್ರಿಲ್ 14 ಕ್ಕೆ ಮದುವೆಯಾಗಿ ಏಳು ತಿಂಗಳುಗಳು ಪೂರ್ಣಗೊಳ್ಳುವ ಮೊದಲೇ ಆಲಿಯಾ ತನ್ನ ಮೊದಲ ಮಗುವಿಗೆ ಜನ್ಮ ನೀಡಿದರು.  

ಇದೀಗ ಆಲಿಯಾ ಮತ್ತೊಮ್ಮೆ ತಾಯಿಯಾಗುತ್ತಿದ್ದಾರೆ ಎಂಬ ವಿಚಾರ ಹರಿದಾಡುತ್ತಿದೆ. ಬಾಲಿವುಡ್ ಮಾಧ್ಯಮದಲ್ಲಿ ಕೆಲವು ವದಂತಿಗಳು ಹರಿದಾಡುತ್ತಿವೆ. ಆದರೆ ಈ ಬಗ್ಗೆ ಆಲಿಯಾ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಆಲಿಯಾ ನಿಜವಾಗಿಯೂ ಗರ್ಭಿಣಿಯಾಗಿದ್ದರೆ, ಎರಡನೇ ಮಗುವಿಗೆ ಒಂದು ವರ್ಷದೊಳಗೆ ಜನ್ಮ ನೀಡುತ್ತಾರೆ. ಮಕ್ಕಳಿಗಿಂತ ವೃತ್ತಿಜೀವನವು ಮುಖ್ಯವಲ್ಲ ಎಂದು ಆಲಿಯಾ ಈಗಾಗಲೇ ಹೇಳಿದ್ದಾರೆ.   

ಇದನ್ನೂ ಓದಿ : Singer Mangli: "ನನ್ನ ಮೇಲೆ ಯಾವುದೇ ದಾಳಿ ನಡೆದಿಲ್ಲ.." ಮಂಗ್ಲಿ ಬಿಚ್ಚಿಟ್ರು ಅಸಲಿ ವಿಚಾರ.!

ಆಲಿಯಾ ಭಟ್ ತನ್ನ ಬಟ್ಟೆ ಬ್ರಾಂಡ್‌ಗಾಗಿ ಹೊಸ ಮ್ಯಾಟರ್ನಿಟಿ ಕಲೆಕ್ಷನ್‌ ಪ್ರಾರಂಭಿಸಿದ್ದು, ಇದು ನಟಿಯ ಎರಡನೇ ಗರ್ಭಧಾರಣೆಯ ಬಗ್ಗೆ ಊಹಾಪೋಹಗಳಿಗೆ ಕಾರಣವಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News