Bholaa teaser : ಭೋಲಾ ಟೀಸರ್‌ ರಿಲೀಸ್‌.. ಅಜಯ್‌ ಹೈ-ಫ್ಲೈಯಿಂಗ್ ಆಕ್ಷನ್‌ಗೆ ಪ್ರೇಕ್ಷಕ ಫಿದಾ..!

ಬಾಲಿವುಡ್‌ ಸ್ಟಾರ್‌ ನಟ ಅಜಯ್ ದೇವಗನ್ ಅಭಿನಯದ ಭೋಲಾ ಚಿತ್ರ ಟೀಸರ್‌ ರಿಲೀಸ್‌ ಆಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಕಾಲಿವುಡ್‌ ಬ್ಲಾಕ್ಬಸ್ಟರ್‌ ಸಿನಿಮಾ ʼಕೈಥಿʼಯ ಹಿಂದಿ ರಿಮೇಕ್ ಬೋಲಾ. ತಮಿಳು ಕೈಥಿಯಲ್ಲಿ ಕಾರ್ತಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಹಿಂದಿ ರಿಮೇಕ್‌ ಭೋಲಾದಲ್ಲಿ ಅಜಯ್ ಮಿಂಚಿದ್ದಾರೆ. 

Written by - Krishna N K | Last Updated : Jan 24, 2023, 03:58 PM IST
  • ಬಾಲಿವುಡ್‌ ಸ್ಟಾರ್‌ ನಟ ಅಜಯ್ ದೇವಗನ್ ಅಭಿನಯದ ಭೋಲಾ ಚಿತ್ರ ಟೀಸರ್‌ ರಿಲೀಸ್‌.
  • ಕಾಲಿವುಡ್‌ ಬ್ಲಾಕ್ಬಸ್ಟರ್‌ ಸಿನಿಮಾ ʼಕೈಥಿʼಯ ಹಿಂದಿ ರಿಮೇಕ್ ಬೋಲಾ.
  • ಹಿಂದಿ ರಿಮೇಕ್‌ ಭೋಲಾದಲ್ಲಿ ಅಜಯ್ ಮಿಂಚಿದ್ದಾರೆ.
Bholaa teaser : ಭೋಲಾ ಟೀಸರ್‌ ರಿಲೀಸ್‌.. ಅಜಯ್‌ ಹೈ-ಫ್ಲೈಯಿಂಗ್ ಆಕ್ಷನ್‌ಗೆ ಪ್ರೇಕ್ಷಕ ಫಿದಾ..! title=

Ajay Devgan Bholaa teaser : ಬಾಲಿವುಡ್‌ ಸ್ಟಾರ್‌ ನಟ ಅಜಯ್ ದೇವಗನ್ ಅಭಿನಯದ ಭೋಲಾ ಚಿತ್ರ ಟೀಸರ್‌ ರಿಲೀಸ್‌ ಆಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಕಾಲಿವುಡ್‌ ಬ್ಲಾಕ್ಬಸ್ಟರ್‌ ಸಿನಿಮಾ ʼಕೈಥಿʼಯ ಹಿಂದಿ ರಿಮೇಕ್ ಬೋಲಾ. ತಮಿಳು ಕೈಥಿಯಲ್ಲಿ ಕಾರ್ತಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಹಿಂದಿ ರಿಮೇಕ್‌ ಭೋಲಾದಲ್ಲಿ ಅಜಯ್ ಮಿಂಚಿದ್ದಾರೆ. 

ʼಹತ್ತು ವರ್ಷಗಳಲ್ಲಿ ತನ್ನ ಮಗಳಿಗೆ ಪ್ರೀತಿಯನ್ನು ನೀಡದ ತಂದೆ ಇದೀಗ ಒಂದು ರಾತ್ರಿಯಲ್ಲಿ ಜಗತ್ತಿಗೆ ಪ್ರೀತಿ ನೀಡಲು ಬಯಸಿದ್ದಾನೆʼ ಎಂದು ಅಜಯ್ ದೇವಗನ್ ಅವರ ಧ್ವನಿಯೊಂದಿಗೆ ಟೀಸರ್ ಪ್ರಾರಂಭವಾಗುತ್ತದೆ. ಮೊದಲ ಬಾರಿಗೆ ದೇವಗನ್ ಟ್ರಕ್ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್‌ನಲ್ಲಿ ವಿಲನ್‌ಗಳು ಪೊಲೀಸರನ್ನು ರಕ್ಷಸಿ ಕರೆತರುವ ಅಜಯ್‌ ಲಾರಿಯನ್ನು ಫಾಲೋ ಮಾಡುವಾಗ ನಡೆಯುವ ಫೈಟ್‌ ಸಿಕ್ವೇನ್ಸ್‌ಗಳನ್ನು ತೋರಿಸಲಾಗಿದೆ.

ಇದನ್ನೂ ಓದಿ: ಕ್ರೈಮ್ ಥ್ರಿಲ್ಲರ್ ಜಾನರ್ ಸಿನಿಮಾ "ಜ್ಯೂಲಿಯೆಟ್ 2" ಟೀಸರ್ ರಿಲೀಸ್...!

ಇನ್ನು ಭೋಲಾದಲ್ಲಿ ನಟಿ ಟಬು ಹಿರಿಯ ಪೋಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದೀಪಕ್ ಡೊಬ್ರಿಯಾಲ್ ವಿಲನ್ ಪಾತ್ರದಲ್ಲಿ ಮಿಂಚಿದ್ದಾರೆ. ಈ ಚಿತ್ರದಲ್ಲಿ ನಟಿಸುವುದರ ಜೊತೆಗೆ ಅಜಯ್ ನಿರ್ದೇಶನವನ್ನೂ ಕೂಡ ಮಾಡಿದ್ದಾರೆ. ಇನ್ನು ಟೀಸರ್‌ಗೆ ಅಜಯ್‌ ಅಭಿಮಾನಿಗಳು ಕಾಮೆಂಟ್‌ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಅಲ್ಲದೆ ಈ ಸಿನಿಮಾ ಬಾಲಿವುಡ್‌ ʼಬ್ಲಾಕ್‌ಬಸ್ಟರ್ʼ ಆಗುತ್ತೆ ಅಂತ ಹೊಗಳಿದ್ದಾರೆ.

ಲೋಕೇಶ್ ಕನಗರಾಜ್ ನಿರ್ದೇಶನದ ಕೈಥಿ ಚಿತ್ರದಲ್ಲಿ ಕಾರ್ತಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಭೋಲಾ ಸಿನಿಮಾವನ್ನು ಹೈದರಾಬಾದ್, ಮಧ್ ಐಲ್ಯಾಂಡ್, ಖಾರ್ಘರ್, ಮುಂಬೈ ಮತ್ತು ವಾರಣಾಸಿಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಕಳೆದ ವರ್ಷದ ಕೊನೆಯಲ್ಲಿ ಚಿತ್ರೀಕರಣ ಮುಗಿದಿದೆ. ಭೋಲಾ ಮಾರ್ಚ್ 30, 2023 ರಂದು ಥಿಯೇಟರ್‌ನಲ್ಲಿ ಬಿಡುಗಡೆಯಾಗಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News