ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್ ವಿಚ್ಛೇದನದ ವದಂತಿ ನಿಜವೇ? ಅನಂತ್ ಅಂಬಾನಿ ಮದುವೆಯಲ್ಲಿ ಹೊರಬಿತ್ತು ಬಿಗ್‌ ಸಿಕ್ರೇಟ್!

Aishwarya Rai-Abhishek Bachchan: ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಇಡೀ ಬಚ್ಚನ್ ಕುಟುಂಬವೇ ಕಾಣಿಸಿಕೊಂಡಿತ್ತು. ಆದರೆ ಐಶ್ವರ್ಯಾ ಮತ್ತು ಅಭಿಷೇಕ್ ಬಚ್ಚನ್ ಇಬ್ಬರೂ ಪ್ರತ್ಯೇಕವಾಗಿ ಆಗಮಿಸಿದ್ದಾರೆ.. 

Written by - Savita M B | Last Updated : Jul 13, 2024, 10:58 AM IST
  • ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಯಲ್ಲಿ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಭಾಗವಹಿಸಿದ್ದರು
  • ಬಚ್ಚನ್ ಕುಟುಂಬದೊಂದಿಗೆ ಐಶ್ವರ್ಯಾ ಅವರನ್ನು ನೋಡದ ನಂತರ ನೆಟಿಜನ್‌ಗಳು
ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್ ವಿಚ್ಛೇದನದ ವದಂತಿ ನಿಜವೇ? ಅನಂತ್ ಅಂಬಾನಿ ಮದುವೆಯಲ್ಲಿ ಹೊರಬಿತ್ತು ಬಿಗ್‌ ಸಿಕ್ರೇಟ್! title=

Anant Ambani wedding: ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಯಲ್ಲಿ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಈ ಅದ್ಧೂರಿ ವಿವಾಹದಲ್ಲಿ ಬಾಲಿವುಡ್ ಜೊತೆಗೆ ದಕ್ಷಿಣದ ಅನೇಕ ಖ್ಯಾತನಾಮರು ಭಾಗವಹಿಸಿದ್ದರು. ಅನಂತ್ ಮತ್ತು ರಾಧಿಕಾ ಅವರನ್ನು ಆಶೀರ್ವದಿಸಲು ಬಚ್ಚನ್ ಕುಟುಂಬ ಕೂಡ ಬಂದಿತ್ತು. ಈ ಅವಧಿಯಲ್ಲಿ ಇಡೀ ಬಚ್ಚನ್ ಕುಟುಂಬ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿತ್ತು. 

ಈ ವಿಡಿಯೋದಲ್ಲಿ ಅಮಿತಾಭ್ ಜೊತೆಗೆ ಜಯಾ ಅಭಿಷೇಕ್, ಬಿಗ್ ಬಿ ಮಗಳು ಶ್ವೇತಾ ಮತ್ತು ಅವರ ಅಳಿಯ ಕೂಡ ಕಾಣಿಸಿಕೊಂಡಿದ್ದಾರೆ. ಅಮಿತಾಬ್ ಬಚ್ಚನ್ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ ಮತ್ತು ಅವರ ಮೊಮ್ಮಗ ಅಗಸ್ತ್ಯ ನಂದಾ ಕೂಡ ಕಾಣಿಸಿಕೊಂಡಿದ್ದಾರೆ. ಆದರೆ ಐಶ್ವರ್ಯಾ ರೈ ಬಚ್ಚನ್ ಕುಟುಂಬದೊಂದಿಗೆ ಕಾಣಿಸಿಕೊಂಡಿಲ್ಲ.. ಐಶ್ವರ್ಯಾ ತನ್ನ ಮಗಳು ಆರಾಧ್ಯ ಜೊತೆ ಮದುವೆಗೆ ಆಗಮಿಸಿದ್ದಾರೆ ಎನ್ನುವ ವರದಿಗಳು ಲಭ್ಯವಾಗಿವೆ.. ಇದಲ್ಲದೇ ಈ ಸಂಬಂಧ ವಿಡಿಯೋಗಳು ಸಹ ಸೋಷಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿವೆ.. 

ಇದನ್ನೂ ಓದಿ-ಕೆತ್ತಿದ ಶಿಲ್ಪದಂತೆ ಕಂಡ ರಾಧಿಕಾ ಮರ್ಚೆಂಟ್‌..! ಲೆಹಂಗಾ ಧರಿಸಿ ರಾಣಿಯಂತೆ ಮೆರೆದ ಅಂಬಾನಿ ಸೊಸೆ

ಬಚ್ಚನ್ ಕುಟುಂಬದೊಂದಿಗೆ ಐಶ್ವರ್ಯಾ ಅವರನ್ನು ನೋಡದ ನಂತರ ನೆಟಿಜನ್‌ಗಳು ಶಾಕ್‌ ಆಗಿ, ವಿವಿಧ ರೀತಿಯ ಪ್ರಶ್ನೆಗಳನ್ನು ಕೇಳಿದ್ದಾರೆ. ಒಬ್ಬ ಬಳಕೆದಾರ.. 'ಐಶ್ವರ್ಯಾ ಮತ್ತು ಅವರ ಮಗಳು ಎಲ್ಲಿದ್ದಾರೆ? ಮತ್ತೊಬ್ಬರು 'ಅವರು ಐಶ್ವರ್ಯ ಮತ್ತು ಆರಾಧ್ಯ ಅವರನ್ನು ದೂರವಿಟ್ಟಿದ್ದಾರೆʼ ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು, 'ಐಶ್ವರ್ಯಾ ನಾಪತ್ತೆಯಾಗಿದ್ದಾರೆ, ಆಕೆ ಇಲ್ಲದೆ ಕುಟುಂಬ ಅಪೂರ್ಣವಾಗಿದೆ' ಎಂದು ಪ್ರತಿಕ್ರಿಯಿಸಿದ್ದಾರೆ.

ಇನ್ನು ಜುಲೈ 12 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅನಂತ್ ಮತ್ತು ರಾಧಿಕಾ ಜುಲೈ 13 ರಂದು ಮಂಗಳಕರ ಆಶೀರ್ವಾದ ಸಮಾರಂಭವನ್ನು ಆಯೋಜಿಸಿಕೊಂಡಿದ್ದಾರೆ.. ಈ ಸಮಯದಲ್ಲಿ ನವ ದಂಪತಿಗಳು ಹಿರಿಯರ ಆಶೀರ್ವಾದ ಪಡೆಯುತ್ತಾರೆ. ಇದಾದ ಬಳಿಕ ಜುಲೈ 14ರಂದು ವರ್ಲ್ಡ್ ಜಿಯೋ ಸೆಂಟರ್ ನಲ್ಲಿ ಅದ್ಧೂರಿ ಆರತಕ್ಷತೆ ಏರ್ಪಡಿಸಲಾಗಿದೆ. ಭಾರತದೊಂದಿಗೆ ವಿಶ್ವದ ಹಲವು ಜನಪ್ರಿಯ ವ್ಯಕ್ತಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಮುಖೇಶ್ ಅಂಬಾನಿ ತಮ್ಮ ಮಗ ಅನಂತ್ ಮದುವೆಗೆ ಸುಮಾರು 2500 ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದಾರೆ ಎಂಬುದು ಗಮನಾರ್ಹ.

ಇದನ್ನೂ ಓದಿ-ನನ್ನ ಸಿನಿಮಾಗಳು ಸೋತರೆ ಅನೇಕರು ಸಂಭ್ರಮಿಸುತ್ತಾರೆ.. ಸ್ಟಾರ್ ನಟನ ಸೆನ್ಸೇಷನಲ್ ಕಾಮೆಂಟ್!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News